ಹಾಲು ಆವಿಯಾಗುವ ವಿಧಾನ ಕಲಬೆರಕೆಯನ್ನು ಬಹಿರಂಗಪಡಿಸುತ್ತದೆ: IISc ಅಧ್ಯಯನ
ಬಳಕೆ ಮಾಡುತ್ತಿರುವ ಹಾಲು ಶುದ್ಧವಾಗಿದೆಯೇ? ಅಥವಾ ಕಲಬೆರಿಕೆಯದ್ದೇ? ಎಂಬುದನ್ನು ತಿಳಿದುಕೊಳ್ಳಲು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಶೋಧನೆ ಕೈಗೊಂಡಿದೆ.
ರಾಸಾಯನಿಕಗಳು ಮತ್ತು ನೀರು ಸೇರಿಸಿ ಹಾಲು ಕಲರಬೆರಿಕೆ ಮಾಡಲಾಗುತ್ತಿದೆ ಎಂಬ ಸುದ್ದಿಯನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇದು ಗ್ರಾಹಕರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಬಳಕೆ ಮಾಡುತ್ತಿರುವ ಹಾಲು ಶುದ್ಧವಾಗಿದೆಯೇ? ಅಥವಾ ಕಲಬೆರಿಕೆಯದ್ದೇ? ಎಂಬುದನ್ನು ತಿಳಿದುಕೊಳ್ಳಲು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಶೋಧನೆ ಕೈಗೊಂಡಿದೆ. ಹಾಲು ಆವಿಯಾದ ನಂತರ ಶೇಖರಣೆಯ ಮಾದರಿಗಳನ್ನು ಅಧ್ಯಯನ ನಡೆಸುವ ಮೂಲಕ ಸಂಶೋಧನೆ ನಡೆಸಲಾಗಿದೆ. ಇದು ಅತ್ಯಂತ ಕಡಿಮೆ ವೆಚ್ಚದ ಪರಿಣಾಮಕಾರಿ ವಿಧಾನ ಎಂದು peer-reviewed journal, ACS Omega ದಲ್ಲಿ ಪ್ರಕಟಿಸಲಾಗಿದೆ.
ಹಾಲಿನಲ್ಲಿ ಕಲಬೆರಿಕೆಯಾಗಿದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಸಂಶೋಧಕರು ಆವಿಯಾದ ನಂತರ ಉಳಿದ ಶೇಖರಣೆಯ ಮಾದರಿಗಳನ್ನು ಅಧ್ಯಯನ ಮಾಡಿದರು. ಹಾಲಿನಂತಹ ದ್ರವ ವಸ್ತುಗಳು ಸಂಪೂರ್ಣವಾಗಿ ಆವಿಯಾದ ಬಳಿಕ ಸಣ್ಣ ಕಣಗಳು ಉಳಿಯುತ್ತದೆ. ಇವುಗಳ ಶೇಖರಣೆಯ ಆಧಾರದ ಮೇಲೆ ಅಧ್ಯಯನ ನಡೆಸಲಾಗಿದೆ.
ನೀರು ಅಥವಾ ಯೂರಿಯಾದೊಂದಿಗೆ ಸೇರಿರುವ ಹಾಲು ಮತ್ತು ಶುದ್ಧವಾದ ಹಾಲು ವಿಭಿನ್ನವಾದ ಮಾದರಿಯನ್ನು ತೋರಿಸಿದೆ. ಕಲಬೆರಕೆಯಿಲ್ಲದ ಹಾಲಿನಲ್ಲಿ ಆವಿಯಾಗುವ ರೀತಿ ಕೇಂದ್ರೀಯವಾಗಿತ್ತು. ಕಲಬೆರಕೆಯಾದ ಹಾಲಿನಲ್ಲಿ ನೀರು ಎಷ್ಟು ಸೇರಿಸಲ್ಪಟ್ಟಿದೆ ಎಂಬುದರ ಆಧಾರದ ಮೇಲೆ ಆವಿಯಾದ ಬಳಿಕ ಶೇಖರಣೆಯ ಮಾದರಿಯಲ್ಲಿ ಬದಲಾಯಿತು ಎಂದು IISc ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಯೂರಿಯಾ ಕೇಂದ್ರ ಮಾದರಿಯನ್ನು (central pattern) ಬದಲಾಯಿಸಿತು. ಇದು ಭಾಷ್ಪಶೀಲವಲ್ಲದ ಘಟಕವಾದ್ದರಿಂದ ಅದು ಆವಿಯಾಗುವುದಿಲ್ಲ. ಅದರ ಬದಲಿಗೆ ಸ್ಪಟಿಕೀಕರಣಗೊಳಗ್ಳುತ್ತದೆ. ಆವಿಯಾಗುವ ಹಾಲಿನ ಪಾತ್ರೆಯಲ್ಲಿ ಪರಿಧಿಯ ಉದ್ದಕ್ಕೂ ವಿಸ್ತರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿಧಾನದಿಂದ IISc ಸಂಶೋಧಕರ ತಂಡವು ನೀರಿನ ಸಾಂದ್ರತೆಯನ್ನು ಶೇ 30ರಷ್ಟು ಮತ್ತು ದುರ್ಬಲಗೊಳಿಸಿದ ಹಾಲಿನಲ್ಲಿ ಶೇ 0.4ರಷ್ಟು ಕಡಿಮೆ ಯೂರಿಯಾ ಸಾಂದ್ರೆತೆಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಇದನ್ನು ಯಾವುದೇ ಸ್ಥಳದಲ್ಲಿಯೂ ಮಾಡಬಹುದು. ಯಾವುದೇ ನಿರ್ದಿಷ್ಟ ಪ್ರಯೋಗಾಲಯ ಬೇಕಂತಿಲ್ಲ. ದೂರದ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಬಳಸಲು ಸುಲಭದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಸಂಶೋಧಕ ವೀರಕೇಶ್ವರ ಕುಮಾರ್ ಹೇಳಿದ್ದಾರೆ.
ಹಾಲಿನ ಜೊತೆಗೆ ಇತರ ದ್ರವ ವಸ್ತುಗಳಲ್ಲಿಯೂ ಅಥವಾ ಪಾನೀಯಗಳಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಈ ತಂತ್ರವನ್ನು ಉಪಯೋಗಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಬಾಷ್ಪಶೀಲ ದ್ರವಗಳಲ್ಲಿನ ಕಲ್ಮಶಗಳನ್ನು ಪತ್ತೆ ಹಚ್ಚಲು ಈ ವಿಧಾನವನ್ನು ಬಳಸಬಹುದು. ಜೇನುತುಪ್ಪದಂತಹ ಉತ್ಪನ್ನಗಳಲ್ಲಿ ಕಲಬರಕೆ ಪತ್ತೆ ಹಚ್ಚಲು ಈ ವಿಧಾನವನ್ನು ವಿಸ್ತರಿಸಬೇಕಿದೆ ಎಂದು ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಷ್ಮಿತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎಲ್ಲಾ ಕಲಬೆರಕೆಗಳ ಮಾದರಿಗಳನ್ನು ಪರಿಶೀಲನೆಯ ನಂತರ ಅವುಗಳನ್ನು ಚಿತ್ರದ ಮೂಲಕ ವಿಶ್ಲೇಷಣೆ ಮಾಡಬಹುದು. ಉದಾಹರಣೆಗೆ ಕಲಬೆರಕೆಗಳನ್ನು ನಿಖರವಾಗಿ ಪತ್ತೆಹಚ್ಚಲು ಆವಿಯಾದ ನಂತರ ಉಳಿದ ಶೇಖರಣೆಯ ಮಾದರಿ ಫೋಟೋಗಳನ್ನು ಇತರ ಮಾದರಿಗಳೊಂದಿಗೆ ಹೋಲಿಸಬಹುದು. ಮುಂದಿನ ವಿಧಾನದಲ್ಲಿ ಹಾಲಿನೊಂದಿಗೆ ಎಣ್ಣೆಯಂತಹ ವಸ್ತುಗಳನ್ನು ಕಲಬೆರಕೆ ಮಾಡುವುದನ್ನು ಪರೀಕ್ಷಿಸಬಹುದು ಎಂದು ಸುಷ್ಮಿತಾ ಹೇಳಿದ್ದಾರೆ.
ಇದನ್ನೂ ಓದಿ:
World Heart Day: ಪಿಸಿಒಎಸ್ ನಿಮ್ಮ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ: ಅಧ್ಯಯನ