ಹೆಚ್ಚಿನ ಜನರು ಬೆರಿ ಹಣ್ಣುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಷ್ಟೇ ಅಲ್ಲದೆ ಬೆರಿ ಹಣ್ಣುಗಳಾದ ಬ್ಲೂಬೆರಿ, ಸ್ಟ್ರಾಬೆರಿ, ರಾಸ್‌ಬೆರಿ ಹಣ್ಣುಗಳು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಬರೀ ಹಣ್ಣುಗಳನ್ನು ತಿನ್ನುವುದು ಮಾತ್ರವಲ್ಲದೆ ಇವುಗಳಿಂದ ಪುಡಿಂಗ್, ಐಸ್‌ಕ್ರೀಮ್, ಕೇಕ್‌ಗಳು, ಸ್ಮೂಥಿಗಳನ್ನು ಮಾಡಿಕೊಂಡು ಕೂಡಾ ಮಾಡಿ ತಿನ್ನಬಹುದು. ಈ ಹಣ್ಣುಗಳು ಪೋಷಕಾಂಶಯುಕ್ತವಾಗಿದ್ದು, ಹಣ್ಣು ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಸಣ್ಣ ಪ್ರಮಾಣದಲ್ಲಿ ಈ ಹಣ್ಣುಗಳನ್ನು ಸೇವಿಸಿದರೂ ಅದು ನಿಮ್ಮ ಆರೋಗ್ಯಕ್ಕೆ ದೊಡ್ಡ ಪ್ರಯೋಜನವನ್ನು ನೀಡುತ್ತದೆ.
ಬೆರಿಗಳು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಆಂಥೋಸಯಾನಿನ್‌ಗಳು, ಎಲಾಜಿಕ್ ಆಮ್ಲ ಮತ್ತ ರೆಸ್ವೆರಾಟ್ರೊಲ್‌ನ್ನು ಹೊಂದಿದ್ದು, ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆರಿ ಹಣ್ಣುಗಳು ನೈಸರ್ಗಿಕವಾಗಿ ಸಿಹಿಯಾಗಿರುತ್ತವೆ ಮತ್ತು ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
ಬೆರಿ ಫೈಬರ್‌ನಿಂದ ಸಮೃದ್ಧವಾಗಿದ್ದು, ಇದರಿಂದ ನಿಮ್ಮ ದೇಹದ ಜೀರ್ಣಕ್ರಿಯೆಯು ಸರಾಗವಾಗುತ್ತದೆ.
ಸೋಂಕು ಹಾಗೂ ಇತರ ಗಾಯಗಳ ಉರಿಯೂತದಿಂದ ನಿಮ್ಮ ದೇಹವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.
ಗಮನಾರ್ಹವಾದ ಫ್ಲೇವ್ನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಬೆರಿ ಹಣ್ಣುಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್ ಫುಡ್ಗಳು ಇಲ್ಲಿವೆ
ಬೆರಿ ಹಣ್ಣುಗಳು ಚರ್ಮ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಇವುಗಳು ಉತ್ಕರ್ಷಣ ನಿರೋಧಕ ಅಂಸಗಳು ಸ್ವತಂತ್ರ ರಾಡಿಕಲ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಚರ್ಮವನ್ನು ವಯಸ್ಸಾಗುವಿಕೆಯ ಲಕ್ಷಣದಿಂದ ಕಾಪಾಡುತ್ತದೆ.
ಬೆರಿಗಳು ಹೇರಳವಾದ ಪೋಷಕಾಂಶಗಳನ್ನು ಹೊಂದಿವೆ. ಇವುಗಳು ವಿಟಮಿನ್ ಸಿ, ಪೊಟ್ಯಾಸಿಯಂ, ಮೆಗ್ನೇಸಿಯಂ, ವಿಟಮಿನ್ ಕೆ, ಪ್ರಿಬಯಾಟಿಕ್ ಅಂಶಗಳನ್ನು ಹೊಂದಿವೆ. ಇವುಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: