Postures: ನೀವು ಕುಳಿತುಕೊಳ್ಳಿವ ಭಂಗಿ ನಿಮ್ಮ ಸ್ವಭಾವ ಹೇಳುತ್ತೆ!

| Updated By: ನಯನಾ ರಾಜೀವ್

Updated on: May 28, 2022 | 11:40 AM

Postures:ನೀವು ಕುಳಿತುಕೊಳ್ಳುವ ಭಂಗಿಯನ್ನು ನೋಡಿ ನಿಮ್ಮ ಮಾನಸಿಕ ಸ್ಥಿತಿಯನ್ನು ಊಹಿಸಬಹುದಾಗಿದೆ. ಆದರೆ ಉತ್ತಮ ಭಂಗಿಯು ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಅಂಶವಾಗಿರುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ವಿಧ ವಿಧವಾದ ಕುರ್ಚಿಗಳು ಮತ್ತು ಮಂಚಗಳನ್ನು ನೋಡುತ್ತೇವೆ.

Postures: ನೀವು ಕುಳಿತುಕೊಳ್ಳಿವ ಭಂಗಿ ನಿಮ್ಮ ಸ್ವಭಾವ ಹೇಳುತ್ತೆ!
Sitting Postures
Follow us on

ನೀವು ಕುಳಿತುಕೊಳ್ಳುವ ಭಂಗಿಯನ್ನು ನೋಡಿ ನಿಮ್ಮ ಮಾನಸಿಕ ಸ್ಥಿತಿಯನ್ನು ಊಹಿಸಬಹುದಾಗಿದೆ. ಆದರೆ ಉತ್ತಮ ಭಂಗಿಯು ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಅಂಶವಾಗಿರುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ವಿಧ ವಿಧವಾದ ಕುರ್ಚಿಗಳು ಮತ್ತು ಮಂಚಗಳನ್ನು ನೋಡುತ್ತೇವೆ.

ಆದರೆ ಇವುಗಳನ್ನು ಖರೀದಿ ಮಾಡುವಾಗ ಕೆಲವು ಕುಳಿತುಕೊಳ್ಳುವ ಭಂಗಿಗಳನ್ನೂ ನಾವು ತಿಳಿದಿರಬೇಕು. ಅಷ್ಟೇ ಅಲ್ಲದೆ, ನಮ್ಮ ಅಗತ್ಯಗಳಿಗೆ ಸೂಕ್ತವಾದದನ್ನು ಬಳಸಬೇಕು.

ಇಂದಿನ ಯುಗದಲ್ಲಿ ಕೆಲಸದ ಅವಶ್ಯಕತೆ, ಆನ್‌ಲೈನ್ ಅಧ್ಯಯನಗಳು, ಟಿವಿ ನೋಡುವುದು ಅಥವಾ ವಿಶ್ರಾಂತಿ ಪಡೆಯುವುದರಿಂದ ಒಬ್ಬರು ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳಬೇಕು. ಇದೆಲ್ಲದರ ಅರ್ಥವೇನೆಂದರೆ, ಒಬ್ಬರು ಕುಳಿತುಕೊಳ್ಳುವಾಗ ಅಳವಡಿಸುವ ಭಂಗಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಅಂಶವಾಗಿರುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ವಿಧ ವಿಧವಾದ ಕುರ್ಚಿಗಳು ಮತ್ತು ಮಂಚಗಳನ್ನು ನೋಡುತ್ತೇವೆ.

ಆದರೆ, ಇವುಗಳನ್ನು ಖರೀದಿ ಮಾಡುವಾಗ ಕೆಲವು ಕುಳಿತುಕೊಳ್ಳುವ ಭಂಗಿಗಳನ್ನೂ ನಾವು ತಿಳಿದಿರಬೇಕು. ಅಷ್ಟೇ ಅಲ್ಲ, ನಮ್ಮ ಅಗತ್ಯಗಳಿಗೆ ಸೂಕ್ತವಾದುದನ್ನು ಬಳಸಬೇಕು.

ಒಂದು ಸ್ಥಳದಲ್ಲಿ ಕುಳಿತುಕೊಳ್ಳುವಾಗ ಹೀಗೆ ಮಾಡಿ:
-ನಿಮ್ಮ ಪಾದಗಳನ್ನು ನೆಲದ ಮೇಲೆ ಅಥವಾ ಯಾವುದೇ ಬೆಂಬಲದ ಮೇಲೆ ವಿಶ್ರಾಂತಿ ಮಾಡಿಮೊಣಕಾಲು 90 ಡಿಗ್ರಿಗಿಂತ ಹೆಚ್ಚು ಬಾಗಬಾರದು.

-ಕುತ್ತಿಗೆ ಮತ್ತು ದೃಷ್ಟಿ ನೆಲಕ್ಕೆ ಸಮಾನಾಂತರವಾಗಿರಬೇಕುಆರಾಮದಾಯಕ ಬಟ್ಟೆಯನ್ನು ಧರಿಸಲು ಮರೆಯಬೇಡಿ.ನಿಧಾನವಾಗಿ ಉಸಿರಾಡಬೇಕು

-ಸರಿಯಾದ ಕುಳಿತುಕೊಳ್ಳುವ ಭಂಗಿಯು ರಕ್ತ ಪರಿಚಲನೆ ಕಾಪಾಡಿಕೊಳ್ಳುತ್ತದೆ. ತಲೆಯಲ್ಲಿ ರಕ್ತ ಪರಿಚಲನೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಹೆಚ್ಚು ತಲೆನೋವು, ಭಾರ ಮತ್ತು ಆಯಾಸವಾಗುವುದಿಲ್ಲ.

-ಶಸ್ತ್ರಚಿಕಿತ್ಸೆಯ ನಂತರದ ಯಾವುದೇ ಸಂದರ್ಭಗಳಲ್ಲಿ ನೋವು ಸಂಭವಿಸಬಹುದು. ಹೀಗಾಗಿ, ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವ ಅವಶ್ಯಕತೆಯಿದೆ. ಕೆಳ ಬೆನ್ನು ಮತ್ತು ಕಾಲುಗಳನ್ನು ಬೆಂಬಲಿಸಲು ಫೋಮ್ ರೋಲ್ ಅಥವಾ ದಿಂಬುಗಳನ್ನ ಬಳಸಿ

-ಶಸ್ತ್ರಚಿಕಿತ್ಸೆಯ ನಂತರದ ಅಗತ್ಯವಿದ್ದರೆ ಕಿಬ್ಬೊಟ್ಟೆಯ ಪ್ರದೇಶಕ್ಕೆ ಸಹಾಯಕ ಬೆಲ್ಟ್ ಬಳಸಿ ಆರಾಮ ವಲಯಕ್ಕೆ ಅನುಗುಣವಾಗಿ ಬೆಂಬಲ ಪಡೆಯಿರಿಅಗತ್ಯವಿದ್ದರೆ ತಲೆ ವಿಶ್ರಾಂತಿ ಪಡೆಯಬೇಕು ಅವಶ್ಯಕತೆಗೆ ಸರಿಯಾಗಿ ಕಾಲುಗಳ ಬೆಂಬಲ ಪಡೆಯಬೇಕು

ಯಾವುದಕ್ಕಾದರೂ ಒರಗಿ ಕುಳಿತುಕೊಳ್ಳುವವರು
ಈ ರೀತಿ ಕುಳಿತುಕೊಳ್ಳುವವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಾಗೂ ಪಾಲ್ಗೊಳ್ಳುವ ಮೂಲಕ ಪ್ರತಿ ಪರಿಸ್ಥಿತಿಯನ್ನು ನಿರ್ಣಯಿಸಲು ಬಯಸುತ್ತಾರೆ. ಈ ಭಂಗಿಯು ನಿಮ್ಮನ್ನು ನಿರೂಪಿಸುತ್ತಿದ್ದರೆ, ನೀವು ವಾಸ್ತವಿಕತೆಯನ್ನು ನಿಮ್ಮ ಕಣ್ಣಲ್ಲೇ ನೋಡಲು ಬಯಸುವವರು ಎಂದೂ, ನಿಮ್ಮ ತಿಳುವಳಿಕೆಯ ವಿವೇಚನೆಯ ಮೇರೆಗೆ ಅನುಗುಣವಾಗಿ ಪರಿಸ್ಥಿತಿಯನ್ನು ವಿಮರ್ಶಿಸುವವರು ಎಂದರ್ಥ. ಈ ಭಂಗಿಯಲ್ಲಿ ಕುಳಿತುಕೊಳ್ಳುವರು ಬೇರೆಯವರ ಭಾವನೆಗಳಿಗೆ ಸ್ಪಂದಿಸುವುದು ಮುಖ್ಯವೆಂಬ ಅನಿಸಿಕೆಯನ್ನು ಹೊಂದಿರುತ್ತಾರೆ.

ಕಾಲು ಮೇಲೆ ಕಾಲು ಹಾಕಿ ಕೂರುವ ಭಂಗಿ
ನೆಲದ ಮೇಲಾಗಲೀ ಅಥವಾ ಕುರ್ಚಿಯ ಮೇಲಾಗಲಿ ಒಬ್ಬ ವ್ಯಕ್ತಿ ಕಾಲು ಮೇಲೆ ಕಾಲು ಹಾಕಿ ಕುಳಿತ ಎಂದಾದಲ್ಲಿ, ಆ ವ್ಯಕ್ತಿ ನೆಮ್ಮದಿಯ, ನಿರಾತಂಕದ ಮತ್ತು ಮುಕ್ತ ಮನಸ್ಸಿನವ ಎಂಬುದನ್ನು ಹೇಳುತ್ತದೆ. ಹೀಗೆ ಕುಳಿತುಕೊಳ್ಳುವಾಗ ಮಂಡಿಯ ಸ್ಥಾನವೇನಾದರೂ ಬದಿಗೆ ಇದ್ದಲ್ಲಿ,ಆ ವ್ಯಕ್ತಿ ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸುವಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಪಕವಾಗಿ ಇರುತ್ತಾರೆ ಎಂದರ್ಥ.

ನೇರವಾಗಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು
ನೇರ ಹಾಗೂ ಸರಿಯಾದ ಭಂಗಿಯಲ್ಲಿ ಕುಳಿತಲ್ಲಿ ಅವರು ಆತ್ಮವಿಶ್ವಾಸವನ್ನು ಹೊಂದಿದವರು ಎಂದು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಈ ಭಂಗಿಯಲ್ಲಿ ಕುಳಿತುಕೊಳ್ಳುವರು ಪ್ರಬಲರಾದವರು, ನಂಬಿಕೆಗೆ ಅರ್ಹ ಮತ್ತು ಅಗತ್ಯ ಬಿದ್ದಾಗ ಇತರರಿಗೆ ಸಹಾಯ ಮಾಡಲು ಸಿದ್ಧರಿರುವವರು ಎಂದೂ ಪ್ರಕಟಿಸುತ್ತದೆ. ಮತ್ತೊಂದು ಕಡೆ ಈ ರೀತಿ ಕುಳಿತುಕೊಳ್ಳುವ ವ್ಯಕ್ತಿಯು ಹೊಸ ಅನುಭವಗಳಿಗೆ ಸಜ್ಜಾಗಿರುತ್ತಾರೆ ಮತ್ತು ಯಾವುದೇ ರೀತಿಯ ಸವಾಲುಗಳಿಂದ ಪಲಾಯನ ಮಾಡುವವನಲ್ಲ ಎಂದೂ ಸೂಚಿಸುತ್ತದೆ.

ಕಾಲುಗಳನ್ನು ಅಲುಗಾಡಿಸುತ್ತಾ ಕೂರುವುದು
ಈ ರೀತಿ ಕುಳಿತುಕೊಳ್ಳುವ ವ್ಯಕ್ತಿಯು ಬೇರೆಯವರ ಬೇಕು-ಬೇಡಗಳನ್ನು ಪರಿಗಣಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಬೇರೆಯವರಿಂದ ಕೆಲಸ ವನ್ನು ಪಡೆಯುವುದು ಹೇಗೆ ಎಂಬುದನ್ನು ಇವರು ನಿಖರವಾಗಿ ಅರಿತಿರುತ್ತಾರೆ.

ಕಾಲುಗಳನ್ನು ಅಲುಗಾಡಿಸುತ್ತಾ ಕುಳಿತುಕೊಳ್ಳುವವರು ಕಾಲುಗಳನ್ನು ಅಡ್ಡವಾಗಿ ಹಾಕಿ ಅಲುಗಾಡಿಸುತ್ತಾ ಕುಳಿತುಕೊಳ್ಳುವರು ವ್ಯವಸ್ಥಿತ ಕ್ರಮವನ್ನು ಅನುಸರಿಸುವವರು, ಸಮಯ ಪ್ರಜ್ಞೆ ಉಳ್ಳವರು ಹಾಗೂ ಕಾಲ ನಿಷ್ಠೆ ಉಳ್ಳವರಾಗಿರುತ್ತಾರೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:39 am, Sat, 28 May 22