ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್ ಫುಡ್ಗಳು ಇಲ್ಲಿವೆ
ನೆಗಡಿ, ಕೆಮ್ಮು, ಜ್ವರ ನಿಮ್ಮನ್ನು ಬಿಟ್ಟು ಬಿಡದೆ ಕಾಡುತ್ತಿದೆಯೇ? ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು ಮತ್ತು ಪಾನೀಯಗಳ ಪಟ್ಟಿ ಇಲ್ಲಿದೆ.
ರೋಗನಿರೋಧಕ ಶಕ್ತಿಯು ದೇಹದಲ್ಲಿ ಕಡಿಮೆಯಾದಾಗ ಜ್ವರ, ಕೆಮ್ಮು ಇತ್ಯಾದಿ ರೋಗ ರುಜಿನಗಳು ನಮ್ಮ ದೇಹಕ್ಕೆ ಬೇಗ ಅಂಟಿಕೊಳ್ಳುತ್ತವೆ. ಬಲವಾದ ರೋಗನಿರೋಧಕ ಶಕ್ತಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹವನ್ನು ಸೋಂಕುಗಳು ಮತ್ತು ರೋಗಗಳಿಂದ ರಕ್ಷಿಸುತ್ತದೆ. ಭಾರತದಲ್ಲಿ H3N2 ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹಾಗೂ ರೋಗನಿರೋಧಕ ಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿಡುವುದು ಮುಖ್ಯವಾಗಿರುತ್ತದೆ. ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಸರಿಯಾದ ನಿದ್ರೆ, ದೂಮಪಾನ ಮತ್ತು ಮದ್ಯಪಾನ ತ್ಯಜಿಸುವುದು, ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವ ಮೂಲಕ ಸ್ವಾಭಾವಿಕವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇನ್ನೂ ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು:
ಸಿಟ್ರಿಸ್ ಆಹಾರಗಳು:
ನಿಂಬೆಹಣ್ಣು, ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ಇತರ ಹಣ್ಣುಗಳು ಸಿಟ್ರಿಕ್ ಆಹಾರಗಳಾಗಿವೆ. ಇವುಗಳನ್ನು ಸೇವಿಸುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಬಾದಾಮಿ:
ಬಾದಾಮಿಯು ಪೋಷಕಾಂಶಗಳ ಮೂಲವಾಗಿದೆ. ಬಾದಾಮಿಯು ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಇದು ನಿಮ್ಮ ರೋಗನಿರೋಧಕ ವ್ಯವಸ್ಥೆಗೂ ಒಳ್ಳೆಯದು. ಬಾದಾಮಿಯು ವಿಟಮಿನ್ ಇ, ಸತು, ಮೆಗ್ನೇಸಿಯಂ ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೋಷಕಾಂಶಗಳ ಮೂಲವಾಗಿದೆ.
ಇದನ್ನೂ ಓದಿ: ಕತ್ತಿನ ಸುತ್ತಲಿನ ಕಪ್ಪು ಕಲೆಗೆ ತಜ್ಞರು ನೀಡಿರುವ ಮನೆಮದ್ದು ಇಲ್ಲಿದೆ
ಅರಶಿನ:
ಅರಶಿನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅರಶಿನದಲ್ಲಿನ ಕರ್ಕ್ಯುಮಿನ್ ಅಂಶವು ದೇಹದ ರೋಗನಿರೋಧಕ ಕಾರ್ಯವನ್ನು ಬೆಂಬಲಿಸುತ್ತದೆ.
ಗ್ರೀನ್ ಟೀ:
ಗ್ರೀನ್ ಟೀಯು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಇದರಲ್ಲಿರುವ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅಂಶವು ದೇಹದಲ್ಲಿ ರೋಗನಿರೋಧಕ ಅಂಶವನ್ನು ಹೆಚ್ಚಿಸಲು ಸಹಾಯಕವಾಗಿದೆ.
ಮಜ್ಜಿಗೆ:
ಮಜ್ಜಿಗೆಯು ಕ್ಯಾಲ್ಸಿಯಂನಿಂದ ತುಂಬಿದ ದೇಸಿ ಪಾನೀಯವಾಗಿದೆ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ದೇಹದ ರೋಗನಿರೋಧಕ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದರ ಜೊತೆಗೆ ಬೆಳ್ಳುಳ್ಳಿ, ಶುಂಠಿ, ಕಿವಿ ಹಣ್ಣು, ಪಪ್ಪಾಯ, ಕೇಸುಗಡ್ಡೆ, ಪಾಲಕ್, ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಇವೆಲ್ಲವೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾಗಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:04 pm, Fri, 17 March 23