Curry Leaves Tea: ಕರಿಬೇವಿನ ಚಹಾದ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು
ಅಡುಗೆಯಲ್ಲಿ ಬಳಸುವ ಮೂಲಕ ಅಥವಾ ಕರಿಬೇವಿನ ಚಹಾ ಮಾಡಿ ಸವಿಯುವ ಮೂಲಕ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಅಡುಗೆಯಲ್ಲಿ ರುಚಿ ಹೆಚ್ಚಿಸಲು ಕರಿಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಒಳ್ಳೆಯ ಸುವಾಸನೆ ಮತ್ತು ರುಚಿಗಾಗಿ ಕರಿಬೇವಿನ ಎಲೆಗಳು ಹೆಚ್ಚು ಉಪಯುಕ್ತ. ಇದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅಡುಗೆಯಲ್ಲಿ ಬಳಸುವ ಮೂಲಕ ಅಥವಾ ಕರಿಬೇವಿನ ಚಹಾ ಮಾಡಿ ಸವಿಯುವ ಮೂಲಕ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಕರಿಬೇವಿನ ಚಹಾವು ಮಲಬದ್ಧತೆ, ಮಧುಮೇಹ, ಅತಿಸಾರ ಮತ್ತು ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯಕ. ಕರಿಬೇವಿನ ಚಹಾವನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ಚಹಾ ಸೇವನೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಕರಿಬೇವಿನ ಎಲೆಗಳು, ನೀರು, ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಿ ಕರಿಬೇವಿನ ಚಹಾವನ್ನು ತಯಾರಿಸಲಾಗುತ್ತದೆ. ಸುಮಾರು 30 ರಿಂದ 40 ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ. ಪಾತ್ರೆಯಲ್ಲಿ ಒಂದು ಲೋಟ ನೀರು ಹಾಗಿ ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ನೀರನ್ನು ಶೋಧಿಸಿ ಆ ನೀರಿಗೆ ರುಚಿಗೆ ತಕ್ಕಂತೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನೀವು ತಯಾರಿಸಿದ ಕರಿಬೇವಿನ ಚಹಾವನ್ನು ಸವಿಯಬಹುದು. ಖಾಲಿ ಹೊಟ್ಟೆಯಲ್ಲಿ ಈ ಕರಿಬೇವಿನ ಚಹಾ ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಕರಿಬೇವಿನ ಚಹಾದ ಆರೋಗ್ಯ ಪ್ರಯೋಜನಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳು ಕ್ಯಾನ್ಸರ್ನಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ದೇಹದ ಜೀವಕೋಶಗಳನ್ನು ಸ್ವತಂತ್ರ ರಾಡಿಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.
ಕರಿಬೇವಿನ ಎಲೆಯ ಚಹಾ ಸವಿಯವ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಕರಿಬೇವಿನ ಎಲೆಗಳ ಸೇವನೆಯು ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹದಂತಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗಿದೆ.
ಕರಿಬೇವಿನ ಎಲೆಗಳು ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಕರಿಬೇವು ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಈ ಚಹಾವನ್ನು ಕುಡಿಯುವುದರಿಂದ ವಾಂತಿ, ವಾಕರಿಕೆ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ.
ಕರಿಬೇವಿನ ಎಲೆಗಳು ನಿಮ್ಮ ಕೂದಲಿಗೆ ಉತ್ತಮವಾದ ಬೀಟಾ ಕ್ಯಾರೋಟಿನ್ ಮತ್ತು ಪ್ರೋಟೀನ್ಅನ್ನು ಹೊಂದಿರುತ್ತದೆ. ತಲೆ ಹೊಟ್ಟು ಮತ್ತು ಕೂದಲು ತೆಳುವಾಗುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ಜೊತೆಗೆ ಕಣ್ಣಿನ ಆರೋಗ್ಯ ಸುಧಾರಣೆಗೂ ಸಹ ಕರಿಬೇವಿನ ಎಲೆಗಳು ಸಹಾಯಕ. ವಿಟಮಿನ್ ಎ ಹೊಂದಿರುವುದರಿಂದ ಕಣ್ಣಿನ ಆರೊಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶವನ್ನು ಒದಗಿಸುತ್ತದೆ.
ಇದನ್ನೂ ಓದಿ:
Health Tips: ಬಿಸಿ ನೀರು ಕುಡಿಯುವಾಗ ಈ 3 ಪದಾರ್ಥಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್ಗಳ ಬಿಸ್ಕತ್ನಲ್ಲಿವೆ ಕ್ಯಾನ್ಸರ್ಕಾರಕ ಅಂಶ