Deepavali 2021: ದೀಪಾವಳಿಯಲ್ಲಿ ನಿಮ್ಮ ಚೆಲುವನ್ನು ಹೆಚ್ಚಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ

Skin Care Tips: ಹಬ್ಬದ ಸಮಯದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ಮತ್ತು ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಕೆಲವು ಸಲಹೆಗಳು ಈ ಕೆಳಗಿನಂತಿದೆ.

Deepavali 2021: ದೀಪಾವಳಿಯಲ್ಲಿ ನಿಮ್ಮ ಚೆಲುವನ್ನು ಹೆಚ್ಚಿಸಲು ಈ ಕೆಲವು ಸಲಹೆಗಳನ್ನು ಅನುಸರಿಸಿ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 03, 2021 | 11:14 AM

ಹಬ್ಬ ಅಂದಾಕ್ಷಣ ಮನೆಯಲ್ಲಿ ಸಂಭ್ರಮದ ಜೊತೆಗೆ ಅದ್ದೂರಿ ಊಟ ರೆಡಿಯಾಗಿರುತ್ತೆ. ಸಿಹಿ ತಿಂಡಿಗಳು ಒಂದಾದ ಮೇಲೆ ಒಂದು ಬಾಳೆಯಲ್ಲಿ ಬೀಳುತ್ತಿದ್ದರೆ ಅದರ ಖುಷಿಯೇ ಬೇರೆ. ಆಹಾರ ಪ್ರಿಯರಿಗಂತೂ ಎಲ್ಲಿಲ್ಲದ ಸಂತೋಷ. ಮನೆಯವರೆಲ್ಲಾ ನಗುವಿನ ಜೊತೆಗೆ ಮಾತನಾಡುತ್ತಾ ಖುಷಿಯಿಂದ ಆಚರಿಸುವ ದೀಪಾವಳಿ ಬಂದೇ ಬಿಟ್ಟಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಏನನ್ನು ತಿನ್ನಬೇಕು? ಯಾವುದು ಮಿತವಾಗಿರಲಿ ಎಂಬುದರ ಬಗ್ಗೆ ನೀವು ಗಮನವಹಿಸಲೇಬೇಕು.

ಹಬ್ಬದ ಸಮಯದಲ್ಲಿ ನೀವು ಆನಂದಿಸಬಹುದಾದ ಆಹಾರಗಳು ಊರಿಯೂತ ನಿವಾರಕ ಮತ್ತ ಉತ್ಕರ್ಷಣ ನಿರೋಧಕ ಪೋಷಕಾಂಶಯುಕ್ತ ಆಹಾರವನ್ನು ನೀವು ಆಯ್ದುಕೊಳ್ಳಬೇಕು. ಏಕೆಂದರೆ ಇದು ನಿಮ್ಮ ದೇಹಕ್ಕೆ ವಿಟಮಿನ್, ಪ್ರೋಟೀನ್​ಗಳನ್ನು ನೀಡುತ್ತದೆ. ಆರೋಗ್ಯ ಸುಧಾರಣೆಗೆ ಇದು ಸಹಾಯ ಮಾಡುತ್ತದೆ. ಹಾಗಿರುವಾಗ ಬಾದಾಮಿ ಮತ್ತು ಡ್ರೈ ಫ್ರೂಟ್ಸ್​ಗಳನ್ನು ಸೇವಿಸಿ. ಇದು ವಿಟಮಿನ್ ಇ ಯಿಂದ ಸಮೃದ್ಧವಾಗಿರುತ್ತದೆ. ಇದು ಆರೋಗ್ಯ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಜೊತೆಗೆ ನೀವು ಸುಂದರವಾಗಿ ಕಾಣಿಸಲು ಮತ್ತು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಿಹಿ ಆಲೂಗಡ್ಡೆ, ಬೇಯಿಸಿದ ಪಾಲಾಕ್ ಮತ್ತು ಕ್ಯಾರೆಟ್​ಗಳನ್ನು ಸೇವಿಸಿ. ವಿಟಮಿನ್ ಎ ಅಂಶದಿಂದ ಸಮೃದ್ಧವಾಗಿರುವ ಈ ಆಹಾರ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಉತ್ತಮ ಮತ್ತು ಸೌಂದರ್ಯ ಹೆಚ್ಚುತ್ತದೆ. ಜೊತೆಗೆ ಸೂರ್ಯಕಾಂತಿ ಬೀಜಗಳು, ಬೇವು, ಆಮ್ಲಾ ಪದಾರ್ಥಗಳು ನಿಮ್ಮ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೀವು ತಪ್ಪಿಸಬೇಕಾದ ಆಹಾರ ಪದಾರ್ಥಗಳು ಹಬ್ಬಗಳೆಂದರೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಕಳೆಯುವ ಸಮಯ. ಆದರೆ ಯಾವುದೇ ಸಮಯದಲ್ಲಿಯೂ ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. ಇದು ಚಿನ್ನ ಚರ್ಮದ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂಬುದು ನೆನಪಿನಲ್ಲಿರಲಿ. ಆಲ್ಕೋಹಾಲ್ ನಿಮ್ಮನ್ನು ಒಳಗಿನಿಂದ ನಿರ್ಜಲೀಕರಣಗೊಳಿಸುತ್ತದೆ. ನಿಮ್ಮ ಚರ್ಮದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಜೊತೆಗೆ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ನೀವು ಸಂಸ್ಕರಿಸಿದ ಸಕ್ಕರೆಯನ್ನು ಹೊಂದಿರುವ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು.

ತಾಜಾ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ತಾಜಾ ಹಣ್ನುಗಳಾದ ಕಿವಿ, ದಾಳಿಂಬೆ, ಕಿತ್ತಳೆ ಮತ್ತು ಸೇಬು ಹಣ್ಣುಗಳನ್ನು ಸೇವಿಸಿ. ಇದು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹಬ್ಬದ ದಿನ ಹಣ್ಣುಗಳ ಸಲಾಡ್ ಮಾಡಿಯೂ ಸವಿಯಬಹುದು. ಸಿಹಿಯ ಜೊತೆಗೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಹೊಳೆಯುವ ಚರ್ಮಕ್ಕಾಗಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಿರಿ. ಅಥವಾ ಹಣ್ಣಿನ ಜ್ಯೂಸ್ ಮಾಡಿಯೂ ನೀವು ಸವಿಯಬಹುದು.

ನಿಮ್ಮ ತ್ವಚೆಯ ನೈಸರ್ಗಿಕ ಹೊಳಪಿಗೆ ಇಲ್ಲಿವೆ ಕೆಲವು ಸಲಹೆಗಳು ನಿಮ್ಮ ಚರ್ಮದ ನೈಸರ್ಗಿಕ ಹೊಳಪನ್ನು ಪಡೆಯಲು ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಅವಶ್ಯಕ. ಪ್ರತಿನಿತ್ಯ ತಡವಾಗಿ ಮಲಗುವ ಅಭ್ಯಾಸ ಇದ್ದರೆ ಅದನ್ನು ತಪ್ಪಿಸಿ. ನೀವು ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡದಿಂದ ಆದಷ್ಟು ದೂರವಿರಿ. ಇದರ ಜೊತೆಗೆ ನಿಮ್ಮ ದೈನಂದಿನ ಕೆಲಸದಲ್ಲಿ ವ್ಯಾಯಾಮ, ಧ್ಯಾನಗಳನ್ನು ಅಭ್ಯಾಸದಲ್ಲಿಟ್ಟುಕೊಳ್ಳಿ. ಈ ರೀತಿಯ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಕೇವಲ ಹಬ್ಬದ ಸಮಯದಲ್ಲೊಂದೇ ಅಲ್ಲದೇ ಪ್ರತಿನಿತ್ಯವೂ ಈ ಕೆಲವು ಅಂಶಗಳು ರೂಢಿಯಲ್ಲಿರಲಿ.

ಇದನ್ನೂ ಓದಿ:

Beauty Tips: ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಈ ಆಹಾರ ಪದಾರ್ಥಗಳ ಮೊರೆ ಹೋಗುವುದು ಉತ್ತಮ

Aloe Vera Benefits: ಚರ್ಮದ ಕಾಂತಿಯನ್ನು ಹೆಚ್ಚಿಸಲು ಅಲೋವೆರಾ ಬಳಸಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ