ಉಡುಪಿಯಲ್ಲಿ ನೀವು ಭೇಟಿ ನೀಡಬೇಕಾದ ಸುಂದರ ತಾಣಗಳ ಕುರಿತು ಮಾಹಿತಿ ಇಲ್ಲಿದೆ
ಉಡುಪಿ ಎಂದಾಕ್ಷಣ ಮೊದಲು ಬರುವ ಹೆಸರೇ ಉಡುಪಿ ಶ್ರೀ ಕೃಷ್ಣ ಮಠ. 13 ನೇ ಶತಮಾನದಲ್ಲಿ ನಿರ್ಮಿಸಲಾದ, ಶ್ರೀ ಕೃಷ್ಣ ದೇವಾಲಯವು ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ವೈಷ್ಣವ ದೇವಾಲಯವಾಗಿದೆ.
ಕರ್ನಾಟಕದ ಕರಾವಳಿ ಭಾಗದ ಉಡುಪಿಯೂ ಸಾಕಷ್ಟು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಪಾರಂಪರಿಕ ದೇವಸ್ಥಾನ, ಬಸದಿಗಳಿಂದ ಹಿಡಿದು ಬೀಚ್ಗಳು, ಜಲಪಾತಗಳು, ಐತಿಹಾಸಿಕ ಸ್ಮಾರಕಗಳ ವರೆಗೆ ನೀವು ಕಣ್ತುಂಬಿಸಿಕೊಳ್ಳಬಹುದಾದ ಸಾಕಷ್ಟು ತಾಣಗಳಿವೆ. ಉಡುಪಿಯಿಂದ ಎಷ್ಟು ದೂರದಲ್ಲಿದೆ ಹಾಗೂ ಪ್ರವೇಶ ಶುಲ್ಕ ಹಾಗೂ ನೀವು ಹೇಗೆ ಪ್ರಯಾಣಿಸಬಹುದು ಎಂಬೆಲ್ಲಾ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.
ಶ್ರೀ ಕೃಷ್ಣ ದೇವಾಲಯ:
ಉಡುಪಿ ಎಂದಾಕ್ಷಣ ಮೊದಲು ಬರುವ ಹೆಸರೇ ಉಡುಪಿ ಶ್ರೀ ಕೃಷ್ಣ ಮಠ. 13 ನೇ ಶತಮಾನದಲ್ಲಿ ನಿರ್ಮಿಸಲಾದ, ಶ್ರೀ ಕೃಷ್ಣ ಮಠ ಎಂದೂ ಕರೆಯಲ್ಪಡುವ ಶ್ರೀ ಕೃಷ್ಣ ದೇವಾಲಯವು ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ವೈಷ್ಣವ ದೇವಾಲಯವಾಗಿದೆ. ಇಲ್ಲಿ ವಿಶೇಷವಾಗಿ ಅಂದರೆ ನವಗ್ರಹ ಕಿಂಡಿ ಎಂದು ಕರೆಯಲ್ಪಡುವ ಒಂಬತ್ತು ರಂಧ್ರಗಳಿರುವ ಬೆಳ್ಳಿಯ ಲೇಪಿತ ಕಿಟಕಿಯ ಮೂಲಕ ದೇವರನ್ನು ಪೂಜಿಸಲಾಗುತ್ತದೆ. ದೇವರಿಗೆ ದೈನಂದಿನ ಸೇವೆಗಳನ್ನು ಅಷ್ಟ ಮಠಗಳು ನಿರ್ವಹಿಸುತ್ತವೆ. ಪದ್ಧತಿಗಳು, ಆಚರಣೆಗಳು ಮತ್ತು ದ್ವೈತ ತತ್ತ್ವಶಾಸ್ತ್ರದ ಬೋಧನೆಗಳಿಂದಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ.
- ಸ್ಥಳ : ಟೆಂಪಲ್ ಕಾರ್ ಸೇಂಟ್, ಶ್ರೀ ಕೃಷ್ಣ ದೇವಸ್ಥಾನ ಸಂಕೀರ್ಣ, ತೆಂಕಪೇಟೆ, ಮಾರುತಿ ವೀಥಿಕ, ಉಡುಪಿ, ಕರ್ನಾಟಕ 576101
- ಸಮಯ : ಬೆಳಿಗ್ಗೆ 4 ರಿಂದ ರಾತ್ರಿ 9 ರವರೆಗೆ
- ಪ್ರವೇಶ ಶುಲ್ಕ : ಪ್ರವೇಶ ಶುಲ್ಕವಿಲ್ಲ
- ಉಡುಪಿ ಬಸ್ ನಿಲ್ದಾಣದಿಂದ ದೂರ : 4.5 ಕಿಲೋ ಮೀಟರ್
ಸೇಂಟ್ ಮೇರಿಸ್ ದ್ವೀಪ:
ಮಲ್ಪೆ ಬೀಚ್‌ನ ನಾಲ್ಕು ಕಲ್ಲಿನ ದ್ವೀಪಗಳಲ್ಲಿ ಸೇಂಟ್ ಮೇರಿಸ್ ದ್ವೀಪವು ಅತ್ಯಂತ ಪ್ರಸಿದ್ಧವಾಗಿದೆ. ಕೋಕೋನಟ್ ಐಲ್ಯಾಂಡ್ ಎಂದೂ ಕರೆಯಲ್ಪಡುವ ಸೇಂಟ್ ಮೇರೀಸ್ ಅಪರೂಪದ ಸ್ಫಟಿಕೀಕರಿಸಿದ ಬಸಾಲ್ಟ್ ಶಿಲಾ ರಚನೆಗಳಿಗೆ ಹೆಸರುವಾಸಿಯಾಗಿದೆ, ಇದು ಜ್ವಾಲಾಮುಖಿಯಿಂದ ಲಕ್ಷಾಂತರ ವರ್ಷಗಳ ಹಿಂದೆ ರೂಪುಗೊಂಡಿದೆ. ಈ ಬಂಡೆಗಳ ರಚನೆಗಳು ದ್ವೀಪಕ್ಕೆ ವಿಶಿಷ್ಟವಾದ ಭೂದೃಶ್ಯವನ್ನು ನೀಡುತ್ತವೆ, ಇದು ಪ್ರಕೃತಿ ಮತ್ತು ಭೂವಿಜ್ಞಾನ ಪ್ರಿಯರಿಗೆ ಸ್ವರ್ಗವಾಗಿದೆ. ಈ ಭೂವೈಜ್ಞಾನಿಕ ಗೋಲ್ಡ್‌ಮೈನ್ ಭಾರತದ 26 ಭೂವೈಜ್ಞಾನಿಕ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದೆ.
- ಸ್ಥಳ: ಮಲ್ಪೆ, ಕರ್ನಾಟಕ 576118
- ಸಮಯ : ಮಲ್ಪೆ ಬೀಚ್‌ನಿಂದ ಸೇಂಟ್ ಮೇರಿಸ್‌ಗೆ ಬೆಳಿಗ್ಗೆ 9:30 ರಿಂದ 5:30 ರವರೆಗೆ ಹೋಗಲು ಅವಕಾಶವಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದ ತಿಂಗಳುಗಳಲ್ಲಿ ಈ ದ್ವೀಪವನ್ನು ಪ್ರವೇಶಿಸಲಾಗುವುದಿಲ್ಲ.
- ಪ್ರವೇಶ ಶುಲ್ಕ : ಪ್ರವೇಶ ಶುಲ್ಕವಿಲ್ಲ
- ಉಡುಪಿ ಬಸ್ ನಿಲ್ದಾಣದಿಂದ ದೂರ : 14.5 ಕಿಲೋ ಮೀಟರ್
ಮಲ್ಪೆ ಬೀಚ್:
ಉಡುಪಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಮಲ್ಪೆ ಬೀಚ್ ಬಂದರು ಪ್ರದೇಶವಾಗಿದೆ. ಸಾಂಪ್ರದಾಯಿಕವಾಗಿ ಇಲ್ಲಿನ ಮೊಗವೀರ ಮೀನುಗಾರ ಸಮುದಾಯದ ವಸಾಹತುಗಳಿಗೆ ಹೆಸರುವಾಸಿಯಾಗಿದೆ. ಈಗ ಪ್ರಸಿದ್ಧ ಪ್ರವಾಸಿ ಹಾಟ್‌ಸ್ಪಾಟ್, ಮಲ್ಪೆ ಬೀಚ್ ಇಡೀ ದಿನ ಉಚಿತ ವೈ-ಫೈ ಒದಗಿಸುವ ಮೊದಲ ಭಾರತೀಯ ಬೀಚ್ ಆಗಿದೆ. ಬೀಚ್‌ನಲ್ಲಿ ಜೆಟ್ ಸ್ಕೀ ಮತ್ತು ಪ್ಯಾರಾಸೈಲಿಂಗ್ ಸೇರಿದಂತೆ ಹಲವಾರು ಜಲಕ್ರೀಡೆ ಚಟುವಟಿಕೆಗಳಿವೆ. ಈ ಸುಂದರವಾದ ಕಡಲತೀರದ ಬೃಹತ್ ತೀರವು ನಾಲ್ಕು ಸೊಗಸಾದ ಕಲ್ಲಿನ ದ್ವೀಪಗಳಿಗೆ ನೆಲೆಯಾಗಿದೆ, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಆಗಾಗ್ಗೆ ಭೇಟಿ ನೀಡುವ ಸೇಂಟ್ ಮೇರಿ ದ್ವೀಪವಾಗಿದೆ.
- ಸ್ಥಳ : ಮಲ್ಪೆ, ಉಡುಪಿ ಕರ್ನಾಟಕ, 576108
- ಸಮಯ : 24 ಗಂಟೆ ಅವಕಾಶವಿದೆ.
- ಪ್ರವೇಶ ಶುಲ್ಕ : ಪ್ರವೇಶ ಶುಲ್ಕವಿಲ್ಲ
- ಉಡುಪಿ ಬಸ್ ನಿಲ್ದಾಣದಿಂದ ದೂರ :10 ಕಿಲೋಮೀಟರ್
ಕೋಡಿ ಬೀಚ್:
ಕುಂದಾಪುರ ಟೌನ್‌ಗೆ ಸಮೀಪದಲ್ಲಿರುವ ಕೋಡಿ ಬೀಚ್ ಡೆಲ್ಟಾ ಬೀಚ್ ಎಂದೂ ಕರೆಯುತ್ತಾರೆ. ಕನ್ನಡ ಭಾಷೆಯಲ್ಲಿ ಕೋಡಿ ಎಂದರೆ ತೀರ ಎಂದರ್ಥ. ಇದು ಸುವರ್ಣಾ ನದಿಯು ಅರಬ್ಬಿ ಸಮುದ್ರದೊಂದಿಗೆ ಸಂಗಮಿಸುವ ಸ್ಥಳವಾಗಿಯೂ ಪ್ರಸಿದ್ಧವಾಗಿದೆ, ಕೋಡಿ ಬೀಚ್ ಮಣಿಪಾಲದ ವಿದ್ಯಾರ್ಥಿಗಳಿಗೆ ವಾರಾಂತ್ಯದ ಜನಪ್ರಿಯ ತಾಣವಾಗಿದೆ.
- ಸ್ಥಳ : ಮರವಂತೆ
- ಸಮಯ : 24 ಗಂಟೆ ಅವಕಾಶವಿದೆ
- ಪ್ರವೇಶ ಶುಲ್ಕ : ಪ್ರವೇಶ ಶುಲ್ಕವಿಲ್ಲ
- ಉಡುಪಿ ಬಸ್ ನಿಲ್ದಾಣದಿಂದ ದೂರ : 36 ಕಿಲೋಮೀಟರ್
ದರಿಯಾ ಬಹದುರ್ಗಾಡ್ ಕೋಟೆ:
ಬಿದನೂರಿನ ಬಸವಪ್ಪ ನಾಯಕ್ ನಿರ್ಮಿಸಿದ ದರಿಯಾ ಬಹದುರ್ಗಡ್ ಕೋಟೆಯು ಮಲ್ಪೆ ಬೀಚ್‌ನ ನಾಲ್ಕು ಕಲ್ಲಿನ ದ್ವೀಪಗಳಲ್ಲಿ ಒಂದಾಗಿದೆ. ಮಲ್ಪೆಯಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪವು ಕೋಟೆಯ ಸಮೀಪವಿರುವ ಮಂಗಳೂರಿನ ಟೈಲ್ಸ್ ಕಾರ್ಖಾನೆಗಳಿಗೆ ನೆಲೆಯಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಭೇಟಿ ಮಾಡಲು ಉತ್ತಮ ಸಮಯ.
- ಸ್ಥಳ : ಲಕ್ಕಾಡಿವ್ ಸಮುದ್ರ
- ಸಮಯ : 24 ಗಂಟೆ ಅವಕಾಶ
- ಪ್ರವೇಶ ಶುಲ್ಕ : ಪ್ರವೇಶ ಶುಲ್ಕವಿಲ್ಲ
- ಉಡುಪಿ ಬಸ್ ನಿಲ್ದಾಣದಿಂದ ದೂರ : 10 ಕಿಲೋಮೀಟರ್
ಇನ್ನುಳಿದ ಉಡುಪಿಯ ಪ್ರವಾಸಿ ತಾಣಗಳೆಂದರೆ:
ಸಮುದ್ರ ತೀರಗಳು:
- ಮರವಂತೆ ಬೀಚ್
- ಕಾಪು ಬೀಚ್
ತೂಗು ಸೇತುವೆಗಳು :
- ಕೆಮ್ಮಣ್ಣು ತೂಗು ಸೇತುವೆ
ಬಸದಿಗಳು:
- ವರಂಗ ಕೆರೆ ಬಸಿದಿ
- ಚತುರ್ಮುಖ ಬಸದಿ
- ಗೊಮ್ಮಟೇಶ್ವರ ಪ್ರತಿಮೆ
ಜಲಪಾತಗಳು:
- ಕೂಡ್ಲು ತೀರ್ಥ ಜಲಪಾತ
- ದುರ್ಗಾ ಜಲಪಾತ
- ಅರ್ಬಿ ಜಲಪಾತ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: