Deepavali cleaning tips: ಹಬ್ಬದ ಸಮಯದಲ್ಲಿ ಮನೆಯ ಗೋಡೆ ಹೊಸದರಂತೆ ಕಾಣಲು ಈ ಟಿಪ್ಸ್ ಅನುಸರಿಸಿ
ಎಷ್ಟೇ ಸಲ ಮನೆಯ ಗೋಡೆಗಳಿಗೆ ಪೈಂಟ್ ಬಳಿದರೂ ತೇವಾಂಶ, ಇನ್ನಿತರ ಕಲೆಗಳು ಆಗಾಗ್ಗೆ ಕಾಣಿಸುತ್ತಿರುತ್ತವೆ. ಇಂತಹ ಕಲೆಗಳಿದ್ದರೆ ಗೋಡೆಯ ಅಂದವೇ ಹಾಳಾಗಿಬಿಡುತ್ತದೆ. ಇದಕ್ಕಾಗಿ ಹಬ್ಬದ ಸಮಯದಲ್ಲಿ ಹೆಚ್ಚಿನವರು ಗೋಡೆಗೆ ಪೈಂಟ್ ಬಳಿಯುತ್ತಾರೆ. ಆದ್ರೆ ಪೈಂಟ್ ಇಲ್ಲದೆ ಕಡಿಮೆ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಯದೆ ಮನೆಯ ಕಲೆ, ಕೊಳೆಯನ್ನು ಹೋಗಲಾಡಿಸಿ ಗೋಡೆಯ ಅಂದವನ್ನು ಹೆಚ್ಚಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸುವ ಬೆಳಕಿನ ಹಬ್ಬ ದೀಪಾವಳಿ ಹಬ್ಬ (Deepavali) ಬಂದೇ ಬಿಡ್ತು. ಈ ಹಬ್ಬದ ಸಮಯದಲ್ಲಿ ಮನೆಯನ್ನು ಡೀಪ್ ಕ್ಲೀನ್ ಮಾಡುವಂತಹ ವಾಡಿಕೆ ಇದೆ. ಹೀಗಾಗಿ ಪ್ರತಿಯೊಬ್ಬರು ಕೂಡ ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸುತ್ತಾರೆ. ಇನ್ನೂ ಗೊಡೆಯ ಕಲೆ, ಕೊಳೆಯನ್ನು ಹೋಗಲಾಡಿಸುವುದು ಕಷ್ಟಸಾಧ್ಯವೆಂದು ಹಬ್ಬದ ಸಮಯದಲ್ಲಿ ಮನೆಯ ಸೌಂದರ್ಯವನ್ನು ಹೆಚ್ಚಿಸಲು ಕೆಲವರು ಪೈಂಟ್ ಬಳಿಯುತ್ತಾರೆ. ಪ್ರತಿ ಬಾರಿ ಸುಣ್ಣ ಬಣ್ಣ ಬಳಿಯುವುದು ತುಂಬಾನೇ ದುಬಾರಿಯಾಗಿರುತ್ತದೆ. ಇದರ ಬದಲು ಈ ಕೆಲವೊಂದು ಸಿಂಪಲ್ ಟಿಪ್ಸ್ ಪಾಲಿಸಿದರೆ ಮನೆಯ ಗೋಡೆಯಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೊಡೆದುಹಾಕಬಹುದು. ಈ ಸಲಹೆಗಳನ್ನು ಪಾಲಿಸಿದರೆ ಖಂಡಿತವಾಗಿಯೂ ನಿಮ್ಮ ಮನೆ ಗೋಡೆ ಹೊಸದರಂತೆ ಕಾಣುವುದರಲ್ಲಿಎರಡು ಮಾತಿಲ್ಲ.
ಮನೆಯ ಗೋಡೆ ಹೊಸದರಂತೆ ಕಾಣಲು ಈ ಟಿಪ್ಸ್ ಅನುಸರಿಸಿ:
ಅಡಿಗೆ ಸೋಡಾದ ಮತ್ತು ನಿಂಬೆ: ನಿಮ್ಮ ಮನೆಯ ಗೋಡೆ ತೇವಾಂಶ ಮತ್ತು ಇತರೆ ಕಲೆಗಳಿಂದ ಹಾನಿಗೊಳಗಾಗಿದ್ದರೆ , ಅವುಗಳನ್ನು ಸರಿಪಡಿಸಲು ನಿಂಬೆ ಮತ್ತು ಅಡಿಗೆ ಸೋಡಾವನ್ನು ಬಳಸಬಹುದು. ಒಂದು ಪಾತ್ರೆಯಲ್ಲಿ ಅಡಿಗೆ ಸೋಡಾವನ್ನು ಹಾಕಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ, ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಗೋಡೆಯಲ್ಲಿ ಕಲೆಯಿರುವ ಜಾಗಕ್ಕೆ ಹಚ್ಚಿ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ಸುಲಭವಾಗಿ ಗೋಡೆಯ ಕಲೆಯನ್ನು ಹೋಗಲಾಡಿಸಬಹುದು.
ಬಿಳಿ ವಿನೆಗರ್: ಮನೆಯ ಗೋಡೆಯನ್ನು ಸ್ವಚ್ಛಗೊಳಿಸಲು ಬಿಳಿ ವಿನೆಗರ್ ಕೂಡ ಸಹಕಾರಿ. ಈ ವಿನೆಗರ್ ಗೋಡೆಗಳ ಕಲೆಯನ್ನು ತೆಗೆದುಹಾಕಲು ಸಹಾಯ ಮಾಡುವ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದಕ್ಕಾಗಿ ಮೃದುವಾದ ಬಟ್ಟೆ ಅಥವಾ ಸ್ಪಂಜನ್ನು ತೆಗೆದುಕೊಂಡು, ಅದನ್ನು ಬಿಳಿ ವಿನೆಗರ್‌ನಲ್ಲಿ ನೆನೆಸಿ, ಗೋಡೆಯ ಮೇಲಿನ ಗುರುತುಗಳ ಮೇಲೆ ನಿಧಾನವಾಗಿ ಒರೆಸಿ. ಇಲ್ಲವೇ ಒಂದು ಬಾಟಲಿಯಲ್ಲಿ ವಿನೆಗರ್ ತುಂಬಿಸಿ ಒದ್ದೆಯಾದ ಗೋಡೆಯ ಮೇಲೆ ಸಿಂಪಡಿಸಿ. ಗೋಡೆಯನ್ನು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಅದನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಇದು ತೇವಾಂಶ ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಬ್ಲೀಚ್: ನಿಮ್ಮ ಗೋಡೆಗಳನ್ನು ಸ್ವಚ್ಛಗೊಳಿಸಲು ಬಯಸಿದರೆ, ನೀವು ಬ್ಲೀಚ್ ಕೂಡ ಬಳಸಬಹುದು. ಇದನ್ನು ಮಾಡಲು, ಒಂದು ಬಕೆಟ್ ತೆಗೆದುಕೊಂಡು ಅದರಲ್ಲಿ ಬ್ಲೀಚ್ ಮಿಶ್ರಣ ಮಾಡಿ ಉತ್ತಮ ದ್ರಾವಣವನ್ನು ತಯಾರಿಸಿ. ಈ ದ್ರಾವಣವನ್ನು ಗೋಡೆಯ ಮೇಲೆ ಹಚ್ಚಿ ಕೆಲವು ನಿಮಿಷಗಳ ಕಾಲ ಬಿಡಿ. ಗೋಡೆ ಒಣಗಿದ ನಂತರ, ಅದನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಬ್ಲೀಚ್ ಗೋಡೆಯಿಂದ ಎಲ್ಲಾ ಕಲೆಗಳು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಕ್ಲೀನಿಂಗ್ ಸಲಹೆ ಅನುಸರಿಸಿದ್ರೆ ಸಾಕು ನಿಮ್ಮ ಮನೆಯ ಸ್ವಿಚ್‌ಬೋರ್ಡ್ ಪಳಪಳ ಹೊಳೆಯುತ್ತದೆ
ಟೂತ್‌ಪೇಸ್ಟ್: ಟೂತ್‌ಪೇಸ್ಟ್ ನಿಮ್ಮ ಹಲ್ಲುಗಳಿಗೆ ಮಾತ್ರವಲ್ಲ, ಗೋಡೆಗಳನ್ನು ಸ್ವಚ್ಛಗೊಳಿಸಲು ಸಹ ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ ಬಿಳಿ ಬಣ್ಣದ ಟೂತ್‌ಪೇಸ್ಟನ್ನು ಗೋಡೆಯ ಮೇಲೆ ಕಲೆ ಇರುವ ಪ್ರದೇಶಕ್ಕೆ ಹಚ್ಚಿ, ನಿಧಾನವಾಗಿ ಉಜ್ಜಿ, ನಂತರ ಒದ್ದೆಯಾದ ಬಟ್ಟೆಯಿಂದ ಒರೆಸಿ. ಸ್ವಲ್ಪ ಸಮಯದ ನಂತರ, ಕಲೆ ಮಾಯವಾಗುತ್ತದೆ ಮತ್ತು ಗೋಡೆಯು ಹೊಸದರಂತೆ ಕಾಣುತ್ತದೆ.
ಮೈಕ್ರೋಫೈಬರ್ ಬಟ್ಟೆ: ಗೋಡೆಯ ಮೇಲೆ ಸಣ್ಣಪುಟ್ಟ ಕಲೆಗಳಿದ್ದರೆ, ಸ್ವಚ್ಛವಾದ ಮೈಕ್ರೋಫೈಬರ್ ಬಟ್ಟೆಯಿಂದ ಗೋಡೆಗಳನ್ನು ಒರೆಸಿದರೆ ಸಾಕು. ಈ ಬಟ್ಟೆಯು ಗೋಡೆಯ ಬಣ್ಣಕ್ಕೆ ಹಾನಿಯಾಗದಂತೆ ಧೂಳು ಮತ್ತು ಕಲೆ ಗುರುತುಗಳನ್ನು ತೆಗೆದುಹಾಕುತ್ತದೆ. ಈ ಸರಳ ಕ್ಲೀನಿಂಗ್ ಟಿಪ್ಸ್‌ಗಳನ್ನು ಅನುಸರಿಸುವ ಮೂಲಕ ನಿಮ್ಮ ಮನೆಯ ಗೋಡೆಗಳನ್ನು ಹೊಸದರಂತೆ ಕಾಣುವಂತೆ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




