Ayurveda Day 2021: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ; ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ

ನಮ್ಮ ದೈನಂದಿನ ಜೀವನದಲ್ಲಿ ಆಯುರ್ವೇದದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಆಯುರ್ವೇದ ದಿನವನ್ನು ಆಚರಿಸಲಾಗುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧದ ಬಗ್ಗೆ ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಈ ಕೆಳಗಿನಂತಿದೆ.

Ayurveda Day 2021: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ; ನೀವು ತಿಳಿಯಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
ಆಯುರ್ವೇದ ಔಷಧ
Follow us
TV9 Web
| Updated By: shruti hegde

Updated on: Nov 02, 2021 | 11:21 AM

ಭಾರತವು ಪ್ರತೀ ವರ್ಷ ಧನ್​ತೇರಸ್​ನ ಶುಭ ಸಂದರ್ಭದಲ್ಲಿ ಆಯುರ್ವೇದ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು 2016ರಿಂದ ಪ್ರತೀ ವರ್ಷ ಧನ್ವಂತರಿ ಜಯಂತಿಯಂದು ಗುರುತಿಸಲಾಗಿದೆ. ಈ ವರ್ಷ ಧನ್​ತೇರಸ್​ ಇಂದು ಮಂಗಳವಾರ (ನವೆಂಬರ್ 2)ರಂದು ಬಂದಿರುವುದರಿಂದ ಆಯುರ್ವೇದ ದಿನವನ್ನು ಸಹ ಇಂದೇ ಆಚರಿಸಲಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಆಯುರ್ವೇದದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇದಲ್ಲದೇ ಆಯುರ್ವೇದದ ಸಾಮರ್ಥ್ಯ ಮತ್ತು ಅದರ ವಿಶಿಷ್ಟ ಚಿಕಿತ್ಸಾ ತತ್ವಗಳನ್ನು ತಿಳಿಯಲು ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸಲಾಗುತ್ತದೆ.

ಭಗವಾನ್ ಧನ್ವಂತರಿ ದೇವರು ಎಲ್ಲಾ ರೋಗಗಳನ್ನು, ಕಾಯಿಲೆಗಳನ್ನು ಗುಣಪಡಿಸುವವನು ಎಂಬ ನಂಬಿಕೆಯಿದೆ. ಹಿಂದೂ ಪುರಾಣಗಳ ಪ್ರಕಾರ, ದೇವರಲ್ಲಿ ವೈದ್ಯ ಧನ್ವಂತರಿ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಪದ್ಧತಿ ಇದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ಹಲವು ಪರಿಕಲ್ಪನೆಗಳನ್ನು ಒಳಗೊಂಡಿದೆ. ಕೊವಿಡ್ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುಕೊಳ್ಳಲು ಹಲವರು ಆಯುರ್ವೇದದ ಕಡೆಗೆ ತಿರುಗಿದ್ದಾರೆ.

ಆಯುರ್ವೇದದ ಪ್ರಕಾರ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೆಲವು ವಿಧಾನಗಳು ಆಯುರ್ವೇದದ ಮಿಶ್ರಣಗಳು ಆಯುರ್ವೇದದಲ್ಲಿ ಹಲವು ಗಿಡಮೂಲಿಕೆಗಳನ್ನು ಬಳಸಿ ಔಷಧಿಯನ್ನು ತಯಾರಿಸಲಾಗುತ್ತದೆ. ಸಣ್ಣ ಪುಟ್ಟ ಶೀತ, ಕೆಮ್ಮು ಮತ್ತು ಜ್ವರ ಹೀಗೆ ಆರೋಗ್ಯ ಸಮಸ್ಯೆಗೆ ಪರಿಹಾರವನ್ನು ನೀಡುವುದರ ಜೊತೆಗೆ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ, ಒಣದ್ರಾಕ್ಷಿ ಜೊತೆಗೆ ಇದಕ್ಕೆ ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಬಹುದು. ಜೊತೆಗೆ ಉಗುರು ಬೆಚ್ಚಗಿನ ಹಾಲಿನಲ್ಲಿ ಚಿಟಿಕೆ ಅರಿಶಿಣ ಸೇರಿಸಿಯೂ ಕುಡಿಯಬಹುದು. ಈ ವಿಶ್ರಣವನ್ನು ದಿನಕ್ಕೆ ಒಮ್ಮೆ ಮಾತ್ರ ಸೇವಿಸಬೇಕು. ಇದರಿಂದ ಶೀತ, ಕೆಮ್ಮಿನಂತಹ ಅರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಧ್ಯಾನ ಮತ್ತು ಯೋಗ ಆಯುರ್ವೇದದ ಪ್ರಕಾರ ದೈಹಿಕ ಒತ್ತಡವನ್ನು ನಿವಾರಿಸಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಯೋಗ ಅವಶ್ಯಕ. ಪ್ರತಿದಿನವೂ ಧ್ಯಾನ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಆರಾಮದಾಯಕ ಸ್ಥಳದಲ್ಲಿ ಕುಳಿತು ಪ್ರತಿನಿತ್ಯ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದನ್ನು ರೂಢಿಯನ್ನಿಟ್ಟುಕೊಳ್ಳಿ. ನೀವು ಪ್ರತಿನಿತ್ಯ 10 ನಿಮಿಷಗಳ ಕಾಲ ಧ್ಯಾನ ಮಾಡುವ ಮೂಲಕ ನಿಮ್ಮ ಒತ್ತಡ ಮನತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.

ಆಯುಷ್ ಸಚಿವಾಲಯದ ಪ್ರಕಾರ ಕೊವಿಡ್ 19 ನಂತಹ ಉಸಿರಾಟ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಕೆಲವು ವಿಧಾನಗಳಿವೆ. ನೀವು ಬೆಳಗ್ಗೆ ಮತ್ತು ಸಂಜೆಯ ವೇಳೆ ಮೂಗಿನ ಹೊಳ್ಳೆಗಳಲ್ಲಿ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಅನ್ವಯಿಸಬೇಕು. ಈ ಮೂಲಕ ನಿಮ್ಮ ಮೂಗು ಕಟ್ಟುವುದು, ಉಸಿರಾಟಕ್ಕೆ ಅಡ್ಡಿ ಅಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ:

Health Benefits: ಈ ಕೆಲವು ಆಯುರ್ವೇದ ಗಿಡಮೂಲಿಕೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ

Health Tips: ಜೀರ್ಣಕ್ರಿಯೆ ಚೆನ್ನಾಗಿರಲು 9 ಆಯುರ್ವೇದ ಸಲಹೆಗಳು ಇಲ್ಲಿವೆ