Relationship: ನಿಮ್ಮ ಸಂಗಾತಿ ಬಳಿ ಈ ಪ್ರಶ್ನೆಯನ್ನು ಕೇಳಿ, ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ

ಪ್ರೀತಿಯಲ್ಲಿರುವ ಪ್ರತಿಯೊಬ್ಬರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ತಮ್ಮೊಂದಿಗೆ ಸದಾ ಇರಬೇಕೆಂದು ಕೇಳಿಕೊಳ್ಳುತ್ತಾರೆ.

Relationship: ನಿಮ್ಮ ಸಂಗಾತಿ ಬಳಿ ಈ ಪ್ರಶ್ನೆಯನ್ನು ಕೇಳಿ, ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ
Relationship
Edited By:

Updated on: Aug 25, 2022 | 8:00 AM

ಪ್ರೀತಿಯಲ್ಲಿರುವ ಪ್ರತಿಯೊಬ್ಬರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಬಯಸುತ್ತಾರೆ, ತಮ್ಮೊಂದಿಗೆ ಸದಾ ಇರಬೇಕೆಂದು ಕೇಳಿಕೊಳ್ಳುತ್ತಾರೆ. ತಮ್ಮೆಲ್ಲಾ ಕಷ್ಟ ಸುಖಗಳನ್ನು ಅವರಲ್ಲಿ ಹೇಳಿಕೊಳ್ಳಲು ಬಯಸುತ್ತಾರೆ, ನಿಮ್ಮ ಸಂಗಾತಿ ನಿಮ್ಮನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಅರಿಯಲು ಕೆಲವು ಪ್ರಶ್ನೆಗಳನ್ನು ಕೇಳುವುದು ಮುಖ್ಯವಾಗುತ್ತದೆ.

ನಿಮ್ಮ ಸಂಗಾತಿಗೆ ಈ ಪ್ರಶ್ನೆಗಳನ್ನು ಕೇಳಿ
ನಿಮಗೆ ನನ್ನಿಂದ ಏನಾದರೂ ಸಹಾಯ ಬೇಕೆ?
ನಿಮ್ಮಿಂದ ನಿಮ್ಮ ಸಂಗಾತಿಗೆ ಏನಾದರೂ ಸಹಾಯ ಬೇಕೆ? ಎಂದು ಕೇಳಿ, ಅವರ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಲ್ಲಿ ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುವುದು.

ಸಂಬಂಧವನ್ನು ಸುಧಾರಿಸಲು ನೀವು ಏನು ಮಾಡಬೇಕು?
ಸಂಬಂಧವು ಹೊಸದಾಗಿರಲಿ ಅಥವಾ ಹಳೆಯದಾಗಿರಲಿ, ಎಲ್ಲಾ ಸಮಯದಲ್ಲೂ ಸಂಬಂಧದಲ್ಲಿ ಹೊಸತನ ಎನ್ನುವುದು ಇರಬೇಕು, ನೀವು ಯಾವ ಗುಣವನ್ನು ಬದಲಾಯಿಸಿಕೊಂಡರೆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದನ್ನು ನಿಮ್ಮ ಸಂಗಾತಿಯ ಬಳಿ ಕೇಳಿ.

ನಿಮ್ಮ ಸಂಬಂಧದಲ್ಲಿ ನಿಮಗೆ ಖುಷಿ ಕೊಡುವ ವಿಚಾರ ಏನು?
ನಿಮ್ಮ ಸಂಬಂಧದಲ್ಲಿ ಅಥವಾ ನಿಮ್ಮ ಸಂಗಾತಿಯ ಗುಣದಲ್ಲಿ ನಿಮಗೆ ಖುಷಿ ಎನಿಸುವ ವಿಚಾರವೇನು ಎಂಬುದನ್ನು ನಿಮ್ಮ ಸಂಗಾತಿಗೆ ತಿಳಿಸಿ. ಹಾಗೆಯೇ ನಿಮ್ಮ ಸಂಗಾತಿಯ ಯಾವುದೋ ಗುಣ ನಿಮಗೆ ಸರಿ ಎನಿಸದಿದ್ದರೆ ಅದನ್ನು ಸೂಕ್ಷ್ಮವಾಗಿ ಅವರಿಗೆ ತಿಳಿಸಿ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

TV9 Web

TV9 Kannada

Read More
Loading...
Unable to load recommendations.
Follow Us