ಇನ್ನೇನು ದೀಪಾವಳಿ ಹಬ್ಬ ಎದುರಿಗೇ ಇದೆ. ಹಬ್ಬವನ್ನು ಇನ್ನಷ್ಟು ಸಂತೋಷದಿಂದ ಆಚರಿಸಿಕೊಳ್ಳಲು ನಿಮ್ಮ ಮನಸ್ಸನ್ನು ಖುಷಿಯಾಗಿರಿಸುವುದು ತುಂಬಾ ಮುಖ್ಯ. ಸ್ವಯಂ ಪ್ರೀತಿಯು ನಮ್ಮನ್ನು ಮತ್ತಷ್ಟು ಸಂತೋಷಗೊಳಿಸುತ್ತದೆ. ನಾವು ಮೊದಲು ನಮ್ಮನ್ನು ಪ್ರೀತಿಸಿದಾಗ ಮನಸ್ಸು ಮತ್ತು ಆರೋಗ್ಯದಲ್ಲಿ ಸುಧಾರಣೆ ಖಂಡಿತ! ಹಾಗಿರುವಾಗ ಈ ಕೆಲವು ಸಲಹೆಗಳು ನಿಮಗಾಗಿ. ಈ ವರ್ಷದ ಹಬ್ಬದಂದು ನಿಮ್ಮನ್ನು ನೀವು ಸ್ವಲ್ಪ ಹೆಚ್ಚು ಪ್ರೀತಿಸಲು ಒಂದು ಹೆಜ್ಜೆ ಮುಂದಿಡಿ. ಮನೆಗೆ ಏನಾದರು ವಿಶೇಷವಾದ ಉಡುಗೊರೆಯನ್ನು ಖರೀದಿಸಿ. ನೀವು ಸುಂದರವಾದ ಹೊಸ ಬಟ್ಟೆಯನ್ನು ಧರಿಸಿ ಅಲಂಕರಿಸಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತಾ ಸಿಹಿ ತಿಂಡಿಗಳು ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಸವಿಯಿರಿ.
ಈ ಕೆಲವು ಸಲಹೆಗಳು ನೆನಪಿನಲ್ಲಿರಲಿ
ನಿಮ್ಮ ನೀವು ಪ್ರೀತಿಸಿ
ನೀವು ನಿಮ್ಮನ್ನು ಪ್ರೀತಿಸಿದರೆ ನಿಮ್ಮ ಜೀವನದಲ್ಲಿ ಸುಖ ಸಂತೋಷದಿಂದ ಇರಬಹುದು. ಯಾವಾಗಲೂ ಚಿಂತೆ, ಒತ್ತಡ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ನಿಮಗೆ ಸಂತೋಷವಾಗುವ ಕೆಲಸಮಾಡುವುದರ ಜೊತೆಗೆ ವಿಶ್ರಾಂತಿಗಾಗಿ ಎಣ್ಣೆಯೊಂದಿಗೆ ಮಸಾಜ್ ಮಾಡಿಕೊಂಡು ಸ್ನಾನ ಮಾಡಿ ಇದು ನಿಮ್ಮ ಚರ್ಮದ ಆರೋಗ್ಯ ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ. ಇದರಿಂದ ನೀವು ಶಾಂತಿ, ಉಲ್ಲಾಸದೊಂದಿಗೆ ಹಬ್ಬ ಆಚರಿಸಬಹುದು.
ಹೂವುಗಳನ್ನು ಖರೀದಿಸಿ ಅಥವಾ ಮನೆಯಲ್ಲಿ ಗಿಡಗಳನ್ನು ಬೆಳೆಯಿರಿ
ಅಂಗಡಿಗಳಿಂದ ಹೂವುಗಳನ್ನು ಖರೀದಿಸಿ ಮನೆಯನ್ನು ಅಲಂಕರಿಸಿ. ಅರಳಿರುವ ಸುಂದರ ಹೂವುಗಳು ಮನೆಯನ್ನು ಸುಂದರವಾಗಿರಿಸುವುದರ ಜೊತೆಗೆ ನಿಮ್ಮ ಖುಷಿಯನ್ನು ಹೆಚ್ಚಿಸುತ್ತವೆ, ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಮನೆಯ ಗಿಡದಲ್ಲಿ ಬಿಟ್ಟ ಹೂವುಗಳನ್ನು ಕೊಯ್ದು ದೇವರಿಗೆ ಪೂಜೆ ಮಾಡುವ ಮೂಲಕ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಜೊತೆಗೆ ಪರಿಸರ ಸ್ನೇಹಿಯಾಗಿ ಹಬ್ಬದ ಪ್ರಯುಕ್ತ ಇನ್ನೊಂದಿಷ್ಟು ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸುವಲ್ಲಿ ನಿಮ್ಮ ಪಾತ್ರವಿರಲಿ.
ನಿಮ್ಮ ಆಲೋಚನೆಗಳು ಹೊಸದಾಗಿರಲಿ
ಜೀವನ ಶೈಲಿಯಲ್ಲಿ ಕೆಲವು ಬಾರಿ ಅತಿಯಾದ ಚಿಂತೆ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ಒಂದು ವಿಷಯವನ್ನು ಪದೇ ಪದೇ ಚಿಂತಿಸುವುದು ಅಥವಾ ಅದನ್ನೇ ಹೇಳುತ್ತಿರುವುದು ನಿಮ್ಮ ಮನಸ್ಸಿನ ಜೊತೆಗೆ ಮನೆಯವರ ಖುಷಿಯನ್ನೂ ಹದಗೆಡಿಸುತ್ತದೆ. ಹಾಗಾಗಿ ಮನೆಯಲ್ಲಿ ಸಂತೋಷದಿಂದಿರಿ ಜೊತೆಗೆ ಅನವಶ್ಯಕ ಚಿಂತೆಗಳನ್ನು ಪದೇ ಪದೇ ಯೋಚಿಸಬೇಡಿ.
ನೃತ್ಯ
ಹಬ್ಬದ ದಿನ ಮನೆಯವರೊಡನೆ ಎರಡು ಹೆಜ್ಜೆ ಹಾಕಿಯೇಬಿಡಿ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆ ಖುಷಿ ನಿಮ್ಮನ್ನು ಸದಾ ಕಾಪಾಡುತ್ತದೆ. ದೇಹಕ್ಕೆ ಹಿತವಾದ ಮನಸ್ಸು ಆರೋಗ್ಯವನ್ನು ಸುಧಾರಿಸುತ್ತದೆ. ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
Diwali 2021: ಈ ಬಾರಿಯ ದೀಪಾವಳಿಗೆ ಮನೆಯ ಡೆಕೊರೇಷನ್ ಬಗ್ಗೆ ಯೋಚಿಸುತ್ತಿದ್ದೀರಾ? ಇಲ್ಲಿವೆ ಕೆಲವು ಸಿಂಪಲ್ ಐಡಿಯಾಗಳು
Published On - 12:55 pm, Wed, 3 November 21