Chanakya Niti: ಯಾವತ್ತಿಗೂ ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಜಿಪುಣತನವನ್ನು ತೋರಬೇಡಿ
ಸುಖಾಸುಮ್ಮನೆ ದುಡ್ಡು ಖರ್ಚು ಮಾಡಬಾರದು, ಹಣ ಖರ್ಚು ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಹೇಳ್ತಾರೆ. ಆದರೆ ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಹಿಂದೇಟು ಹಾಕಬಾರದು, ಇಲ್ಲಿ ಮನಪೂರ್ವಕವಾಗಿ ಖರ್ಚು ಮಾಡಿ, ಇದರಿಂದ ನೀವು ಪ್ರಗತಿಯನ್ನು ಸಾಧಿಸುವುದರ ಜೊತೆಗೆ ನಿಮಗೆ ಪುಣ್ಯವೂ ಲಭಿಸುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಿದ್ರೆ ಜಿಪುಣತನವನ್ನು ತೋರದೆ ಯಾವ ಸ್ಥಳಗಳಲ್ಲಿ ಹಣ ಖರ್ಚು ಮಾಡಬೇಕೆಂಬುದನ್ನು ನೋಡೋಣ ಬನ್ನಿ.

ಹೆಚ್ಚು ಹಣ ಖರ್ಚು ಮಾಡಬಾರದು, ಇದರಿಂದ ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ಹೆಚ್ಚಿನವರು ತಾವು ದುಡಿದ ಹಣವನ್ನೆಲ್ಲಾ ಕೂಡಿಡುತ್ತಾರೆ. ಅದರಲ್ಲಿ ಕೆಲವರು ಒಂದು ರೂಪಾಯಿ ಹಣ ಖರ್ಚು ಮಾಡಲು ಸಹ ಸಿಕ್ಕಾಪಟ್ಟೆ ಜಿಪುಣತನವನ್ನು ತೋರಿಸುತ್ತಾರೆ. ದುಂದು ವೆಚ್ಚಗಳನ್ನು ಮಾಡದೆ ಹಣ ಉಳಿತಾಯ ಮಾಡುವುದು ಒಳ್ಳೆಯ ಅಭ್ಯಾಸ, ಆದ್ರೆ ಈ ಮೂರು ಸ್ಥಳಗಳಲ್ಲಿ ಖರ್ಚು ಮಾಡಲು ಎಂದಿಗೂ ಹಿಂದೇಟು ಹಾಕಬಾರದು ಎನ್ನುತ್ತಾರೆ ಚಾಣಕ್ಯ (Chanakya). ನಿಮಗೆ ಪುಣ್ಯ ಲಭಿಸಬೇಕು, ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂದು ಬಯಸದರೆ ಈ ಮೂರು ಸ್ಥಳಗಳಲ್ಲಿ ಧಾರಾಳವಾಗಿ ಖರ್ಚು ಮಾಡಬೇಕಂತೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಜಿಪುಣತನ ತೋರಬೇಡಿ:
ಧಾರ್ಮಿಕ ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಗೆ ದೇಣಿಗೆ ನೀಡುವುದು: ಧಾರ್ಮಿಕ ಉದ್ದೇಶಗಳು ಮತ್ತು ಆಚರಣೆಗಳಿಗೆ ಹಣವನ್ನು ದಾನ ಮಾಡುವುದನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರ ತತ್ವಗಳ ಪ್ರಕಾರ, ಧಾರ್ಮಿಕ ಸಮಾರಂಭಗಳು ಮತ್ತು ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ವ್ಯಕ್ತಿಗೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ ಮತ್ತು ಯಾವಾಗಲೂ ಹಣದ ಹರಿವು ಸ್ಥಿರವಾಗಿರುತ್ತದೆ. ನೀವು ಸಹ ಜೀವನದಲ್ಲಿ ಪ್ರಗತಿಯನ್ನು ಸಾಧಿಸಲು ಬಯಸಿದರೆ, ನಿಮ್ಮ ಗಳಿಕೆಯ ಒಂದು ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ದಾನ ಮಾಡಿ.
ಸಾಮಾಜಿಕ ಕಾರ್ಯಗಳಿಗೆ ದಾನ ನೀಡುವುದು: ಸಾಮಾಜಿಕ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡಲು ಯಾರೂ ಎಂದಿಗೂ ಹಿಂಜರಿಯಬಾರದು . ಅವಕಾಶ ಸಿಕ್ಕಾಗಲೆಲ್ಲಾ ಉದಾರವಾಗಿ ಖರ್ಚು ಮಾಡಬೇಕು ಎನ್ನುತ್ತಾರೆ ಚಾಣಕ್ಯ. ನಿಮ್ಮ ಖಜಾನೆ ಯಾವಾಗಲೂ ತುಂಬಿರಬೇಕೆಂದು ನೀವು ಬಯಸಿದರೆ, ನಿಮ್ಮ ಗಳಿಕೆಯ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ದಾನ ಮಾಡಿ. ಇದು ಸಮಾಜದಲ್ಲಿ ನಿಮ್ಮ ಗೌರವವನ್ನು ಸಹ ಹೆಚ್ಚಿಸುತ್ತದೆ, ಜೊತೆಗೆ ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಜೀವನದಲ್ಲಿ ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ: ಇಂತಹ ವ್ಯಕ್ತಿಗಳು ಭೂಮಿಗೆ ಭಾರ ಎನ್ನುತ್ತಾರೆ ಚಾಣಕ್ಯ
ಬಡವರು ಮತ್ತು ನಿರ್ಗತಿಕರಿಗೆ ದಾನ ಮಾಡುವುದು: ನಿರ್ಗತಿಕ ಅಥವಾ ಬಡ ವ್ಯಕ್ತಿಗೆ ದಾನ ಮಾಡಲು ಹಿಂಜರಿಯಬಾರದು ಈ ವಿಷಯದಲ್ಲಿ ಎಂದಿಗೂ ಜಿಪುಣತನ ತೋರಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಬೇಕಾದರೆ, ಅಗತ್ಯವಿರುವವರಿಗೆ ಸಹಾಯ ಮಾಡಿ. ಅಗತ್ಯವಿರುವವರಿಗೆ ಆಹಾರವನ್ನು ದಾನ ಮಾಡಿ. ಅಲ್ಲದೆ, ಬಡ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಖರ್ಚು ಮಾಡಿ. ನೀವು ಅಸಹಾಯಕರಿಗೆ ಸಹಾಯ ಮಾಡಿದರೆ, ನಿಮ್ಮ ಈ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ಹೀಗೆ ದೇವರ ಆಶೀರ್ವಾದ ಲಭಿಸಿದರೆ ಖಂಡಿತವಾಗಿಯೂ ನೀವು ಜೀವನದಲ್ಲಿ ಹೆಚ್ಚು ಹೆಚ್ಚು ಪ್ರಗತಿಯನ್ನು ಸಾಧಿಸುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








