Coconut Oil: ನೀವೀಗ ಮನೆಯಲ್ಲೇ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಬಹುದು! ಇಲ್ಲಿದೆ ಹಂತ ಹಂತವಾದ ಮಾಹಿತಿ
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ಭಟ್'ಎನ್'ಭಟ್ ಅಡುಗೆ ಚಾನೆಲ್ನಲ್ಲಿ ಮನೆಯಲ್ಲಿ ಹೇಗೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು ಎಂಬುದನ್ನು ಹಂತ ಹಂತವಾಗಿ ತಿಳಿಸಿದ್ದಾರೆ.
ಕೊಬ್ಬರಿ ಎಣ್ಣೆಯನ್ನು (Coconut oil) ತೆಂಗಿನಕಾಯಿಯಿಂದ ಪಡೆಯಲಾಗುತ್ತದೆ. ಸಾಕಷ್ಟು ಜನ ಕೊಬ್ಬರಿ ಎಣ್ಣೆಯನ್ನು ಅಂಗಡಿಯಿಂದ (Grocery Shops) ಖರೀದಿಸುತ್ತಾರೆ. ಅಂಗಡಿಗಳಲ್ಲಿ ಸಾಕಷ್ಟು ನಕಲಿ ಬಾಟಲಿಗಳನ್ನು (Fake Coconut oil) ನಾವು ನೋಡಿದ್ದೇವೆ. ಹೆಸರು ಕೊಬ್ಬರಿ ಎಣ್ಣೆ ಎಂದು ಸೂಚಿಸಿದರೂ, ಬಳಸಿದಾಗ ಕೊಬ್ಬರಿ ಎಣ್ಣೆಯ ಘಮವಾಗಲಿ ರುಚಿಯಾಗಲಿ ಇರುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾದ ಭಟ್’ಎನ್’ಭಟ್ ಅಡುಗೆ ಚಾನೆಲ್ನಲ್ಲಿ ಮನೆಯಲ್ಲಿ ಹೇಗೆ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಬಹುದು ಎಂಬುದನ್ನು ಹಂತ ಹಂತವಾಗಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ಎಣ್ಣೆ ತಯಾರಿಸುವ ಘಟಕಗಳಲ್ಲಿ ಒಣಗಿದ ಕೊಬ್ಬರಿಯನ್ನು ಉಪಯೋಗಿಸಿ ಎಣ್ಣೆಯನ್ನು ತಯಾರಿಸುತ್ತಾರೆ. ಅರ್ಧ ಲೀಟರ್ ಎಣ್ಣೆಗೆ ಸುಮಾರು 6 ರಿಂದ 7 ಕೊಬ್ಬರಿ ಬೇಕಾಗಬಹದು. ಆದರೆ ಮನೆಯಲ್ಲಿ ಮಾಡುವಾಗ ನೀವು ತಾಜಾ ತೆಂಗಿನ ಕಾಯಿಯಿಂದಲೇ ಎಣ್ಣೆಯನ್ನು ತಯಾರಿಸಬಹದು. ಮನೆಯಲ್ಲಿ ಶುದ್ಧ ಕೊಬ್ಬರಿ ಎಣ್ಣೆ ತಯಾರಿಸಲು ಮೊದಲಿಗೆ ತೆಂಗಿನ ಕಾಯಿಯನ್ನು ತುರಿಯಿರಿ. ನಂತರ ತುರಿದ ಕಾಯಿಗೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚನ್ನಾಗಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಬಟ್ಟೆಯಲ್ಲಿ ಸೋಸಿ ಕಾಯಿಹಾಲು ತೆಗೆಯಿರಿ.
ಈ ಕಾಯಿ ಹಾಲನ್ನು ಒಂದು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಕಟ್ಟಿ ಸುಮಾರ್ 8 ಗಂಟೆಗಳ ಕಾಲ ಅಲುಗಾಡದಂತೆ ಒಂದು ಜಗದಲ್ಲಿ ಕಟ್ಟಿ ಇಡಿ. ಸುಮಾರು 8 ಗಂಟೆಗಳ ನಂತರ ತೊಟ್ಟೆಯಲ್ಲಿದ್ದ ಕಾಯಿ ಹಾಲು ಮಿಶ್ರಣದಲ್ಲಿ ಎಣ್ಣೆ ಮತ್ತು ನೀರು ಬೇರ್ಪಟ್ಟಿರುತ್ತದೆ. ನೀರನ್ನು ಹೊರತೆಗೆದು ಎಣ್ಣೆಯ ಮಿಶ್ರಣವನ್ನು ದೊಡ್ಡ ಬಾಂಡಲೆಗೆ ಹಾಕಿ ಚನ್ನಾಗಿ ಕುದಿಸಿ. ಈ ಮಿಶ್ರಣ ಚನ್ನಾಗಿ ಕುದ್ದ ಬಳಿಕ ನಿಮಗೆ ಶುದ್ಧವಾದ ತೆಂದಿನ ಎಣ್ಣೆ ಸಿಗುತ್ತದೆ.
View this post on Instagram
ಇದನ್ನೂ ಓದಿ: ಗೋಧಿ ಹಿಟ್ಟನ್ನು ದೀರ್ಘಕಾಲದವರೆಗೆ ಶೇಖರಿಸುವುದು ಹೇಗೆ; ಇಲ್ಲಿವೆ 5 ಸಲಹೆಗಳು
ಕೊಬ್ಬರಿ ಎಣ್ಣೆಯಲ್ಲಿ ಶೇ. 60 ರಿಂದ 70 ರಷ್ಟು ಕೊಬ್ಬಿನಾಮ್ಲಗಳು, 4 ರಿಂದ 10 ಪ್ರತಿಶತದಷ್ಟು ನೀರು, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಇದು ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ, ಇದು ಚಯಾಪಚಯ ಕ್ರಿಯೆಯ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ತಾಜಾ ತೆಂಗಿನ ಕಾಯಿಯಿಂದ ತೈಲವನ್ನು ಹೊರತೆಗೆದಾಗ ಮಧ್ಯಮ-ಸರಪಳಿ ಟ್ರೈಗ್ಲಿಸರೈಡ್ ಗಳು 10 ರಿಂದ 12 ಕಾರ್ಬನ್ ಪರಮಾಣುಗಳನ್ನು ಹೊಂದಿರುತ್ತವೆ. ಇದು ಲಾರಿಕ್ ಆಮ್ಲದ ಅತ್ಯುನ್ನತ ಮೂಲವನ್ನು ಹೊಂದಿರುತ್ತದೆ.