ಇದು ಕ್ರಿಸ್ಮಸ್ ಸಮಯ. ಕ್ರಿಸ್ಮಸ್ ಹಬ್ಬವನ್ನು ಭಾರತ ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಉಡುಗೊರೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು, ರುಚಿರಕವಾದ ಖ್ಯಾದ್ಯಗಳನ್ನು ಸವಿಯಲು ಹಾಗೂ ಕ್ರಿಸ್ಮಸ್ ಟ್ರೀ ಗಳನ್ನು ಡೆಕೋರ್ ಮಾಡುವ ಸಮಯವಾಗಿದೆ. ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಕ್ರಿಸ್ಚಿಯನ್ನರ ಹಬ್ಬವಾದರೂ ಜಗತ್ತಿನಾದ್ಯಂತ ಎಲ್ಲಾ ಜನರು ಆಚರಿಸುವಂತಹ ಹಬ್ಬವಾಗಿದೆ. ಭಾರತದಲ್ಲಿಯೂ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳಿಂದ ಹಿಡಿದು ಬೀದಿ ಬೀದಿಗಳಲ್ಲಿ ಕ್ರಿಸ್ಮಸ್ ಸಮಯದಲ್ಲಿ ಲೈಟಿಂಗ್ಸ್ ಬೆಳಗಲಾಗುತ್ತದೆ.
ಇದನ್ನು ಓದಿ:Christmas 2022: ಚಾಕೊಲೇಟ್ ವಾಲ್‌ನಟ್ ಬ್ರೌನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಹಬ್ಬದಂದು ನಿಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ ಶುಭಾಶಯಯಗಳನ್ನು ಕಳುಹಿಸುವುದು ರೂಢಿಯಾಗಿದೆ. ಇಂಗ್ಲೀಷ್‌ನ ‘ಮೇರಿ ಕ್ರಿಸ್ಮಸ್’ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಶುಭಾಶಯವಾಗಿದ್ದರೂ, ನಮ್ಮ ಸ್ವಂತ ಮಾತೃ ಭಾಷೆಯಲ್ಲಿ ಹಾರೈಸಿದಾಗ ಅದು ತುಸು ಹೆಚ್ಚೇ ಮನಸ್ಸಿಗೆ ಹತ್ತಿರವಾಗುತ್ತದೆ. ಇಲ್ಲಿವೆ ಕೆಲವು ಭಾರತೀಯ ಭಾಷೆಗಳ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಇಲ್ಲಿದೆ
ಕನ್ನಡ : ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ತಮಿಳು : ಇನ್ಯಾಸ್ ಕ್ರಿಸ್ಮಸ್
ಪಂಜಾಬಿ : ಹ್ಯಾಪಿ ಟೆ ಕ್ರಿಸ್ಮಸ್
ಮಲಯಾಳಂ : ಸಂತೇಸಕರಮಯ ಕ್ರಿಸ್ಮಸ್
ಉರ್ದು : ಕ್ರಿಸ್ಮಸ್ ಮುಬಾರಕ್
ಬೆಂಗಾಲಿ : ಸುಭಾ ಬರಾದಿನ್
ಗುಜರಾತಿ : ಮೇರಿ ಕ್ರಿಸಮಾಸ
ತೆಲುಗು : ಕ್ರಿಸ್ಮಸ್ ಸುಭಾಕಾಂಕ್ಸಾಲು
ಒಡಿಯಾ : ಸುಖಮಯ ಕ್ರಿಸ್ಮಸ್
ಖಾಸಿ : ಕ್ರಿಸ್ಮಸ್ ಬಸುಕ್ & ಸ್ನೆಮ್ ತಿಮ್ಮಾಯಿ ಬಸುಕ್
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Sat, 24 December 22