AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಭಾವನೆಗಳು ಹೇಗಿವೆ ಎಂಬುದನ್ನು ಈ ಚಿತ್ರದಲ್ಲಿ ನೀವು ಗಮನಿಸುವ ಅಂಶ ತಿಳಿಸುತ್ತದೆ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವಂತಹ ಆಟ ಮಾತ್ರವಲ್ಲದೆ, ಇವುಗಳು ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧಾನವೂ ಹೌದು. ಇವುಗಳ ಮೂಲಕ ನಾವು ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬ ಆಧಾರದ ಮೇಲೆ ನೀವು ಆಳವಾದ ಭಾವನೆಯುಳ್ಳವರೇ ಅಥವಾ ಮುಕ್ತ ಮನೋಭಾವದವರೇ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ಭಾವನೆಗಳು ಹೇಗಿವೆ ಎಂಬುದನ್ನು ಈ ಚಿತ್ರದಲ್ಲಿ ನೀವು ಗಮನಿಸುವ ಅಂಶ ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on:Oct 12, 2025 | 3:10 PM

Share

ಆಪ್ಟಿಕಲ್‌ ಇಲ್ಯೂಷನ್‌ಗಳು‌ (Optical illusion) ಒಂದು ಬಾರಿಗೆ ಕಣ್ಣು ಮತ್ತು ಮನಸ್ಸಿಗೆ ಭ್ರಮೆಯನ್ನು ಉಂಟು ಮಾಡುವಂತಹ ಒಗಟಿನ ಆಟಗಳಾಗಿವೆ. ಈ ದೃಶ್ಯ ಒಗಟುಗಳು ನಮ್ಮ ಏಕಾಗ್ರತೆ, ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸುವುದರ ಜೊತೆಗೆ ಬುದ್ಧಿವಂತಿಕೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ. ಇಷ್ಟು ಮಾತ್ರವಲ್ಲದೆ ಇವುಗಳು ಒಬ್ಬ ವ್ಯಕ್ತಿಯ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ಬಹಿರಂಗಪಡಿಸುತ್ತದೆ. ಹೌದು ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧವಾಗಿದ್ದು, ಇದು ವ್ಯಕ್ತಿಯ ಮನಸ್ಥಿತಿ, ಆತ ಹೇಗೆ ಯೋಚಿಸುತ್ತಾನೆ ಸೇರಿದಂತೆ ಆತನ ಕುತೂಹಲಕಾರಿ ಒಳನೋಟಗಳ ಬಗ್ಗೆ ಬಹಿರಂಗಪಡಿಸುತ್ತದೆ. ಇಲ್ಲೊಂದು ಅದೇ ರೀತಿಯ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಗಿಟರ್‌ ಅಥವಾ ಕೈಬೆರಳು ನಿಮಗ್ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ಭಾವನೆಗಳು ಹೇಗಿದೆ ಎಂಬುದನ್ನು ಪರೀಕ್ಷಿಸಿ.

ನಿಮ್ಮ ಭಾವನೆಗಳು ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು:

ಒಬ್ಬೊಬ್ಬರ ಭಾವನೆಗಳು, ಮನಸ್ಥಿತಿಗಳು ಭಿನ್ನವಾಗಿರುತ್ತವೆ. ನಿಮ್ಮ ನಿಗೂಢ ಭಾವನೆಗಳು ಹೇಗಿದೆ ಎಂಬುದನ್ನು ಈ ಮೇಲಿನ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮುಖಾಂತರ ತಿಳಿಯಬಹುದು. ಈ ಚಿತ್ರದಲ್ಲಿ ಗಿಟಾರ್‌ ಮತ್ತು ಕೈ ಬೆರಳು ಈ ಎರಡು ಅಂಶಗಳಿದ್ದು, ಅದರಲ್ಲಿ ಮೊದಲು ನಿಮಗ್ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನಿಮ್ಮ ಭಾವನೆ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಕೈ ಬೆರಳುಗಳು: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ನಿಮಗೆ ಕೈಬೆರಳು ಕಾಣಿಸಿಕೊಂಡರೆ ನೀವು ಕರುಣಾಳು, ಪೋಷಿಸುವವರು ಮತ್ತು ಪ್ರೀತಿಸುವ ಹೃದಯದ ವ್ಯಕ್ತಿ ಹಾಗೂ ಆಳವಾದ ಭಾವನೆಯುಳ್ಳವರು ಎಂದರ್ಥ. ನೀವು ಇತರರಿಗೆ ತುಂಬಾ ಪ್ರೀತಿಯನ್ನು ನೀಡುವುದರ ಜೊತೆಗೆ ಇತರರೂ ನಿಮ್ಮನ್ನು ತುಂಬಾನೇ ಪ್ರೀತಿಸುತ್ತಾರೆ.  ಅಂದ್ರೆ ನೀವು ಅಷ್ಟು ಮೋಡಿ ಮಾಡುವ ಸ್ವಭಾವವನ್ನು ಹೊಂದಿದ್ದೀರಿ ಎಂದರ್ಥ. ಪ್ರೀತಿಯ ವಿಷಯದಲ್ಲೂ ಅಷ್ಟೇ ನೀವು ತುಂಬಾನೇ ಪ್ರಾಮಾಣಿಕ ವ್ಯಕ್ತಿ. ನೀವು ತುಂಬಾ ಮೃದು ಸ್ವಭಾವದವರಾಗಿದ್ದರೂ, ಕೆಲವೊಮ್ಮೆ ಕೆಲವು  ಜನರು ವಿಷಕಾರಿಯಾಗಿದ್ದರೆ ಅಥವಾ ಅವರು ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ ಅವರನ್ನು ದೂರವಿಡಲು ನೀವು ಯಾವುದೇ ಹಿಂಜರಿಕೆಯನ್ನು ತೋರುವುದಿಲ್ಲ. ನೀವು ಶಾಂತಿ ಮತ್ತು ಸಾಮರಸ್ಯವನ್ನು ಇಷ್ಟಪಡುತ್ತೀರಿ ಮತ್ತು ನೀವು ಏಕಾಂತತೆಯಲ್ಲಿ ಸಮಯ ಕಳೆಯಲು ಇಷ್ಟಪಡುತ್ತೀರಿ. ಮುಖ್ಯವಾಗಿ ನಿಮ್ಮ ಜೀವನವನ್ನು ಉತ್ತಮವಾಗಿ ಪರಿವರ್ತಿಸುವ ಶಕ್ತಿ ನಿಮ್ಮಲ್ಲಿದೆ.

ಇದನ್ನೂ ಓದಿ
Image
ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
Image
ನಿಮ್ಮ ನಿಗೂಢ ಮನಸ್ಥಿತಿ ಹೇಗಿದೆ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
Image
ಈ ಚಿತ್ರದಲ್ಲಿ ಯಾವ ಚೆಂಡು ದೊಡ್ಡದಾಗಿ ಕಾಣಿಸುತ್ತಿದೆ?
Image
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರವೇ ಬಹಿರಂಗಪಡಿಸುತ್ತದೆ

ಇದನ್ನೂ ಓದಿ: ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಮ್ಮ ಸ್ವಭಾವ ಹೇಗಿದೆ ಎಂಬುದನ್ನು ಚಿತ್ರದ ಮೂಲಕ ತಿಳಿಯಿರಿ

ಗಿಟಾರ್:‌ ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನಿಮಗೆ ಮೊದಲು ಗಿಟಾರ್‌ ಕಾಣಿಸಿಕೊಂಡರೆ ನೀವು ಸೃಜನಶೀಲರು ಮತ್ತು ನವೀನರು ಎಂದರ್ಥ. ನೀವು ಸ್ವಾವಲಂಬಿಗಳು, ಸ್ವತಂತ್ರರು, ಮುಕ್ತ ಮನಸ್ಸಿನವರಾದ ನೀವು ಇತರರ ಕಮಾಂಡ್‌ಗಳನ್ನು ಪಾಲಿಸಲು ಇಷ್ಟಪಡುವುದಿಲ್ಲ. ಯಾವಾಗಲೂ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೆಂದರೆ ನಿಮಗಿಷ್ಟ. ಭಾವನಾತ್ಮಕವಾಗಿ ಬಲಶಾಲಿಗಳಾದ ನೀವು, ಕಂಡ ಕನಸನ್ನು ನನಸಾಗಿಸುವಲ್ಲಿ ದೃಢನಿಶ್ಚಯ ಹೊಂದಿದ್ದೀರಿ. ನಿಮ್ಮಲ್ಲಿ ಕೆಲವರು ಅಧಿಕಾರ ಚಲಾಯಿಸುವವರಾಗಿರುತ್ತಾರೆ, ನಾಯಕತ್ವ ಗುಣವನ್ನು ಹೊಂದಿರುವವರಿದ್ದಾರೆ.  ಅಲ್ಲದೆ ನೀವು ರಹಸ್ಯಗಳನ್ನು ನಿಗೂಢವಾಗಿ ಇಟ್ಟುಕೊಳ್ಳುವಲ್ಲಿ ನಿಪುಣರು. ಜೊತೆಗೆ ನ್ಯಾಯಯುತ ವ್ಯಕ್ತಿಗಳೂ ಹೌದು. ಹೆಚ್ಚಿನ ಸಂದರ್ಭಗಳಲ್ಲಿ ನೀವು ಪ್ರಬುದ್ಧರಾಗಿ ವರ್ತಿಸುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Sun, 12 October 25