Chanakya Niti: ಪ್ರತಿಯೊಬ್ಬ ಮನುಷ್ಯನೂ ನಾಯಿಯಿಂದ ಈ ನಾಲ್ಕು ಗುಣಗಳನ್ನು ಕಲಿಯಲೇಬೇಕು ಎನ್ನುತ್ತಾರೆ ಚಾಣಕ್ಯ
ನಾಯಿಯಷ್ಟು ನಿಯತ್ತಿನ ಪ್ರಾಣಿ ಈ ಭೂಮಿ ಮೇಲೆ ಬೇರೊಂದಿಲ್ಲ. ಹೌದು ಇವು ಒಂದು ತುತ್ತು ಊಟ ನೀಡಿದವರನ್ನು ತನ್ನ ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತವೆ, ಪ್ರೀತಿ ತೋರಿಸುತ್ತವೆ. ಅಷ್ಟೂ ನಿಯತ್ತು ಈ ನಾಯಿಗಳಿಗಿವೆ. ಈ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯ ಕಲಿಯಬೇಕಾದದ್ದು ಸಾಕಷ್ಟು ವಿಚಾರಗಳಿವೆ. ಅದರಲ್ಲೂ ಶ್ವಾನಗಳ ಈ ನಾಲ್ಕು ವಿಚಾರಗಳನ್ನು ಮನುಷ್ಯನಾದವನು ಕಲಿಯಲೇಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಅವುಗಳು ಯಾವುವು ಎಂಬ ಸಂಪೂರ ಮಾಹಿತಿ ಇಲ್ಲಿದೆ ನೋಡಿ.

ಈ ಭೂಮಿಯ ಮೇಲಿನ ನಿಯತ್ತಿನ ಪ್ರಾಣಿ ಎಂದರೆ ಅದು ನಾಯಿ (Dog). ತನಗೆ ಹಸಿದಾಗ ಒಂದು ಹೊತ್ತು ಊಟ ಹಾಕಿದ ವ್ಯಕ್ತಿಗಳನ್ನು, ತನಗೆ ಪ್ರೀತಿ ಮಮತೆ ತೋರಿದ ತನ್ನ ಮಾಲೀಕರನ್ನು ನಾಯಿಗಳು ಜೀವನಪರ್ಯಂತ ನೆನಪಿಟ್ಟುಕೊಳ್ಳುತ್ತವೆ. ಅವರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಿರುತ್ತವೆ. ಮಾಲೀಕರ ರಕ್ಷಣೆಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ನಾಯಿಗಳ ರಿಯಲ್ ಕಥೆಗಳನ್ನು ನೀವು ಕೂಡ ಕೇಳಿರಬಹುದಲ್ವಾ. ಅದಕ್ಕಾಗಿಯೇ ನಾಯಿಗಳನ್ನು ನಿಷ್ಠಾವಂತ ಪ್ರಾಣಿ ಅನ್ನೋದು. ಈ ನಿಷ್ಠಾವಂತ ಪ್ರಾಣಿಯಿಂದ ಮನುಷ್ಯರಾದ ನಾವು ಕಲಿಯಬೇಕಾದದ್ದು ಸಾಕಷ್ಟಿವೆ ಎಂದು ಚಾಣಕ್ಯರು ಹೇಳುತ್ತಾರೆ. ಹೌದು ತನ್ನ ಸ್ವಾರ್ಥಕ್ಕಾಗಿಯೇ ಇನ್ನೊಬ್ಬರ ನೆಮ್ಮದಿಯನ್ನು ಹಾಳು ಮಾಡುವಂತಹ ಮನುಷ್ಯ ನಾಯಿಯಿಂದ ಜೀವನ ಪಾಠವನ್ನು ಕಲಿಯಬೇಕು ಎಂದು ಅವರು ಹೇಳುತ್ತಾರೆ. ಆ ಜೀವನ ಪಾಠಗಳು ಯಾವುವು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಾಯಿಗಳಿಂದ ಕಲಿಯಬೇಕಾದ ಜೀವನಪಾಠಗಳಿವು:
ಸಿಗುವುದರಲ್ಲಿಯೇ ತೃಪ್ತಿ ಹೊಂದುವುದು: ನಾಯಿಗಳಿಗೆ ತಿನ್ನಲು ಏನು ಸಿಕ್ಕರೂ ಅದರಲ್ಲಿ ತೃಪ್ತಿ ಕಾಣುತ್ತವೆ. ಮೀನು ಸಿಕ್ಕರೂ ಸಂತೃಪ್ತಿಯಿಂದ ತಿನ್ನುವಂತೆ ಒಣಗಿದ ಬ್ರೆಡ್ ಸಿಕ್ಕರೂ ಅದನ್ನು ಸಂತೋಷದಿಂದ ತಿನ್ನುತ್ತದೆ. ಈ ಗುಣವು ನಮ್ಮ ಜೀವನದಲ್ಲಿ ಏನೇ ಸಿಕ್ಕರೂ ಅದರಲ್ಲಿ ತೃಪ್ತರಾಗಿರಬೇಕು ಎಂಬುದನ್ನು ನಮಗೆ ಕಲಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಆಹಾರದ ವಿಷಯದಲ್ಲೂ ಅಷ್ಟೇ ನಾವು ತಿನ್ನುವ ಆಹಾರವನ್ನು ಗೌರವಿಸಬೇಕು.
ಗಾಢ ನಿದ್ರೆಯಲ್ಲೂ ಜಾಗರೂಕರಾಗಿರುವುದು: ನಾಯಿಯ ಬಗ್ಗೆ ಅತ್ಯಂತ ವಿಶೇಷವಾದ ವಿಷಯವೆಂದರೆ ಅದು ಗಾಢ ನಿದ್ರೆಯಲ್ಲಿದ್ದರೂ, ಸ್ವಲ್ಪ ಶಬ್ದ ಕೇಳಿದ ತಕ್ಷಣ ಎಚ್ಚರಗೊಳ್ಳುತ್ತದೆ. ಈ ಗುಣವು ನಮ್ಮ ಕೆಲಸದ ಬಗ್ಗೆ ನಾವು ಯಾವಾಗಲೂ ಜಾಗರೂಕರಾಗಿರಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ನಮಗೆ ಕಲಿಸುತ್ತದೆ. ನಾವು ವಿಶ್ರಾಂತಿ ಪಡೆಯುತ್ತಿದ್ದರೂ ಸಹ, ನಮ್ಮ ಗುರಿಗಳು ಮತ್ತು ಜವಾಬ್ದಾರಿಗಳ ಬಗ್ಗೆ ನಮಗೆ ತಿಳಿದಿರಬೇಕು. ಜೀವನದಲ್ಲಿ ಪ್ರತಿಯೊಂದು ಸವಾಲಿಗೂ ಸಿದ್ಧರಾಗಿರುವುದು ಯಶಸ್ಸಿನ ಕೀಲಿಯಾಗಿದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ನಿಷ್ಠೆ: ನಾಯಿಗಳು ತಮ್ಮ ಮಾಲೀಕರಿಗೆ ತುಂಬಾ ನಿಷ್ಠವಾಗಿರುತ್ತವೆ. ಅವು ತಮ್ಮ ಮಾಲೀಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತವೆ. ಈ ಗುಣವು ನಾವು ನಮ್ಮ ಕುಟುಂಬ, ಸ್ನೇಹಿತರು ಮತ್ತು ಸಮಾಜಕ್ಕೆ ನಿಷ್ಠರಾಗಿರಬೇಕು ಎಂದು ಕಲಿಸುತ್ತದೆ. ನಮಗೆ ಒಳ್ಳೆಯದನ್ನು ಮಾಡುವವರ ಬಗ್ಗೆ ನಾವು ಯಾವಾಗಲೂ ಕೃತಜ್ಞರಾಗಿರಬೇಕು ಮತ್ತು ಪ್ರಾಮಾಣಿಕರಾಗಿರಬೇಕು. ಅದೇ ರೀತಿ, ಒಬ್ಬ ವ್ಯಕ್ತಿಯು ತನ್ನ ಕೆಲಸಕ್ಕೆ ನಿಷ್ಠನಾಗಿರಬೇಕು. ಯಾವುದೇ ಮೋಸ ಮಾಡಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಯಾವತ್ತಿಗೂ ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಜಿಪುಣತನವನ್ನು ತೋರಬೇಡಿ
ನಿರ್ಭಯತೆ ಮತ್ತು ಶೌರ್ಯದ ಗುಣ: ಚಾಣಕ್ಯ ನೀತಿಯ ಪ್ರಕಾರ, ಮನುಷ್ಯರು ನಿರ್ಭಯತೆ ಮತ್ತು ಶೌರ್ಯದ ಗುಣಗಳನ್ನು ನಾಯಿಗಳಿಂದ ಕಲಿಯಬೇಕು. ನಾಯಿ ಧೈರ್ಯಶಾಲಿ ಪ್ರಾಣಿಯಾಗಿದ್ದು, ಅದು ತನ್ನ ಮಾಲೀಕನಿಗೆ ಹಾನಿ ಮಾಡುವ ಯಾರನ್ನಾದರೂ ಧೈರ್ಯದಿಂದ ಎದುರಿಸುತ್ತದೆ, ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡುತ್ತದೆ. ಅದೇ ರೀತಿ, ಒಬ್ಬ ವ್ಯಕ್ತಿಯು ಯಾವಾಗಲೂ ನಿರ್ಭಯನಾಗಿರಬೇಕು. ಇದರಿಂದ ಆತ ಪ್ರತಿಕೂಲತೆಯನ್ನು ಧೈರ್ಯದಿಂದ ಎದುರಿಸಬಹುದು. ಅಲ್ಲದೆ ಈ ಗುಣವು ನಮ್ಮ ಗುರಿಗಳು ಮತ್ತು ತತ್ವಗಳನ್ನು ರಕ್ಷಿಸಲು ನಾವು ನಿರ್ಭಯವಾಗಿ ನಿಲ್ಲಬೇಕು ಎಂದು ನಮಗೆ ಕಲಿಸುತ್ತದೆ. ಜೀವನದಲ್ಲಿ ಅನ್ಯಾಯವನ್ನು ವಿರೋಧಿಸಬೇಕಾದಾಗ ಸಂದರ್ಭ ಬಂದಾಗಲೂ ಅದನ್ನು ಧೈರ್ಯದಿಂದ ಎದುರಿಸಬೇಕು ಎಂಬುದನ್ನು ಕಲಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 12 October 25








