ಘಮ್ ಎನ್ನುವ ಕೊತ್ತಂಬರಿ ಸೊಪ್ಪಿನಲ್ಲಿ ರುಚಿ ಮಾತ್ರವಲ್ಲದೇ ಆರೋಗ್ಯಕಾರಿ ಲಾಭಗಳು ಹಲವಾರಿವೆ. ನಾನಾ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ಶೇಖರಿಸಿ ಇಡದೇ ಹೋದರೆ ಬೇಗನೇ ಕೆಡುತ್ತವೆ . ಮಾರುಕಟ್ಟೆಯಿಂದ ತಂದ ಈ ಸೊಪ್ಪನ್ನು ಹಾಗೆಯೇ ಇಟ್ಟು ಬಿಟ್ಟರೆ ಕಸದ ಡಬ್ಬಿಗೆ ಹಾಕಬೇಕಾಗುತ್ತದೆ. ಹೀಗಾಗಿ ಸರಳ ವಿಧಾನಗಳ ಮೂಲಕ ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.
* ಕೊತ್ತಂಬರಿ ಸೊಪ್ಪನ್ನು ತೊಳೆದು, ಒಂದು ಲೋಟದಲ್ಲಿ ನೀರು ತುಂಬಿಸಿ ಅದರಲ್ಲಿ ತಂದ ಕೊತ್ತಂಬರಿ ಸೊಪ್ಪನ್ನು ಇಡುವುದು ಒಳ್ಳೆಯದು. ಆದರೆ ಎರಡು ಮೂರು ದಿನಕ್ಕೊಮ್ಮೆ ನೀರು ಬದಲಾಯಿಸುವ ಮೂಲಕ ಕೊತ್ತಂಬರಿ ಸೊಪ್ಪು ಹಾಳಾಗದಂತೆ ನೋಡಿಕೊಳ್ಳಬಹುದು.
* ಕೊತ್ತಂಬರಿ ಸೊಪ್ಪನ್ನು ತಂದ ಕೂಡಲೇ ತೊಳೆದು ಬೇರುಗಳನ್ನು ಕತ್ತರಿಸಿ, ನೀರನ್ನು ಆರಲು ಬಿಡಬೇಕು. ಆ ಬಳಿಕ ಝಿಪ್‌ಲಾಕ್ ಬ್ಯಾಕ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಬೇಗನೇ ಕೊಳೆಯುವುದಿಲ್ಲ.
* ಕೊತ್ತಂಬರಿ ಸೊಪ್ಪನ್ನು ಕ್ಲೀನ್ ಮಾಡಿ, ಸ್ವಚ್ಛ ಪ್ಲಾಸ್ಟಿಕ್ ಡಬ್ಬದಲ್ಲಿ ಶೇಖರಿಸಿ ಇಡುವುದು ಉತ್ತಮವಾದ ವಿಧಾನವಾಗಿದೆ. ಆದರೆ ಈ ಡಬ್ಬಿಗಳ ಮೇಲೆ ಬಟ್ಟೆಯನ್ನು ಮುಚ್ಚಿ, ಆ ಬಳಿಕ ಮುಚ್ಚಳ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಸೊಪ್ಪು ಬೇಗನೇ ಒಣಗಿ ಹೋಗುವುದಿಲ್ಲ.
ಇದನ್ನೂ ಓದಿ: ಟಾಯ್ಲೆಟ್ನಲ್ಲಿ ಎರಡು ಫ್ಲಶ್ ಬಟನ್‌ಗಳು ಏಕೆ ಇರುತ್ತವೆ ಎಂದು ತಿಳಿದಿದೆಯೇ?
* ಕೊತ್ತಂಬರಿ ಸೊಪ್ಪನ್ನು ತೊಳೆದು ನೀರು ಆರಿದ ಬಳಿಕ ಕತ್ತರಿಸಿಟ್ಟು ಗಾಳಿಯಾಡದ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಡಬಹುದು.
* ಕೊತ್ತಂಬರಿ ಸೊಪ್ಪನ್ನು ತೊಳೆದು ಬೇರನ್ನು ಕತ್ತರಿಸಿ ಪೇಪರ್‌ನಲ್ಲಿ ಸುತ್ತಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಒಂದು ವಾರದವರೆಗೆ ಫ್ರೆಶ್ ಆಗಿರುತ್ತದೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ