Deepavali 2025: ದೀಪಾವಳಿ ಶಾಪಿಂಗ್‌ ಮಾಡುವಾಗ ನೀವು ಯಾವ ವಸ್ತುಗಳನ್ನು ಖರೀದಿ ಮಾಡೋದು ಬೆಸ್ಟ್‌ ಗೊತ್ತಾ?

ಬೆಳಕಿನ ಹಬ್ಬ ದೀಪಾವಳಿ ಲಕ್ಷ್ಮೀ ದೇವಿಯನ್ನು ಸ್ವಾಗತಿಸುವ ಪವಿತ್ರ ಹಬ್ಬವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಭಕ್ತರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು, ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು, ಚಿನ್ನ ಬೆಳ್ಳಿಯಂತಹ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ತರುತ್ತಾರೆ. ಈ ಬಾರಿಯೂ ಭರದಿಂದ ಹಬ್ಬದ ಶಾಪಿಂಗ್‌ ನಡೆಯುತ್ತಿದ್ದು, ಈ ಸಮಯದಲ್ಲಿ ಯಾವ ವಸ್ತುಗಳನ್ನು ಖರೀದಿಸೋದು ಬೆಸ್ಟ್‌, ಯಾವ ವಸ್ತುಗಳನ್ನು ಖರೀದಿಸಬಾರದು ಎಂಬುದನ್ನು ತಿಳಿಯಿರಿ.

Deepavali 2025: ದೀಪಾವಳಿ ಶಾಪಿಂಗ್‌ ಮಾಡುವಾಗ  ನೀವು ಯಾವ ವಸ್ತುಗಳನ್ನು ಖರೀದಿ ಮಾಡೋದು ಬೆಸ್ಟ್‌ ಗೊತ್ತಾ?
ದೀಪಾವಳಿ ಶಾಪಿಂಗ್‌
Image Credit source: Pinterest

Updated on: Oct 18, 2025 | 4:57 PM

ನಾಡಿನೆಲ್ಲೆಡೆ ದೀಪಾವಳಿ (Deepavali) ಹಬ್ಬದ ಸಂಭ್ರಮ ಬಲು ಜೋರಾಗಿದೆ. ಹೊಸ ಬೆಳಕು ಮತ್ತು ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬವನ್ನು ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಮನೆ ತುಂಬಾ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಜನ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಬೆಳಕಿನ ಹಬ್ಬ ಲಕ್ಷ್ಮೀ ದೇವಿಯನ್ನು ಸ್ವಾಗತಿಸುವ ಹಬ್ಬವಾದ ಕಾರಣ, ಈ ಹಬ್ಬಕ್ಕೂ ಮುನ್ನ ಬೆಳ್ಳಿ, ಚಿನ್ನ ಖರೀದಿಸುವ, ಹೊಸ ವಾಹನಗಳು ಖರೀದಿಸುವ ಜೊತೆಗೆ ಶುಭದ ಸಂಕೇತವಾಗಿರುವಂತಹ ಒಂದಷ್ಟು ವಸ್ತುಗಳನ್ನು ಶಾಪಿಂಗ್‌ ಮಾಡುವ ಸಂಪ್ರದಾಯವಿದೆ. ಹೀಗಿರುವಾಗ ದೀಪಾವಳಿ ಶಾಪಿಂಗ್‌ನಲ್ಲಿ ಯಾವ ವಸ್ತುಗಳನ್ನು ಖರೀದಿಸಿದರೆ ಶುಭ, ಯಾವ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಬೇಕು ಎಂಬ ವಿಚಾರವನ್ನು ತಿಳಿಯಿರಿ.

ದೀಪಾವಳಿ ಶಾಪಿಂಗ್‌ನಲ್ಲಿ ಏನು ಖರೀದಿಸಬೇಕು?

  • ದೀಪಾವಳಿಯಂದು ಚಿನ್ನ, ಬೆಳ್ಳಿಯ ನಾಣ್ಯಗಳು, ಆಭರಣಗಳು ಮತ್ತು ಇತರ ಲೋಹದ ವಸ್ತುಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ಲೋಹಗಳನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿ ಒಲಿಯುತ್ತಾಳೆ ಎಂಬ ನಂಬಿಕೆಯಿದೆ.
  • ದೀಪಾವಳಿಯಂದು ತಾಮ್ರ, ಬೆಳ್ಳಿ, ಹಿತ್ತಾಳೆ ಮತ್ತು ಉಕ್ಕಿನ ಪಾತ್ರೆಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.
  • ದೀಪಾವಳಿಯಂದು, ಗಣೇಶ, ಲಕ್ಷ್ಮಿ ದೇವಿ, ಕುಬೇರನ ವಿಗ್ರಹ ಮತ್ತು ಧೂಪದ್ರವ್ಯ, ಕಲಶ, ದೀಪ, ಪೂಜಾ ತಟ್ಟೆ, ಮಂತ್ರ ಫಲಕ ಮುಂತಾದ ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದು ಒಳ್ಳೆಯದು.
  • ದೀಪಾವಳಿಯ ದಿನದಂದು ಪೊರಕೆಯನ್ನು ಖರೀದಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.
  • ದೀಪಾವಳಿಯ ದಿನದಂದು ಕುಟುಂಬದ ಎಲ್ಲ ಸದಸ್ಯರಿಗೆ ಬಟ್ಟೆ, ಹೊಸ ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳನ್ನು ಖರೀದಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ:  ದೀಪಾವಳಿಯಂದು ಮಕ್ಕಳು ಪಟಾಕಿ ಮುಟ್ಟದಂತೆ ಮಾಡಬೇಕೇ? ಸಿಂಪಲ್ ಟ್ರಿಕ್ಸ್ ಅನುಸರಿಸಿ

ಇದನ್ನೂ ಓದಿ
ಮಕ್ಕಳನ್ನು ಪಟಾಕಿಯಿಂದ ದೂರವಿಡಲು ಏನು ಮಾಡಬೇಕು?
ಭಾರತವೂ ಸೇರಿದಂತೆ ದೀಪಾವಳಿ ಹಬ್ಬವನ್ನು ಆಚರಿಸುವ ದೇಶಗಳಿವು
ಮನೆಯ ಗೋಡೆ ಹೊಸದರಂತೆ ಕಾಣಲು ಈ ಟಿಪ್ಸ್ ಅನುಸರಿಸಿ
ಸ್ವಿಚ್‌ಬೋರ್ಡ್‌ ಸ್ವಚ್ಛಗೊಳಿಸುವ ಸಿಂಪಲ್‌ ಸಲಹೆಗಳು

ದೀಪಾವಳಿ ಶಾಪಿಂಗ್‌ನಲ್ಲಿ ಏನನ್ನು ಖರೀದಿಸಬಾರದು?

  • ದೀಪಾವಳಿಯಂದು ಕಬ್ಬಿಣವನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಕಬ್ಬಿಣಕ್ಕೆ ಸಂಬಂಧಿಸಿದ ಯಾವ ವಸ್ತುಗಳನ್ನು ತಪ್ಪಿಯೂ ಖರೀದಿಸಬಾರದಂತೆ.
  • ದೀಪಾವಳಿ ಹಬ್ಬದ ಸಮಯದಲ್ಲಿ ಒಡೆದ ವಸ್ತುಗಳು, ಗಾಜು ಇತ್ಯಾದಿಗಳನ್ನು ಮನೆಯಲ್ಲಿ ಇಡಬಾರದು, ಅಂತಹ ವಸ್ತುಗಳನ್ನು ಖರೀದಿಸಲು ಬಾರದು ಇವು ಬಡತನವನ್ನು ತರುತ್ತವೆ ಎಂಬ ನಂಬಿಕೆಯಿದೆ.
  • ದೀಪಾವಳಿಯಂದು ಕಪ್ಪು ಬಣ್ಣಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ಖರೀದಿಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ
  • ದೀಪಾವಳಿಯಂದು ಕತ್ತರಿ, ಚೂಪಾದ ವಸ್ತುಗಳು, ಚಾಕುವಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು.
  • ದೀಪಾವಳಿಯಂದು ಹಳೆಯ ಅಥವಾ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಸಹ ಖರೀದಿಸಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ