Ganesha Chaturthi Decoration Ideas: ಮನೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಮಂಟಪವನ್ನು ಹೀಗೆ ಅಲಂಕರಿಸಿ 

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2023 | 6:23 PM

ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಹೆಚ್ಚಿನವರ ಮನೆಯಲ್ಲಿ ಹಬ್ಬದ ತಯಾರಿ ಜೋರಾಗಿ ಶುರುವಾಗಿದೆ. ನೈವೇದ್ಯಗಳನ್ನು ತಯಾರಿಸುವುದರಿಂದ ಹಿಡಿದು ಮನೆಯನ್ನು ಸ್ವಚ್ಛಗೊಳಿಸುವವರೆಗೆ  ಹಲವು ರೀತಿಯ ಕೆಲಸಗಳು ಇರುತ್ತದೆ. ಆದರೆ ಇಷ್ಟೇಲ್ಲಾ ಗಡಿಬಿಡಿಯ ನಡುವೆ ದೇವರ ಮಂಟಪವನ್ನು ಹೇಗೆ ಅಲಂಕರಿಸುವುದು ಎಂದು ಯೋಚಿಸುತ್ತಿದ್ದೀರಾ, ಇಲ್ಲಿವೆ ನಿಮಗಾಗಿ ಕೆಲವೊಂದು ಡೆಕೊರೇಷನ್ ಐಡಿಯಾಗಳು. 

Ganesha Chaturthi Decoration Ideas: ಮನೆಯಲ್ಲಿ ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಮಂಟಪವನ್ನು ಹೀಗೆ ಅಲಂಕರಿಸಿ 
ಸಾಂದರ್ಭಿಕ ಚಿತ್ರ
Follow us on
ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುವ ಗಣೇಶ ಚತುರ್ಥಿಗೆ (Ganesha Chaturthi) ಹಬ್ಬಕ್ಕೆ ಇನ್ನೇನೂ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಶುಕ್ಷ ಪಕ್ಷದಂದು ಗಣೇಶ ಚತುರ್ಥಿಯನ್ನು ಹಬ್ಬವನ್ನು  ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬವನ್ನು ಸೆಪ್ಟೆಂಬರ್ 19 ರಂದು ಆಚರಿಸಲಾಗುತ್ತಿದೆ.  ಮತ್ತು ಈ ಹಬ್ಬದಂದು ಬಹುತೇಕ ಎಲ್ಲರೂ ತಮ್ಮ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಪೂಜೆಯ ದಿನ ಹಲವು ಬಗೆಯ ಹಣ್ಣು ಹಂಪಲುಗಳು ಮತ್ತು ಗಣೇಶನಿಗೆ ಪ್ರಿಯವಾದ ತಿನಿಸುಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ. ಹಾಗೂ  ಹೆಚ್ಚಿನವರು ದೇವರ ಮಂಟಪವನ್ನು ಬಹಳ ಸುಂದರವಾಗಿ ಅಲಂಕಾರ ಮಾಡುಬೇಕು ಎಂದು ಬಯಸುತ್ತಾರೆ. ನೀವು ಕೂಡಾ ದೇವರ ಮಂಟಪವನ್ನು ಹೇಗೆ ಅಲಂಕರಿಸಬಹುದು ಎಂದು ಯೋಚಿಸುತ್ತಿದ್ದೀರಾ? ನಿಮಗಾಗಿ ಇಲ್ಲಿವೆ ಕೆಲವೊಂದು ಡೆಕೊರೇಷನ್ ಐಡಿಯಾಗಳು.

ಗಣೇಶ ಚತುರ್ಥಿಯ ದಿನ ದೇವರ ಮಂಟಪವನ್ನು ಈ ರೀತಿಯಾಗಿ ಅಲಂಕರಿಸಿ

ಹೂವುಗಳಿಂದ ಅಲಂಕರಿಸಿ:

ಹಬ್ಬಗಳ ಸಮಯದಲ್ಲಂತೂ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಹೆಚ್ಚಾಗಿ ದೇವರನ್ನು ಹೂವುಗಳನ್ನು ಅಲಂಕರಿಸಲಾಗುತ್ತದೆ.  ನೀವು ಕೂಡಾ ಮಾರುಕಟ್ಟೆಯಿಂದ ವಿವಿಧ ಬಗೆಯ ಹೂವುಗಳನ್ನು ತಂದು ಮನೆಯಲ್ಲಿ ಅಲಂಕರಿಸಬಹುದು.  ಆದರೆ ದೇವರ ಮಂಟಪವನ್ನು ತುಂಬಾ ವಿಶೇಷವಾಗಿ ಅಲಂಕಾರ ಮಾಡಬೇಕೆಂದು ಬಯಸಿದರೆ, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ  ಬ್ಯಾಕ್ಡ್ರಾಪ್​​​ನಲ್ಲಿ ಹಳದಿ ಮತ್ತು ಕೇಸರಿ ಬಣ್ಣದ ಚೆಂಡು ಹೂವಿನ ಮಾಲೆಯಿಂದ ಅಲಂಕರಿಸಬಹುದು.  ಇದಲ್ಲದೆ ಬಾಳೆ ಎಲೆಗಳಿಂದ ಅಥವಾ ಹಸಿ ತೆಂಗಿನ ಗರಿಗಳಿಂದ  ಅಲಂಕರಿಸಿ ಅದರ ಸುತ್ತಲೂ ಹಾಗೂ ಅದರ ಮೇಲ್ಭಾಗದಲ್ಲಿ ಬೆಂಡು ಹೂಗಳಿಂದ ಅಲಂಕಾರ ಮಾಡಬಹುದು. ಇದು ದೇವರ ಮಂಟಪಕ್ಕೆ ಸಾಂಪ್ರದಾಯಿಕ ನೋಟವನ್ನು ನೋಟವನ್ನು ನೀಡುತ್ತದೆ. ಇದರ ಹೊರತಾಗಿ ನೀವು ಸರಳವಾಗಿ ಅಲಂಕಾರ ಮಾಡಬೇಕೆಂದು ಬಯಸಿದರೆ, ದೇವರ ವಿಗ್ರಹದ ಹಿಂಬಾಗದಲ್ಲಿ ವೃತ್ತಾಕಾರಕ್ಕೆ  ಆರ್ಕೀಡ್ ಹೂವುಗಳಿಂದ  ಅಲಂಕಾರ ಮಾಡಬಹುದು.

ವರ್ಣರಂಜಿತ ಕಾಗದದ ಅಲಂಕಾರ:

ದೇವರ ವಿಗ್ರಹವನ್ನು ಬಹಳ ಸುಂದರವಾಗಿ  ಸುಂದರವಾಗಿ ಅಲಂಕರಿಸಿದ್ದೀರಿ, ಆದರೆ   ಬ್ಯಾಕ್ಡ್ರಾಪ್ ತುಂಬಾ ಸಪ್ಪೆಯಾಗಿ ಕಾಣಿಸುತ್ತಿದೆ ಎಂದಾದರೆ, ನೀವು ಬಣ್ಣದ ಕಾಗದಗಳನ್ನು ವಿವಿಧ ಗಾತ್ರದಲ್ಲಿ ಕತ್ತರಿಸಿ, ಅದರಲ್ಲಿ ಹೂವಿನ ಆಕಾರವನ್ನು ರಚಿಸಿ ಗೋಡೆಗೆ ಅಂಟಿಸಬಹುದು. ಮತ್ತು ಈ ಅಲಂಕಾರ  ಬೆಳಕಿಗೆ ಹೊಳೆಯುವಂತೆ ಕಾಣಲು ಗ್ಲಿಟರ್ ಪೇಪರ್ ಶೀಟ್ ಗಳಿಂದ ಹೂವುಗಳನ್ನು ಮಾಡಿ ಅಥವಾ ಸಾದಾ ಪೇಪರ್ ಹೂವುಗಳ ಮೇಲೆ ಮಿರರ್ ವರ್ಕ್ ಕೂಡಾ ಮಾಡಬಹುದು.  ಹಾಗೂ ಅದರ ಎರಡೂ ಬದಿಯಲ್ಲೂ ಹಬ್ಬದ ನೋಟವನ್ನು ನೀಡುವ  ಮಿರರ್ ವಾಲ್ ಹ್ಯಾಂಗಿಂಗ್ ನ್ನು ಹಾಕಬಹುದು.
ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕದಲ್ಲಿದೆ ಹಲವು ಆರೋಗ್ಯ ಪ್ರಯೋಜನ

ದುಪಟ್ಟಾ ಅಥವಾ ಬಟ್ಟೆಯ ಅಲಂಕಾರ:

ಜಾಸ್ತಿ ಹೂವುಗಳಿಂದ ಅಲಂಕಾರ ಮಾಡಿದರೆ ಅದು ಸ್ವಲ್ಪ ಹೊತ್ತಿನಲ್ಲೇ ಬಾಡಿಹೋಗುತ್ತದೆ ಎಂದಾದರೇ, ನೀವು ಗಣೇಶ ವಿಗ್ರಹವನ್ನು  ಪ್ರತಿಷ್ಠಾಪಿಸುವ ಬ್ಯಾಕ್ಡ್ರಾಪ್ ನ್ನು ವರ್ಣ ರಂಜಿತ ಬಟ್ಟೆಗಳಿಂದ ಅಲಂಕಾರ ಮಾಡಬಹುದು. ಸಾಂಪ್ರದಾಯಿಕ ನೋಟವನ್ನು ನೀಡುವ ಹಲವಾರು ಪ್ರಿಂಟೆಡ್ ಡೆಕೊರೇಷನ್ ಬಟ್ಟೆಗಳು ಮಾರುಕಟ್ಟೆಯಲ್ಲಿ ಹಾಗೂ ಆನ್ಲೈನ್ ಶಾಪಿಂಗ್ ಗಳಲ್ಲಿ ಲಭ್ಯವಿದೆ.  ಅವುಗಳನ್ನು ಬಳಸಿಕೊಂಡು  ಸುಂದರವಾಗಿ ಅಲಂಕರಿಸಬಹುದು. ಅಥವಾ ಮನೆಯಲ್ಲಿರುವ ಬಿಳಿ ಅಥವಾ ಕೆಂಪು ಅಥವಾ, ಹಳದಿ ಅಥವಾ ಗುಲಾಬಿ ಹೀಗೆ ನಿಮ್ಮ ಥೀಮ್ ಗೆ ಸರಿ ಹೊಂದುವ ಬಟ್ಟೆಗಳಿಂದ ಮಂಟಪದ ಹಿಂಬದಿಯ ಅಲಂಕಾರ ಮಾಡಬಹುದು. ಹಾಗೂ ಅದಕ್ಕೆ ಸರಿಹೊಂದುವ ಡೆಕೊರೇಷನ್ ಮೆಟೀರಿಯಲ್ ಗಳನ್ನು ಕೂಡಾ ಹಾಕಬಹುದು.  ಅಲ್ಲದೆ ನೀವು  ಈ ಬಣ್ಣಕ್ಕೆ ಸರಿಹೊಂದುವ ಆರ್ಕಿಡ್ ಹೂವುಗಳು ಅಥವಾ ಕಾಗಗದ ಹೂವುಗಳನ್ನು ಗಣೇಶ ಮಂಟಪದ ಸುತ್ತಲೂ ಅಲಂಕರಿಸಬಹುದು.

ದೀಪಾಲಂಕಾರ:

ಹಿಂದೂ ಧರ್ಮದಲ್ಲಿ ದೀಪಗಳಿಗೆ ವಿಶೇಷ ಪ್ರಾಮುಖ್ಯತೆಯಿದೆ.  ದೀಪವನ್ನು ಜ್ಞಾನದ ಸಂಕೇತವೆಂದು ಹೇಳಲಾಗುತ್ತದೆ.  ಹಾಗಾಗಿ ಗಣೇಶ ಚತುರ್ಥಿಯ ದಿನದಂದು ದೇವರನ್ನು ಪ್ರತಿಷ್ಠಾಪಿಸುವ ಮಂಟಪವನ್ನು  ದೀಪಗಳಿಂದ ಅಲಂಕರಿಸಬಹುದು. ಹಾಗೂ ಗಣೇಶನ ಮೂರ್ತಿಯ ಮುಂಭಾಗದಲ್ಲಿ ವಿವಿಧ ರೀತಿಯ ರಂಗೋಲಿಯನ್ನಿಟ್ಟು ಅದರ ಮಧ್ಯದಲ್ಲಿ ದೊಡ್ಡ ದೀಪ  ಹಾಗೂ ಅದರ ಸುತ್ತಲೂ ಪುಟ್ಟ ಪುಟ್ಟ ದೀಪಗಳನ್ನಿಟ್ಟು ಸುಂದರವಾಗಿ ಬೆಳಕಿನ ಅಲಂಕಾರವನ್ನು ಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:23 pm, Thu, 14 September 23