Chicken Skin: ಚಳಿಗಾಲದಲ್ಲಿ ಶುಷ್ಕ ತ್ವಚೆಯ ಆರೈಕೆಗೆ ಇಲ್ಲಿದೆ ಉತ್ತಮ ಸಲಹೆ
ಚಳಿಗಾಲದಲ್ಲಿ ತ್ಚಚೆಯು ತನ್ನ ಹೊಳಪನ್ನು ಕಳೆದುಕೊಂಡು ಚರ್ಮ ಒಣಗಿದಂತಾಗುತ್ತದೆ. ಇದನ್ನು ಚಿಕನ್ ಸ್ಕಿನ್ ಅಥವಾ ಸ್ಟಾಬೆರಿ ಸ್ಕಿನ್ ಎಂದು ಕರೆಯುತ್ತಾರೆ. ಶುಷ್ಕ ಚರ್ಮವು ಹೆಚ್ಚಾಗಿ ವ್ಯಾಕ್ಸ್ ಮತ್ತು ಶೇವ್ ಮಾಡುವ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಚರ್ಮದ ಸ್ಥಿತಿಯಾಗಿದೆ.
ಚಳಿಗಾಲದಲ್ಲಿ ತ್ಚಚೆಯು ತನ್ನ ಹೊಳಪನ್ನು ಕಳೆದುಕೊಂಡು ಚರ್ಮ ಒಣಗಿದಂತಾಗುತ್ತದೆ. ಇದನ್ನು ಚಿಕನ್ ಸ್ಕಿನ್ (Chicken Skin) ಅಥವಾ ಸ್ಟಾಬೆರಿ ಸ್ಕಿನ್ ಎಂದು ಕರೆಯುತ್ತಾರೆ. ಶುಷ್ಕ ಚರ್ಮವು ಹೆಚ್ಚಾಗಿ ವ್ಯಾಕ್ಸ್ ಮತ್ತು ಶೇವ್ ಮಾಡುವ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಚರ್ಮದ ಸ್ಥಿತಿಯಾಗಿದೆ. ಮತ್ತು ಇದು ಸಾಮಾನ್ಯವಾಗಿ ಅನುವಂಶಿಕವಾದದ್ದು ಎಂದು ತಜ್ಞರು ಹೇಳುತ್ತಾರೆ.ಈ ಚಳಿಗಾಲದಲ್ಲಿ ಹಬ್ಬಗಳು ಮದುವೆ ಸಂಭ್ರಮ ಕಾರ್ಯಕ್ರಮಗಳು ಹೆಚ್ಚಾಗಿರುತ್ತದೆ. ಆದರೆ ನಮ್ಮ ಚರ್ಮಕ್ಕೆ ಈ ಚಳಿಗಾಲವು ಉತ್ತಮವಾಗಿಲ್ಲ. ಶುಷ್ಕತೆ ಮತ್ತು ತುರಿಕೆಯಂತಹ ಹಲವಾರು ಚರ್ಮದ ಸಮಸ್ಯೆಗಳು ಈ ಸೀಸನ್‌ನಲ್ಲಿ ಹೆಚ್ಚಾಗಿ ಉಲ್ಬಣಗೊಳ್ಳುತ್ತದೆ. ಮತ್ತು ಅನೇಕ ಚರ್ಮ ರೋಗಗಳಿಗೆ ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕಾಗುತ್ತದೆ.
ಈ ಸಮಯದಲ್ಲಿ ಕೆರಾಟೋಸಿಸ್ ಪಿಲಾರಿಸ್ ಎಂಬ ಚರ್ಮ ಕಾಯಿಲೆ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಚಿಕನ್ ಸ್ಕಿನ್ ಅಥವಾ ಸ್ಟಾಬೆರಿ ಸ್ಕಿನ್ ಎಂದು ಕರೆಯಲ್ಪಡುವ ಕೆರಾಟೋಸಿಸ್ ಪಿಲಾರಿಸ್ ಸಮಸ್ಯೆಯು ಕೂದಲು ಕಿರು ಚೀಲಗಳ ಎಣ್ಣೆ, ಬ್ಯಾಕ್ಟೀರಿಯಾ ಮತ್ತು ಸತ್ತ ಚರ್ಮದಿಂದ ಹೊರಬರಲು ಸಾಧ್ಯವಾಗದಿರುವಾಗ ಸಂಭವಿಸುತ್ತದೆ. ಇದು ಚರ್ಮದಲ್ಲಿ ಚುಕ್ಕೆಗಳು, ಕಪ್ಪು ಕಲೆಗಳನ್ನು ರೂಪಿಸುತ್ತದೆ. ಮತ್ತು ತೋಳುಗಳು ಮತ್ತು ತೊಡೆಯ ಹಿಂಭಾಗದಲ್ಲಿ ಉಬ್ಬುಗಳು ಕಂಡು ಬರುತ್ತವೆ ಎಂದು ಆಸ್ಟರ್ ಸಿ.ಎಂ.ಐ ಆಸ್ಪತ್ರೆಯ ವೈದ್ಯಕೀಯ ಮತ್ತು ಕಾಸ್ಮೆಟಿಕ್ ಡರ್ಮಟಾಲಜಿಯ ಸಲಹೆಗಾರರಾದ ಡಾ.ಶಿರೀನ್ ಫುರ್ಟಾಡೋ ಹೇಳಿದ್ದಾರೆ.
ಇದನ್ನು ಓದಿ:Skin Care Tip: ಚಳಿಗಾಲದಲ್ಲಿ ತ್ವಚೆಯ ಆರೈಕೆಗೆ ಸೂಕ್ತವಾಗಿದೆ ಈ ಸೂಪರ್ ದೇಸಿ ಫುಡ್‌ಗಳು
ಕೆಲವೊಮ್ಮೆ ಆಗಾಗ್ಗೆ ತಮ್ಮ ಕೂದಲನ್ನು ವ್ಯಾಕ್ಸ್ ಮಾಡುವ ಅಥವಾ ಶೇವ್ ಮಾಡುವ ಮಹಿಳೆಯರಲ್ಲಿ ಈ ಸ್ಥಿತಿಯು ಸಾಮಾನ್ಯವಾಗಿದೆ ಎಂದು ಡಾ.ನಿಶಿತಾ ಕ್ಲೀನಿಕ್ ಫಾರ್ ಸ್ಕಿನ್, ಹೇರ್ ಆಂಡ್ ಆಸ್ಥೆಟಿಕ್ ಸಂಸ್ಥೆಯ ಸಂಸ್ಥಾಪಕರಾದ ಡಾ.ನಿಶಿತಾ ರಂಕ ಹೇಳಿಕೆ ನೀಡಿದ್ದಾರೆ.
ಚಳಿಗಾಲದಲ್ಲಿ ಚಿಕನ್ ಸ್ಕಿನ್‌ನ್ನು ಹೇಗೆ ನಿರ್ವಹಿಸುವುದು ?
1.ತ್ವರಿತವಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ
2. ಚರ್ಮವನ್ನು ಸೌಮ್ಯವಾಗಿ ಕಾಪಡಿಕೊಳ್ಳಿ ಮತ್ತು ಗಡಸು ಸಾಬೂನು ಮತ್ತು ಮೈಲ್ಡ್ ಫೋಮಿಂಗ್ ಕ್ಲೆನ್ಸರ್‌ಗಳನ್ನು ಬಳಸಬೆಡಿ.
3. ಕ್ರೀಮ್‌ಗಳನ್ನು ಬಳಸುವಾಗ ಯೂರಿಯಾ, ಲ್ಯಾಕ್ಟಿಕ್ ಆಸಿಡ್, ಸ್ಯಾಲಿಸಿಲಿಕ್ ಆಸಿಡ್ ಹೊಂದಿರುವ ಕೆರಾಟೋಲಿಕ್ ಕ್ರೀಮ್‌ಗಳನ್ನು ಬಳಸಿ. ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡಲು ಈ ಉತ್ಪನ್ನಗಳನ್ನು ಮಾಯಿಶ್ಚರೈಸರ್‌ಗಳ ಜೊತೆಗೆ ಬಳಸಬಹುದು.
4.ಸಿಂಥೆಟಿಕ್ ಬಟ್ಟೆಗಳನ್ನು ಬಳಸಬೇಡಿ ಅದು ಚರ್ಮವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.
5.ಸ್ನಾನ ಮಾಡುವಾಗ ಸ್ಕಬ್ ಮಾಡುವುದನ್ನು ಅಥವಾ ಲೂಫಾಗಳನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಇದು ಶೇವಿಂಗ್ ಅಥವಾ ವ್ಯಾಕ್ಸಿಂಗ್ ಹಾಗೆ ಇರುತ್ತದೆ.
6.ಚರ್ಮವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಮಾಯಿಶ್ಚರೈರ್ಸ್ಗಳನ್ನು ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sat, 24 December 22