AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರೇ… ಮನೆ ಕೆಲಸ ಮುಗಿಸಿ ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಈ ಸ್ಮಾರ್ಟ್‌ ಟಿಪ್ಸ್‌ ಪಾಲಿಸಿ

ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಬೆಳಗ್ಗಿನ ಸಮಯವನ್ನು ನಿಭಾಯಿಸೋದು ತುಂಬಾನೇ ಕಷ್ಟ. ಅಡುಗೆ, ಮನೆ ಕೆಲಸ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಸೇರಿದಂತೆ ಒಂದೇ ಸಮಯದಲ್ಲಿ ಬಹುಕಾರ್ಯವನ್ನು ಮಾಡಬೇಕಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಮುಗಿಸಿ ಆಫೀಸ್‌ಗೆ ಹೋಗುವಾಗ ತಡವಾಗುತ್ತದೆ. ನೀವು ಕೂಡ ಮನೆ ಕೆಲಸ ಮುಗಿಸಿ ಆಫೀಸ್‌ಗೆ ಹೋಗುವಾಗ ತಡ ಆಗ್ತಿದ್ಯಾ, ಹಾಗಿದ್ರೆ ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗಲು ಈ ಸಲಹೆ ಪಾಲಿಸಿ.

ಮಹಿಳೆಯರೇ… ಮನೆ ಕೆಲಸ ಮುಗಿಸಿ ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಈ ಸ್ಮಾರ್ಟ್‌ ಟಿಪ್ಸ್‌ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Google
ಮಾಲಾಶ್ರೀ ಅಂಚನ್​
|

Updated on: Oct 12, 2025 | 9:57 AM

Share

ಮಹಿಳೆಯರಿಗೆ (women) ಅದರಲ್ಲೂ ಹೊರಗಡೆ ಕೆಲಸಕ್ಕೆ ಹೋಗುವಂತಹ ಮಹಿಳೆಯರಿಗೆ ಬೆಳಗ್ಗಿನ ಸಮಯವನ್ನು ನಿಭಾಯಿಸೋದೇ ದೊಡ್ಡ ಕೆಲಸವಾಗಿರುತ್ತದೆ. ಹೌದು ಅಡುಗೆ, ಇತರೆ ಮನೆಕೆಲಸ, ಮಕ್ಕಳನ್ನು ಸ್ಕೂಲ್‌ಗೆ ಕಳುಹಿಸಬೇಕು ಎನ್ನುವ ಒತ್ತಡ ಒಂದು ಕಡೆಯಾದ್ರೆ, ಮತ್ತೊಂದೆಡೆ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹೋಗ್ಬೇಕು ಎನ್ನುವ ಆತುರ. ಹೀಗೆ ಒಂದೇ ಸಮಯಕ್ಕೆ ಮನೆಯ ಜವಾಬ್ದಾರಿಗಳ ಜೊತೆಗೆ ಆಫೀಸ್‌ ಕೆಲಸವನ್ನು ನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆ ನೀವು ಕೂಡ ಮನೆ ಕೆಲಸವನ್ನು ಮುಗಿಸಿ ಕೆಲಸದ ಸ್ಥಳಕ್ಕೆ ಹೋಗುವಾಗ ತಡ ಆಗ್ತಿದ್ಯಾ, ತಡ ಆಯಿದೆಂದು ಮ್ಯಾನೇಜರ್‌, ಬಾಸ್‌ ಗದರುತ್ತಿದ್ದಾರಾ? ಹಾಗಿದ್ರೆ ಈ ಎಲ್ಲಾ ಟೆನ್ಶನ್‌ಗಳಿಂದ ತಪ್ಪಿಸಿಕೊಂಡು ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಹೋಗಲು ಈ ಒಂದಷ್ಟು ಸ್ಮಾರ್ಟ್‌ ಟಿಪ್ಸ್‌ಗಳನ್ನು ಅನುಸರಿಸಿ. ಹೀಗೆ ಮಾಡುವುದರಿಂದ ಮನೆ ಕೆಲಸವೂ ಆಗುತ್ತೆ, ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲೂ ಸಾಧ್ಯವಾಗುತ್ತದೆ.

ಮನೆ ಕೆಲಸ ಮುಗಿಸಿ ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಟಿಪ್ಸ್:

ರಾತ್ರಿಯಲ್ಲಿ ಯೋಜನೆ ಮಾಡಿ, ಕೆಲವು ಕೆಲಸಗಳನ್ನು ಬೇಗನೆ ಮುಗಿಸಿ ಬಿಡಿ: ನಿಮ್ಮ ಮರುದಿನದ ಕೆಲಸಗಳನ್ನು ಹಿಂದಿನ ರಾತ್ರಿಯೇ ಯೋಜಿಸಬೇಕು. ಇದು ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ ಮರುದಿನದ ಅಡುಗೆಗೆ ಬೇಕಾದಂತಹ ಕೆಲವೊಂದಿಷ್ಟು ತರಕಾರಿಗಳನ್ನು ರಾತ್ರಿಯೇ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿ ಇಡಬಹುದು, ಏನು ಅಡುಗೆ, ತಿಂಡಿ ಮಾಡ್ಬೇಕು ಅನ್ನೋದನ್ನು ಹಿಂದಿನ ರಾತ್ರಿಯೇ ಯೋಜನೆ ಮಾಡುವಂತದ್ದು ಮಾಡಿ, ಜೊತೆಗೆ ಪಾತ್ರೆಗಳನ್ನು ರಾತ್ರಿಯೇ ಕ್ಲೀನ್‌ ಮಾಡಿ ಇಟ್ಟುಕೊಳ್ಳಿ ಇದು ಬೆಳಗಿನ ಕೆಲಸಗಳನ್ನು ತ್ವರಿತವಾಗಿ ಮತ್ತು ಯಾವುದೇ ಗಡಿಬಿಡಿಯಿಲ್ಲದೆ ಮುಗಿಸಲು ಸಹಕಾರಿಯಾಗಿದೆ.

ಬೇಗ ಏಳುವ ಅಭ್ಯಾಸ ರೂಢಿಸಿಕೊಳ್ಳಿ: ಮನೆಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಬೇಗ ಏಳುವುದು ಬಹಳ ಮುಖ್ಯ. ನೀವು ಬೇಗ ಎದ್ದಷ್ಟೂ, ಕೆಲಸಗಳನ್ನು ಮುಗಿಸಲು ನಿಮಗೆ ಹೆಚ್ಚು ಸಮಯ ಸಿಗುತ್ತದೆ. ಬೇಗ ಏಳುವುದರಿಂದ ನಿಮ್ಮ ಕೆಲಸಗಳನ್ನು ಶಾಂತ ಮನಸ್ಸಿನಿಂದ ನಿರ್ವಹಿಸಲು ನಿಮಗೆ ಅವಕಾಶ ಸಿಗುವುದಲ್ಲದೆ, ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿರಿಸುತ್ತದೆ. ಜೊತೆಗೆ ಬೇಗ ಏಳುವುದರಿಂದ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಲು ಸಹಾಯವಾಗುತ್ತದೆ.

ಇದನ್ನೂ ಓದಿ
Image
ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಜಿಪುಣತನ ತೋರಬೇಡಿ
Image
ಶೌಚಾಲಯಕ್ಕಿಂತ ಕೊಳಕಾದ 5 ಗೃಹೋಪಯೋಗಿ ವಸ್ತುಗಳು ಇವೆ ನೋಡಿ
Image
ಜೋಡಿ ಬಾಳೆಹಣ್ಣು ತಿಂದ್ರೆ ಅವಳಿ-ಜವಳಿ ಮಕ್ಕಳು ಹುಟ್ಟುತ್ತೆ ಅನ್ನೋದು ನಿಜನಾ?
Image
ಸ್ವಿಚ್‌ಬೋರ್ಡ್‌ ಸ್ವಚ್ಛಗೊಳಿಸುವ ಸಿಂಪಲ್‌ ಸಲಹೆಗಳು

ನಿಮ್ಮ ಕುಟುಂಬದವರ ಸಹಾಯ ಪಡೆಯಿರಿ: ಮನೆಕೆಲಸಗಳು ಕೇವಲ ಮಹಿಳೆಯ ಜವಾಬ್ದಾರಿಯಲ್ಲ. ಮನೆಯವರೆಲ್ಲಾ ಒಟ್ಟಿಗೆ ಕೆಲಸ ಮಾಡುವುದರಿಂದ ಎಲ್ಲಾ ಕೆಲಸಗಳು ಬೇಗ ಮುಗಿಯುತ್ತವೆ. ಮನೆ ಕೆಲಸ ಮಾಡುವಾಗ ಗಂಡ ಮತ್ತು ಮಕ್ಕಳ ಸಹಾಯವನ್ನು ಪಡೆಯಿರಿ. ಹೀಗೆ ಹಂಚಿಕೊಂಡು ಕೆಲಸ ಮಾಡಿದಾಗ, ಮನೆಕೆಲಸ ಬೇಗ ಮುಗಿಯುತ್ತದೆ ಜೊತೆಗೆ ನೀವು ಸಮಯಕ್ಕೆ ಸರಿಯಾಗಿ ಆಫೀಸ್‌ಗೆ ತಲುಪಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಯಾವತ್ತಿಗೂ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಜಿಪುಣತನವನ್ನು ತೋರಬೇಡಿ

ಬಹು ಕಾರ್ಯವನ್ನು ಮಾಡಿ: ನಿಮ್ಮ ಬೆಳಗಿನ ಸಮಯವನ್ನು ಸರಿಯಾಗಿ ನಿರ್ವಹಿಸಲು ಬಯಸಿದರೆ ಒಂದೇ ಸಮಯಕ್ಕೆ ಬಹುಕಾರ್ಯಗಳನ್ನು ಮಾಡಿ ಉದಾಹರಣೆಗೆ, ನೀವು ಉಪಾಹಾರ ಮಾಡುವುದರ ಜೊತೆಗೆ  ನೀವು ಏಕಕಾಲದಲ್ಲಿ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಬಹುದು. ಆಹಾರ ಬೇಯುವವರೆಗೂ ಗ್ಯಾಸ್‌ ಒಲೆ ಮುಂದೆ ಕಾಯುವ ಬದಲು, ಆ ಸಮಯದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ. ಇದು ಸಮಯವನ್ನು ಉಳಿಸುತ್ತದೆ.

ನಿಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ: ಮನೆ ಕೆಲಸ, ಆಫೀಸ್‌ ಕೆಲಸ ಎರಡನ್ನೂ ನಿಭಾಯಿಸುವುದು ಬಹಳ ಕಷ್ಟ. ಮನೆ ಕೆಲಸ ಎಲ್ಲಾ ಮುಗಿಸಿ ಆಫೀಸ್‌ಗೆ ಹೋದ್ರು, ಒತ್ತಡದಿಂದ ಕೆಲಸ ಕಾರ್ಯಗಳನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿರುವುದಿಲ್ಲ. ಹಾಗಾಗಿ ಒತ್ತಡದಿಂದ ಮುಕ್ತರಾಗಿ, ದಿನವಿಡೀ ಚೈತನ್ಯದಿಂದ ಇರಲು ನಿಮಗಾಗಿ ನೀವು ಸಲ್ವ ಸಮಯ ಮೀಸಲಿಡಿ. ಉದಾಹರಣೆಗೆ ಬೆಳಗ್ಗೆ ಬೇಗ ಎದ್ದು, 10 ನಿಮಿಷಗಳ ಕಾಲ ಧ್ಯಾನ ಮಾಡಿ. ಕಾಫಿ ಕುಡಿಯುತ್ತಾ ಎಲ್ಲಾ ಟೆನ್ಶನ್‌ಗಳನ್ನು ಬದಿಗಿಟ್ಟು ಒಬ್ಬರೇ ಸ್ವಲ್ಪ ಹೊತ್ತು ಸಮಯ ಕಳೆಯಿರಿ. ಇದು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ದಿನವಿಡೀ ನಿಮ್ಮನ್ನು ಚೈತನ್ಯದಿಂದ ಇರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ