AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care Tips: ಮನೆಯಲ್ಲೇ ತಯಾರಿಸಬಹುದಾದ ಫೇಸ್ ಪ್ಯಾಕ್​ಗಳಿವು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು

ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸರಳ ಮಾರ್ಗಗಳು. ಇವುಗಳನ್ನು ಅನುಸರಿಸುವ ಮೂಲಕ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

Skin Care Tips: ಮನೆಯಲ್ಲೇ ತಯಾರಿಸಬಹುದಾದ ಫೇಸ್ ಪ್ಯಾಕ್​ಗಳಿವು; ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಸುಲಭ ಮಾರ್ಗಗಳು
ಸಂಗ್ರಹ ಚಿತ್ರ
TV9 Web
| Updated By: shruti hegde|

Updated on: Oct 31, 2021 | 12:30 PM

Share

ಸುಂದರವಾಗಿರಬೇಕು ಎಂಬುದು ಎಲ್ಲರ ಆಸೆ. ನಿಮ್ಮ ಸೌಂದರ್ಯ ಮತ್ತು ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಔಷಧಿಗಳನ್ನು ಹುಡುಕುತ್ತಿರುತ್ತೀರಿ. ನೀವು ನಿಮ್ಮ ಚರ್ಮದ ಆರೈಕೆ ಮತ್ತು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಬಯಸುತ್ತಿದ್ದರೆ ಇಲ್ಲಿದೆ ಕೆಲವು ಟಿಪ್ಸ್​ಗಳು. ಇವುಗಳು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ವಾತಾವರಣದ ಏರು- ಪೇರು, ಧೂಳಿನಿಂದ ಚರ್ಮವು ಹಾನಿಗೊಳಗಾಗುತ್ತದೆ. ಚರ್ಮದ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಿರುವಾಗ ನಿಮ್ಮ ಮುಖ ಸುಂದರವಾಗಿ ಕಾಣಲು ಮತ್ತು ಮುಖದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಕೆಲವು ಮಾರ್ಗಗಳು ನಿಮಗಾಗಿ.

ಆಯುರ್ವೇದ ತಜ್ಞರಾದ ಡಾ. ಅಪರ್ಣಾ ಪದ್ಮನಾಭ್ ಮನೆಯಲ್ಲಿಯೇ ನೈಸರ್ಗಿಕವಾದ ಫೇಸ್ ಪ್ಯಾಕ್​ಗಳನ್ನು ಹೇಗೆ ತಯಾರಿಸಬಹುದು ಎಂದು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಕೆಲವು ಟಿಪ್ಸ್​ಗಳು ನಿಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಮನೆಯಲ್ಲಿಯೇ ಸರಳ ವಿಧಾನದಲ್ಲಿ ಇವುಗಳನ್ನು ತಯಾರಿಸಬಹುದು.

ಆರೋಗ್ಯಕರ ಮತ್ತು ಹೊಳೆಯುವ ಚರ್ಮಕ್ಕಾಗಿ ಈ ಸಲಹೆಗಳು

ವಿಧಾನ 1 ಮೊಸರು 1 ಚಮಚ, ಕಡೆಲೆ ಹಿಟ್ಟು ಮುಕ್ಕಾಲು ಚಮಚ ಮತ್ತು ಚಿಟಿಕೆ ಅರಿಶಿಣ ಸೇರಿಸಿ ಮಿಶ್ರಣ ಮಾಡಿ. ಬಳಿಕ ಅದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ಫೇಸ್ ಪ್ಯಾಕ್ ಒಣಗುವವರೆಗೆ ಹಾಗೆಯೇ ಇರಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿ.

ವಿಧಾನ 2 ಜೇನುತುಪ್ಪ 1 ಚಮಚ, ಕಡಲೆ ಹಿಟ್ಟು ಅರ್ಧ ಚಮಚ, ಚಿಟಿಕೆ ಅರಿಶಿಣ ಸೇರಿಸಿ ಮಿಶ್ರಣ ಮಾಡಿ. ಅದನ್ನು ಮುಖದ ಮೇಲೆ ಅನ್ವಯಿಸಿ. 10 ನಿಮಿಷಗಳ ಕಾಲ ಹಾಗೆಯೇ ಇರಿ. ಬಳಿಕ ಉಗುರು ಬೆಚ್ಚಗಿನ ನೀರಿನ ಮೂಲಕ ತೊಳೆಯಿರಿ.

ವಿಧಾನ 3 ಓಟ್ಸ್ ಹಿಟ್ಟು, ಬಿಸಿ ಹಾಲು ಮಿಶ್ರಣ ಮಾಡಿ ಉಗುರು ಬೆಚ್ಚಗಿರುವಾಗಲೇ ಮುಖಕ್ಕೆ ಅನ್ವಯಿಸಿ. ಫೆಸ್ ಪ್ಯಾಕ್ ಒಣಗಿದ ಬಳಿಕ ಅದನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಮೂರು ಬಾರಿಯಾದರೂ ಮುಖಕ್ಕೆ ಈ ಪೇಸ್ಟ್ ಅನ್ವಯಿಸಬೇಕು.

ವಿಧಾನ 4 ಗೋಧಿ ಹಿಟ್ಟು 1 ಚಮಚ, ಹಾಲು, ಬಾದಾಮಿ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಫೇಸ್ ಪ್ಯಾಕ್ ಒಣಗಿದ ಬಳಿಕ ಮುಖ ತೊಳೆದುಕೊಳ್ಳಿ. ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.

ವಿಧಾನ 5 ಬಾಳೆಹಣ್ಣು, ಸ್ವಲ್ಪ ಜೇನುತುಪ್ಪ ಸೇರಿಸಿ ಅದಕ್ಕೆ ಅರ್ಧ ಚಮಚ ಅಕ್ಕಿ ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಸೇರಿಸಿ. ನಂತ ಆ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇವುಗಳನ್ನು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ

Beauty Tips: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಆಹಾರ ಪದಾರ್ಥಗಳ ಮೊರೆ ಹೋಗುವುದು ಉತ್ತಮ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ