AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಗ್ಯವಂತ ಜೀವನಕ್ಕೆ ಸರಿಯಾದ ಆಹಾರ ಕ್ರಮ ತಿಳಿದಿರಿ: ಬಾಬಾ ರಾಮದೇವ್

Patanjali's Baba Ramdev explains the importance of healthier food habits: ಆಹಾರ ಯಾವಾಗಲೂ ಸತ್ವಯುತವಾಗಿರಬೇಕು. ಸರಿಯಾದ ಸಮಯ ಮತ್ತು ರೀತಿಯಲ್ಲಿ ಸೇವಿಸಬೇಕು. ಇದು ದೇಹವು ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಅನಾರೋಗ್ಯವನ್ನು ದೂರವಿಡಲು ಸಹಾಯ ಮಾಡುತ್ತದೆ. ಇತ್ತೀಚೆಗೆ, ಬಾಬಾ ರಾಮದೇವ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೊವೊಂದರಲ್ಲಿ ಆರೋಗ್ಯವಾಗಿರಲು ನೀವು ಯಾವ ಆಹಾರ ಪದ್ಧತಿಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆರೋಗ್ಯವಂತ ಜೀವನಕ್ಕೆ ಸರಿಯಾದ ಆಹಾರ ಕ್ರಮ ತಿಳಿದಿರಿ: ಬಾಬಾ ರಾಮದೇವ್
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2025 | 7:58 PM

Share

ನಿಮ್ಮ ಆಹಾರಕ್ರಮ ಅಥವಾ ಡಯಟ್​ನಲ್ಲಿ ಆರೋಗ್ಯಯುತ ಆಹಾರಗಳನ್ನು ಒಳಗೊಂಡಿರುವುದು ಬಹಳ ಮುಖ್ಯ. ವಿವಿಧ ರೋಗಗಳನ್ನು ತಡೆಗಟ್ಟಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿ ನೀಡುವುದೇ ಈ ಸತ್ವಯುತ ಆಹಾರಗಳು. ಇತ್ತೀಚಿನ ದಿನಗಳಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ತಮ್ಮ ಡಯಟ್​ನಲ್ಲಿ ವಿವಿಧ ರೀತಿಯ ಆಹಾರಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಪ್ರತಿಯೊಬ್ಬರೂ ಕೂಡ ಅವರವರ ದೇಹದ ಅಗತ್ಯಗಳಿಗೆ ಅನುಗುಣವಾಗಿ ನಿರ್ದಿಷ್ಟ ಆಹಾರಾಗಳನ್ನು ಡಯಟ್​ನಲ್ಲಿ ಒಳಗೊಳ್ಳುವುದು ಬಹಳ ಮುಖ್ಯ. ಈ ವಿಚಾರದಲ್ಲಿ ನಮ್ಮ ದೇಹಕ್ಕೆ ಬೇಕಿಲ್ಲದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಜನರ ಆಹಾರ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಹೆಚ್ಚಿನ ಜನರು ದಿನಕ್ಕೆ ಮೂರು ಬಾರಿ ಊಟ ಮಾಡುವುದುಂಟು. ಕೆಲವರು ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ದಿನಕ್ಕೆ ನಾಲ್ಕರಿಂದ ಐದು ಬಾರಿ ತಿನ್ನಬಹುದು. ನೀವು ವ್ಯಾಯಾಮ ಮಾಡದಿದ್ದರೆ ಮತ್ತು ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತರೆ, ಅದು ದೇಹದ ಕೊಬ್ಬು ಮತ್ತು ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವರು ತೂಕ ಇಳಿಸಲು ವಿವಿಧ ರೀತಿಯ ಉಪವಾಸಗಳನ್ನು ಅಭ್ಯಾಸ ಮಾಡುತ್ತಾರೆ. ಆಹಾರವನ್ನು ತಿನ್ನುವ ಸರಿಯಾದ ಕ್ರಮ ಬಹಳ ಕಡಿಮೆ ಜನರಿಗೆ ತಿಳಿದಿದೆ. ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರು ಯೂಟ್ಯೂಬ್‌ನಲ್ಲಿ ತಮ್ಮ ಒಂದು ವೀಡಿಯೊದಲ್ಲಿ ಆರೋಗ್ಯ ದಿನಚರಿಯನ್ನು ಹೇಗೆ ಇಟ್ಟುಕೊಳ್ಳಬೇಕೆಂದು ವಿವರಿಸಿದ್ದಾರೆ. ಅದರಲ್ಲಿ ಅವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಊಟ ವಿಚಾರದಲ್ಲಿ ಎಚ್ಚರ… ಸರಿಯಾದ ಆಹಾರ, ಸರಿಯಾದ ಸಮಯ, ಸರಿಯಾದ ಕ್ರಮ ಮುಖ್ಯ: ಬಾಬಾ ರಾಮದೇವ್ ಸಲಹೆಗಳಿವು

ಈ ಅಭ್ಯಾಸಗಳನ್ನು ಬದಲಾಯಿಸಿ

ಬಾಬಾ ರಾಮದೇವ್ ಅವರು ಇತ್ತೀಚಿನ ತಮ್ಮ ವಿಡಿಯೋವೊಂದರಲ್ಲಿ ಆಹಾರಕ್ರಮ ಎಷ್ಟು ಮಹತ್ವ ಎಂದು ವಿವರಿಸಿದ್ದಾರೆ. ನಿಮ್ಮ ಜೀವನದ ಆದ್ಯತೆಗಳನ್ನು ಹೆಲ್ತ್ ಡೈರಿಯಲ್ಲಿ ಬರೆಯಬಹುದು. ಜೀವನ ಅಥವಾ ಆರೋಗ್ಯದಲ್ಲಿ ನೀವು ಮಾಡಲು ಬಯಸುವ ಯಾವುದೇ ಬದಲಾವಣೆಗಳನ್ನು ಬರೆಯಬಹುದು. ಇದು ನಿಮ್ಮನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ ಎಂದು ಬಾಬಾ ಹೇಳಿದ್ದಾರೆ.

ಶೇ 99ರಷ್ಟು ಜನರು, ತಾವು ಹೇಗೆ ತಿನ್ನುತ್ತಿದ್ದೇವೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ. ಕೆಲವರು ಗಬಗಬನೆ ತಿಂದುಬಿಡುವುದುಂಟು. ನಿಧಾನವಾಗಿ ತಿನ್ನಬೇಕೆಂದು ಬುದ್ಧಿ ಹೇಳಿದರೆ ಅದನ್ನು ಅವರು ಒಪ್ಪುವುದಿಲ್ಲ. ಬೇಗ ಬೇಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿರಬೇಕು. ಇದರ ಜೊತೆಗೆ, ಅತಿಯಾಗಿ ತಿನ್ನುವುದೂ ಕೂಡ ತಪ್ಪು ಎಂದು ಪತಂಜಲಿ ಸಹ-ಸಂಸ್ಥಾಪಕರು ತಮ್ಮ ವಿಡಿಯೋದಲ್ಲಿ ತಿಳಿಸಿದ್ದಾರೆ.

ತಪ್ಪು ಸಂಯೋಜನೆಯ ಆಹಾರಗಳು

ಹಾಲು ಮತ್ತು ಉಪ್ಪು ಇತ್ಯಾದಿ ತಪ್ಪು ಆಹಾರ ಸಂಯೋಜನೆಯನ್ನು ತಪ್ಪಿಸಬೇಕು. ಕೆಲವರು ಹಾಲಿನಿಂದ ತಯಾರಿಸಿದ ಚಹಾದೊಂದಿಗೆ ಉಪ್ಪುಮಿಶ್ರಿತ ಬಿಸ್ಕತ್ ಅಥವಾ ತಿಂಡಿಗಳನ್ನು ತಿನ್ನುವುದುಂಟು. ಇದು ತಪ್ಪು ಆಹಾರ ಸಂಯೋಜನೆ. ಇನ್ನೂ ಹಲವರು ಮೊಸರು ಮತ್ತು ಹಾಲಿನ ಪಾಯಸ ಎರಡನ್ನೂ ಒಂದೇ ಭೋಜನದಲ್ಲಿ ತಿನ್ನುತ್ತಾರೆ. ಇದೂ ಕೂಡ ಆರೋಗ್ಯಕ್ಕೆ ಹಾನಿ ಮಾಡಬಹುದು.

ಇದನ್ನೂ ಓದಿ: ಮಲಬದ್ಧತೆ ನಿವಾರಿಸಲು ಬಾಬಾ ರಾಮದೇವ್ ಯೋಗ ಮತ್ತು ಆಯುರ್ವೇದ ಮಾರ್ಗೋಪಾಯಗಳು

ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ತಿನ್ನಿರಿ

ಎಲ್ಲಾ ಆಹಾರ ಮತ್ತು ಇತರ ಖಾದ್ಯಗಳನ್ನು ನಿಮ್ಮ ದೇಹದ ವಾತ, ಪಿತ್ತ ಮತ್ತು ಕಫ ಗುಣಗಳಿಗೆ ಅನುಗುಣವಾಗಿ ಸೇವಿಸಬೇಕು. ಉದಾಹರಣೆಗೆ, ಮಧುಮೇಹ ರೋಗ ಇದ್ದರೆ ಹೆಚ್ಚು ಸಿಹಿ ತಿನ್ನುವುದರಿಂದ ಸಕ್ಕರೆ ಹೆಚ್ಚಾಗುತ್ತದೆ. ಬ್ಲಡ್ ಪ್ರೆಷರ್ ಕಾಯಿಲೆ ಇದ್ದಾಗ ಹೆಚ್ಚು ಉಪ್ಪು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹೆಚ್ಚು ಎಣ್ಣೆಯುಕ್ತ ಆಹಾರವನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹೆಚ್ಚು ಮೆಣಸಿನಕಾಯಿ ತಿನ್ನುವುದರಿಂದ ಆ್ಯಸಿಡಿಟಿ ಹೆಚ್ಚಾಗುತ್ತದೆ. ಹೆಚ್ಚು ಎಣ್ಣೆಯುಕ್ತ ಮತ್ತು ತಣ್ಣನೆಯ ವಸ್ತುಗಳನ್ನು ತಿನ್ನುವುದರಿಂದ ಕಫ-ಶೀತ ಹೆಚ್ಚಾಗುತ್ತದೆ. ಅದೇ ರೀತಿ, ಹೆಚ್ಚು ಹುಳಿ ಆಹಾರವನ್ನು ತಿನ್ನುವುದರಿಂದ ವಾತ ರೋಗ ಹೆಚ್ಚಾಗುತ್ತದೆ. ಇದು ಕೀಲು ಮತ್ತು ಬೆನ್ನು ನೋವನ್ನು ಉಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ದೇಹದ ಸ್ವಭಾವ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇಂಥ ಆಹಾರ ವಸ್ತುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಬಾಬಾ ರಾಮದೇವ್ ಅವರ ವಿಡಿಯೋ

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ