Dark Neck: ಕತ್ತು ದೇಹದ ಸುಂದರ ಭಾಗ, ಅದೇ ಕೊಳೆಗಟ್ಟಿದರೆ ಹೇಗೆ? ಆಯ್ತು ಹೋಗಲಾಡಿಸುವುದು ಹೇಗೆ? ಇಲ್ಲಿದೆ ವಿವರ

ಕಡಲೆ ಹಿಟ್ಟು ಮತ್ತು ಮೊಸರು ಬಳಸಿ ನೀವು ಕಪ್ಪು ಕುತ್ತಿಗೆಯನ್ನು ಸುಲಭವಾಗಿ ಮರೆಮಾಚಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾದಲ್ಲಿರುವ ಅಲೋಯಿನ್ ಕಪ್ಪು ತ್ವಚೆಯನ್ನು ಹೋಗಲಾಡಿಸುತ್ತದೆ.

Dark Neck: ಕತ್ತು ದೇಹದ ಸುಂದರ ಭಾಗ, ಅದೇ ಕೊಳೆಗಟ್ಟಿದರೆ ಹೇಗೆ? ಆಯ್ತು ಹೋಗಲಾಡಿಸುವುದು ಹೇಗೆ? ಇಲ್ಲಿದೆ ವಿವರ
ಕತ್ತು ದೇಹದ ಸುಂದರ ಭಾಗ, ಅದೇ ಕೊಳೆಗಟ್ಟಿದರೆ ಹೇಗೆ?
Follow us
ಸಾಧು ಶ್ರೀನಾಥ್​
|

Updated on: May 12, 2023 | 12:57 PM

ಕತ್ತು (Neck) ದೇಹದ ಸುಂದರ ಭಾಗ, ಅದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ, ಅದಕ್ಕೆ ತಕ್ಕಂತೆ ನಮ್ಮ ವ್ಯಕ್ತಿತ್ವವನ್ನು ವೃದ್ಧಿಸುತ್ತದೆ. ಆಗ ಸುಂದರವಾದ ದೇಹವು ನಮ್ಮ ಇಡೀ ವ್ಯಕ್ತಿತ್ವವನ್ನು ಸುಂದರಗೊಳಿಸುತ್ತದೆ. ಮುಖವನ್ನು ಸುಂದರಗೊಳಿಸಲು ಮತ್ತು ಕುತ್ತಿಗೆಯನ್ನು ಮಿರಿಮಿರಿ ಮೆರೆಯಲು ನಾವು ಅನೇಕ ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ಕುತ್ತಿಗೆಯ ಸ್ವಚ್ಛತೆಗೆ ಮುಖದಷ್ಟೇ ಗಮನ ಕೊಡ ಬೇಕು ಎಂದು ನಿಮಗೆ ತಿಳಿದಿದೆ. ಕುತ್ತಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದರೆ, ಕುತ್ತಿಗೆಯ ಮೇಲಿನ ಕೊಳೆ ಪದರವು ಹೆಪ್ಪುಗಟ್ಟಲು ಪ್ರಾರಂಭಿಸುತ್ತದೆ. ಬೇಸಿಗೆಯಲ್ಲಿ ಕತ್ತಿನ ಬಗ್ಗೆ ಕಾಳಜಿ ವಹಿಸದಿದ್ದರೆ ಚರ್ಮದ ಮೇಲೆ ಟ್ಯಾನಿಂಗ್ (tanning) ಶೇಖರಣೆಯಾಗಿ ಚರ್ಮದ ಬಣ್ಣ ಕಪ್ಪಾಗಲು (Darkness) ಶುರುವಾಗುತ್ತದೆ (lifestyle).

ಕತ್ತಿನ ಗಾಢ ಬಣ್ಣವು ತುಂಬಾ ಕೊಳಕು ಕಾಣುತ್ತದೆ. ಬೇಸಿಗೆಯಲ್ಲಿ ಅನೇಕ ಕಾರಣಗಳಿಂದಾಗಿ ಕತ್ತಿನ ಬಣ್ಣವು ಕಪ್ಪು ಆಗುತ್ತದೆ. ಕತ್ತನ್ನು ಸರಿಯಾಗಿ ಶುಚಿಗೊಳಿಸದ ಕಾರಣ ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ ಕತ್ತಿನ ಬಣ್ಣ ಕಪ್ಪಾಗಲು ಶುರುವಾಗುತ್ತದೆ. ಹೆಚ್ಚುತ್ತಿರುವ ಬೊಜ್ಜು, ಇನ್ಸುಲಿನ್ ಪ್ರತಿರೋಧಕತೆ, ಅನುವಂಶಿಕ ಕಾರಣಗಳು, ಪಿಸಿಓಡಿ ಸಮಸ್ಯೆ, ಸುಗಂಧ ದ್ರವ್ಯದ ಅತಿಯಾದ ಬಳಕೆಯಿಂದ ಅಲರ್ಜಿ, ಮಧುಮೇಹ, ಹೈಪೋಥೈರಾಯ್ಡಿಸಮ್ ಮುಂತಾದ ಕಾರಣಗಳಿಂದ ಕುತ್ತಿಗೆ ಕಪ್ಪಾಗಲು ಶುರುವಾಗುತ್ತದೆ.

ಬೇಸಿಗೆಯಲ್ಲಿ ಕುತ್ತಿಗೆಯ ಕಪ್ಪು ಬಣ್ಣವನ್ನು ತೊಡೆದುಹಾಕಲು ಕುತ್ತಿಗೆಯನ್ನು ಚರ್ಮದಿಂದ ಮುಚ್ಚುವುದು ಮುಖ್ಯ, ಇದರಿಂದ ಕುತ್ತಿಗೆಯ ಮೇಲೆ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ನೀವು ಕೆಲವು ಮನೆಮದ್ದುಗಳನ್ನು ತೆಗೆದುಕೊಂಡರೆ ಕಪ್ಪು ಕುತ್ತಿಗೆಯನ್ನು ಸುಲಭವಾಗಿ ಕಡಿಮೆ ಮಾಡಬಹುದು. ಕುತ್ತಿಗೆ ಕಪ್ಪು ಬಣ್ಣವನ್ನು ತೆಗೆದುಹಾಕುವಲ್ಲಿ ಯಾವ ಪರಿಹಾರಗಳು ಪರಿಣಾಮಕಾರಿ ಎಂಬುದನ್ನು ತಿಳಿಯೋಣ.

ಟೂತ್​​ ಪೇಸ್ಟ್​​​ನಿಂದ ಕಪ್ಪು ಕುತ್ತಿಗೆಗೆ ಚಿಕಿತ್ಸೆ ನೀಡಿ:

ನಿಮ್ಮ ಕುತ್ತಿಗೆಯ ಬಣ್ಣವು ಗಾಢವಾಗಿದ್ದರೆ, ನೀವು ಟೂತ್​​ ಪೇಸ್ಟ್ ಬಳಸಿಯೂ ಕುತ್ತಿಗೆಯ ಕಪ್ಪು ಬಣ್ಣವನ್ನು ಹೋಗಲಾಡಿಸಬಹುದು. ಟೂತ್​​ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಅದಕ್ಕೆ ಒಂದಷ್ಟು ಹನಿ ನಿಂಬೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಕುತ್ತಿಗೆಯ ಕಪ್ಪು ಭಾಗದಲ್ಲಿ ಚೆನ್ನಾಗಿ ಹಚ್ಚಿ. ಪೇಸ್ಟ್ ಅನ್ನು ಕುತ್ತಿಗೆ ಭಾಗದಲ್ಲಿ 10 ನಿಮಿಷಗಳ ಕಾಲ ಹಚ್ಚಿ ನಂತರ ತೊಳೆದರೆ ಕುತ್ತಿಗೆ ಕಪ್ಪು ಹೋಗುತ್ತದೆ. ಆ ಮೆಲೆ ಸಾವಕಾಶವಾಗಿ ಕುತ್ತಿಗೆಯನ್ನು ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಟೂತ್‌ಪೇಸ್ಟ್ ಅನ್ನು ಹೀಗೆ ಕುತ್ತಿಗೆಗೆ ಹಚ್ಚಿ ಸ್ವಚರ್ಚಗೊಳಿಸುತ್ತಿರಿ.

ಮೊಸರು ಮತ್ತು ಕಡಲೆಹಿಟ್ಟಿನೊಂದಿಗೆ ಕುತ್ತಿಗೆಯ ಕಪ್ಪನ್ನು ನಿವಾರಿಸಿ:

ಕಡಲೆ ಹಿಟ್ಟು ಮತ್ತು ಮೊಸರು ಬಳಸಿ ನೀವು ಕಪ್ಪು ಕುತ್ತಿಗೆಯನ್ನು ಸುಲಭವಾಗಿ ಮರೆಮಾಚಬಹುದು. ಒಂದು ಚಿಕ್ಕ ಬಟ್ಟಲಿನಲ್ಲಿ ಕಡಲೆ ಬೇಳೆ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ, ಒಂದು ಚಮಚ ಮೊಸರು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕುತ್ತಿಗೆಗೆ ಹಚ್ಚಿ, 20 ನಿಮಿಷಗಳ ಕಾಲ ಬಿಡಿ. 20 ನಿಮಿಷಗಳ ನಂತರ, ಟವೆಲ್ ಅಥವಾ ಹತ್ತಿಯನ್ನು ಒದ್ದೆ ಮಾಡಿ ಚರ್ಮದ ಮೆಲಿರುವ ಈ ಪೇಸ್ಟ್ ಅನ್ನು ತೆಗೆದುಹಾಕಿ. ಹೀಗೆ ಪೇಸ್ಟ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಚರ್ಮವು ಫಳಫಳ ಹೊಳೆಯುತ್ತದೆ.

ಅಲೋ ವೆರಾದಿಂದ ಬ್ಲ್ಯಾಕ್ ಹೆಡ್ಸ್ ನಿವಾರಣೆ:

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾದಲ್ಲಿರುವ ಅಲೋಯಿನ್ ಕಪ್ಪು ತ್ವಚೆಯನ್ನು ಹೋಗಲಾಡಿಸುತ್ತದೆ. ನೀವು ನೇರವಾಗಿ ಕುತ್ತಿಗೆಯ ಮೇಲೆ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳೊಂದಿಗೆ ಅಲೋವೆರಾ ಜೆಲ್ ಅನ್ನು ಬಳಸಬಹುದು. ದಟ್ಟವಾದ, ದಪ್ಪವಾದ ಅಲೋವೆರಾ ಎಲೆಯನ್ನು ತೆಗೆದುಕೊಂಡು ಅದರಿಂದ ಜೆಲ್ ಅನ್ನು ಹೊರತೆಗೆಯಿರಿ. ಅದನ್ನು ಕುತ್ತಿಗೆಗೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ. ರಾತ್ರಿಯಲ್ಲಿ ಈ ಜೆಲ್ ಅನ್ನು ಹಚ್ಚುವುದು ಉತ್ತಮ. ರಾತ್ರಿಯಿಡೀ ಕುತ್ತಿಗೆಯ ಮೇಲೆ ಜೆಲ್ ಅನ್ನು ಬಿಡಿ ಮತ್ತು ಬೆಳಿಗ್ಗೆ ವೇಳೆಗೆ ತೊಳೆಯಿರಿ. ಕೊರಳಲ್ಲಿರುವ ಕಪ್ಪು ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ