Parashuram Theme Park: ನಿಮ್ಮ ಮುಂದಿನ ಉಡುಪಿ ಪ್ರವಾಸದಲ್ಲಿ ಈ ಸ್ಥಳವನ್ನು ನೀವು ನೋಡಲೇಬೇಕು!
ಸಾಮಾಜಿಕ ಜಾಲತಾಣದಲ್ಲಿ ಪರಶುರಾಮ ಥೀಮ್ ಪಾರ್ಕ್ ವಿಡಿಯೋವನ್ನು ರಜತ್ ರಾವ್ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಪರಶುರಾಮ ಉದ್ಯಾನವನ ಎಷ್ಟು ಸುಂದರವಾಗಿದೆ ಎಂಬುದನ್ನು ವರ್ಣಿಸುತ್ತದೆ.
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ನಗರದ ಹೆಸರನ್ನು ನೀವು ಕೇಳಿರುತ್ತೀರಿ. ಕಾರ್ಕಳ ಪಶ್ಚಿಮ ಘಟ್ಟಗಳ (Western Ghats) ತಪ್ಪಲಿನಲ್ಲಿ ನೆಲೆಸಿದೆ. ಈಗಾಗಲೇ ಜೈನ ಬಸದಿಗಳಿಂದ (Jain Basadi) ಕೂಡಿರುವ ಈ ಸುಂದರ ಸ್ಥಳ ಪ್ರವಾಸಿಗರ ಅಚ್ಚುಮೆಚ್ಚು. ಇದೀಗ ಕಾರ್ಕಳದ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಸ್ಥಳ ಸೇರಿದೆ. ಅದುವೇ ತುಳುನಾಡಿನ (Tulunadu) ಸೃಷ್ಟಿಕರ್ತ ಎಂದೇ ಪ್ರಸಿದ್ದವಾಗಿರುವ ಪರಶುರಾಮನ (Parashurama Theme Park) ಉದ್ಯಾನವನ. ಇದು ಬೆಟ್ಟದ ಮೇಲಿರುವ ಥೀಮ್ ಪಾರ್ಕ್ ಆಗಿರುವುದರಿಂದ ಸುತ್ತಲಿನ ಪರಿಸರ ಅತ್ಯದ್ಭುತವಾಗಿ ಸೆರೆಯಾಗುತ್ತದೆ. ಇಲ್ಲಿಂದ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು.
ಸಾಮಾಜಿಕ ಜಾಲತಾಣದಲ್ಲಿ ಪರಶುರಾಮ ಥೀಮ್ ಪಾರ್ಕ್ ವಿಡಿಯೋವನ್ನು ರಜತ್ ರಾವ್ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಪರಶುರಾಮ ಉದ್ಯಾನವನ ಎಷ್ಟು ಸುಂದರವಾಗಿದೆ ಎಂಬುದನ್ನು ವರ್ಣಿಸುತ್ತದೆ.
View this post on Instagram
ಕಾರ್ಕಳದಲ್ಲಿ ನೆಲಸಿರುವ ಈ ಪರುಷರಾಮನ ಉದ್ಯಾನವನ ಅಥವಾ ಥೀಮ್ ಪಾರ್ಕ್ ಬಹಳ ವಿಶೇಷವಾಗಿದೆ. ಈ ಪಾರ್ಕ್ ಅನ್ನು ಜನವರಿ 28, 2023 ರಂದು ಸಿಎಂ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದರು. ಉಡುಪಿ ಮತ್ತು ಕಾರ್ಕಳದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ 33 ಅಡಿಯ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಪರಶುರಾಮ ಪ್ರತಿಮೆ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದೆ. ಥೀಮ್ ಪಾರ್ಕ್‌ನಲ್ಲಿ ಭಜನಾ ಮಂದಿರ, ಮ್ಯೂಸಿಯಂ, ತೆರೆದ ಆಂಫಿಥಿಯೇಟರ್, ಪರಶುರಾಮನ ಜೀವನವನ್ನು ಚಿತ್ರಿಸುವ ರೇಖಾಚಿತ್ರಗಳು, ಆಡಿಯೊ ವಿಶುವಲ್ ಗ್ಯಾಲರಿ ಮತ್ತು ರೆಸ್ಟೋರೆಂಟ್ ಇದೆ.
ಇದನ್ನೂ ಓದಿ: ಭಾರತದ ರೈಲುಗಳಲ್ಲಿನ ನೀಲಿ, ಕೆಂಪು ಮತ್ತು ಹಸಿರು ಬಣ್ಣಗಳ ಬಗ್ಗೆ ನಿಮಗೆಷ್ಟು ಗೊತ್ತು?
17 ನೇ ಶತಮಾನದ ಮಲಯಾಳಂ ಕೃತಿ ಕೇರಳೋಲ್ಪತಿ ಪ್ರಕಾರ, ವಿಷ್ಣುವಿನ ಆರನೇ ಅವತಾರವಾದ ಋಷಿ ಪರಶುರಾಮನಿಂದ ಕೇರಳ ಮತ್ತು ತುಳುನಾಡಿನ ಭೂಮಿಯನ್ನು ಅರಬ್ಬಿ ಸಮುದ್ರದಿಂದ ಹಿಂಪಡೆಯಲಾಯಿತು. ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರದ ಮೇಲೆ ಎಸೆದಾಗ ಅದು ತಲುಪಿದಷ್ಟು ದೂರ ನೀರು ಕಡಿಮೆಯಾಯಿತು. ದಂತಕಥೆಯ ಪ್ರಕಾರ, ಈ ಹೊಸ ಭೂಪ್ರದೇಶವು ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸುತ್ತದೆ. ಸಮುದ್ರದ ಮೇಲೆ ಸೃಷ್ಟಿಯಾದ ಭೂಮಿ ಉಪ್ಪಿನಿಂದ ತುಂಬಿತ್ತು ಮತ್ತು ವಾಸಕ್ಕೆ ಯೋಗ್ಯವಾಗಿರಲಿಲ್ಲ. ಆದ್ದರಿಂದ ಪರಶುರಾಮನು ವಾಸುಕಿಯನ್ನು ಆಹ್ವಾನಿಸಿದನು, ಅವನು ಪವಿತ್ರ ವಿಷವನ್ನು ಉಗುಳಿ ಮಣ್ಣನ್ನು ಫಲವತ್ತಾದ ಹಚ್ಚ ಹಸಿರಿನ ಭೂಮಿಯಾಗಿ ಪರಿವರ್ತಿಸಿದನು.