ದಾಲ್ಚಿನ್ನಿಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಇದು ಒಳ್ಳೆಯ ಪರಿಮಳದ ಜೊತೆಗೆ ರುಚಿಯನ್ನು ನೀಡುತ್ತದೆ. ಇದೊಂದೇ ಅಲ್ಲದೇ ಆರೋಗ್ಯ ಸುಧಾರಣೆಗೂ ಸಹ ದಾಲ್ಚಿನ್ನಿ ತುಂಬಾ ಒಳ್ಳೆಯದು. ದಾಲ್ಚಿನ್ನಿ ನೀರು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ.
ದಾಲ್ಚಿನ್ನಿ ಆರೋಗ್ಯ ಮತ್ತು ಶಕ್ತಿಯುತ ಔಷಧೀಯ ಗುಣಗಳನ್ನು ಹೊಂದಿದೆ. ಜ್ವರ, ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಿಗೆ ದಾಲ್ಚಿನ್ನಿ ನೀರು ಪ್ರಯೋಜನಕಾರಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಿಸಿ ನೀರಿನಲ್ಲಿ ದಾಲ್ಚಿನ್ನಿ ಸೇರಿಸುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಸಂಶೋಧನೆಯ ಪ್ರಕಾರ ನಿಮ್ಮ ದೈನಂದಿನ ಆಹಾರದಲ್ಲಿ 1 ಗ್ರಾಂ ದಾಲ್ಚಿನ್ನಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಸಹಾಯಕ. ದಾಲ್ಚಿನ್ನಿ ಆಂಟಿಬಯೋಟಿಕ್, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.
ಒಂದು ಲೀಟರ್ ನೀರಿಗೆ 1 ದಾಲ್ಚಿನ್ನಿ ಕಡ್ಡಿಯನ್ನು ಸೇರಿಸಿ. ಚೆನ್ನಾಗಿ ಕುದಿಸಿ. ಅದಕ್ಕೆ ನಿಂಬೆ ರಸವನ್ನು ಸೇರಿಸುವ ಮೂಲಕ ದಾಲ್ಚಿನ್ನಿ ನೀರನ್ನು ಸವಿಯಬಹುದು. ಈ ರೀತಿ ವಾರಕ್ಕೆ ಒಮ್ಮೆ ಸೇವಿಸುವ ಅಭ್ಯಾಸ ಒಳ್ಳೆಯದು. ನೀವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಆರೋಗ್ಯದಲ್ಲಿ ಏನೇ ಏರು ಪೇರು ಕಂಡು ಬಂದರೂ ವೈದ್ಯರಲ್ಲಿ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ.
ಇದನ್ನೂ ಓದಿ: