AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Intellectual Property Day 2025: ಇಂದು ಬೌದ್ಧಿಕ ಆಸ್ತಿ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ

ಸ್ಥಿರ, ಚರ ಆಸ್ತಿಗಳಿಗೆ ಬೇಕಾದರೂ ಬೆಲೆ ಕಟ್ಟಬಹುದು. ಆದರೆ ಬೌದ್ಧಿಕ ಆಸ್ತಿ ಎನ್ನುವುದು ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾದದ್ದು. ಈ ಬೌದ್ಧಿಕ ಮಾನವನ ಬುದ್ಧಿಶಕ್ತಿಯ ಅಮೂರ್ತ ರೂಪವಾಗಿದ್ದು, ಇದರ ಮಹತ್ವ, ಬೌದ್ಧಿಕ ಆಸ್ತಿಯ ಸಂರಕ್ಷಣೆ, ದೇಶ ದೇಶಗಳ ನಡುವೆ ಬೌದ್ಧಿಕ ಆಸ್ತಿಗಳ ವಿನಿಮಯಕ್ಕೆ ಇರುವ ಪ್ರಕ್ರಿಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್‌ 26 ರಂದು ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ.

World Intellectual Property Day 2025: ಇಂದು ಬೌದ್ಧಿಕ ಆಸ್ತಿ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
ವಿಶ್ವ ಬೌದ್ಧಿಕ ಆಸ್ತಿ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Apr 26, 2025 | 10:03 AM

Share

ಬೌದ್ಧಿಕ ಆಸ್ತಿ (Intellectual Property) ಎಂಬುದು ಮಾನವನ ಬುದ್ಧಿಶಕ್ತಿ (Intellectual Ability) ಹಾಗೂ ಸೃಜನಶೀಲತೆಯ ಅಮೂರ್ತ ಸೃಷ್ಟಿಯನ್ನು ಒಳಗೊಂಡಿರುವ ಆಸ್ತಿಯ ಒಂದು ವರ್ಗವಾಗಿದೆ. ಇದು ಆವಿಷ್ಕಾರ, ಸಾಹಿತ್ಯ ಮತ್ತು ಕಲಾತ್ಮಕ ಕೆಲಸ, ವಿನ್ಯಾಸಗಳು ಮತ್ತು ಚಿಹ್ನೆಗಳು, ಬರಹಗಳು ಮತ್ತು ಚಿತ್ರಗಳಂತಹ ವ್ಯಕ್ತಿಯ ಬುದ್ಧಿವಂತಿಕೆಯ ಸೃಷ್ಟಿಯಾಗಿದೆ. ಕೃತಿಸ್ವಾಮ್ಯ, ಪೇಟೆಂಟ್‌, ಟ್ರೇಡ್‌ಮಾರ್ಕ್‌ಗಳು, ಕೈಗಾರಿಕಾ ವಿನ್ಯಾಸಗಳು, ಭೌಗೋಳಿಕ ಸೂಚನೆಗಳು, ವ್ಯಾಪಾರ ರಹಸ್ಯಗಳು ವಿವಿಧ ಬೌದ್ಧಿಕ ಆಸ್ತಿಗಳಾಗಿದ್ದು, ಈ ಆಸ್ತಿ ಬೆಲೆ ಕಟ್ಟಲಾಗದಷ್ಟು ಅಮೂಲ್ಯವಾಗಿದ್ದು, ಇದನ್ನು ರಚಿಸಿದ ಸೃಜನಾತ್ಮಕ ವ್ಯಕ್ತಿಯೇ ಇದಕ್ಕೆ ವಾರಸುದಾರನಾಗಿರುವ ಕಾರಣ ಆ ವ್ಯಕ್ತಿಯ ಅನುಮತಿಯಿಲ್ಲದೆ ಆತನ ವಿಚಾರವನ್ನು ಬಳಕೆ ಮಾಡುವಂತಿಲ್ಲ. ಒಬ್ಬ ವ್ಯಕ್ತಿಯ ಈ ಅಮೂಲ್ಯವಾದ ಬೌದ್ಧಿಕ ಆಸ್ತಿಯ ಹಕ್ಕಿನ ಬಗ್ಗೆ ಹಾಗೂ ಬೌದ್ಧಿಕ ಆಸ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಏಪ್ರಿಲ್‌ 26 ರಂದು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು (World Intellectual Property Day) ಆಚರಿಸಲಾಗುತ್ತದೆ.

ಬೌದ್ಧಿಕ ಆಸ್ತಿ ಹಕ್ಕುಗಳು ಯಾವುವು?

ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು, ಕೃತಿಸ್ವಾಮ್ಯ ಇವೆಲ್ಲವೂ ಬೌದ್ಧಿಕ ಆಸ್ತಿಗಳಾಗಿವೆ. ಲೇಖಕ ಕಥೆಗಾರ, ವಿಜ್ಞಾನಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಬುದ್ಧಿ ಶಕ್ತಿ ಹಾಗೂ ಸೃಜನಶೀಲತೆಯಿಂದ  ಹೊರ ತರುವ ಕಥೆ, ಸಂಗೀತ, ಪುಸ್ತಕ, ವಿನ್ಯಾಸಗಳನ್ನು ಬೇರೆ ಯಾರು ಕದಿಯದಂತೆ ಈ ಅಮೂಲ್ಯ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ರಕ್ಷಿಸಲು ಹಾಗೂ ಸೃಷ್ಟಿಕರ್ತರು, ಸಂಶೋಧಕರು, ಉದ್ಯಮಿಗಳ ಆಲೋಚನೆಗಳು ಮತ್ತು ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ವಿಶ್ವ ಬೌದ್ಧಿಕ ಆಸ್ತಿಯ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ನಾನು ತಿಂಗಳಿಗೆ 1 ಲಕ್ಷ ರೂ. ಸೇವ್‌ ಮಾಡ್ತೇನೆ; ತನ್ನ ಮಾಸಿಕ ಖರ್ಚು-ವೆಚ್ಚದ ವಿವರ ಹಂಚಿಕೊಂಡ ಬೆಂಗಳೂರಿನ ಮಹಿಳೆ

ಇದನ್ನೂ ಓದಿ
Image
ತಿಂಗಳಿಗೆ 1 ಲಕ್ಷ ರೂ. ಹಣ ಉಳಿತಾಯ ಮಾಡುತ್ತಿರುವ ಬೆಂಗಳೂರಿನ ಮಹಿಳೆ
Image
ಸಿಕ್ಕಾಪಟ್ಟೆ ಟೇಸ್ಟು ಹಲಸಿನ ಹಣ್ಣಿನ ಈ ಸಿಹಿ ಕಡುಬು
Image
ಕಾಲಿನಲ್ಲಿ ಈ ಲಕ್ಷಣಗಳು ಕಂಡುಬಂದರೆ ಇದು ಹೃದಯಾಘಾತದ ಎಚ್ಚರಿಕೆ
Image
ಮರಗಳು, ಬೇರುಗಳು ಅಥವಾ ತುಟಿ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು?

ವಿಶ್ವ ಬೌದ್ಧಿಕ ಆಸ್ತಿ ದಿನದ ಇತಿಹಾಸ:

ವಿಶ್ವ  ಬೌದ್ಧಿಕ ಆಸ್ತಿ ದಿನವನ್ನು ಪ್ರತಿ ವರ್ಷ ಏಪ್ರಿಲ್‌ 26 ರಂದು ಆಚರಿಸಲಾಗುತ್ತದೆ.  ಈ ದಿನದ ಆಚರಣೆಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) 2000 ರಲ್ಲಿ ಪ್ರಾರಂಭಿಸಿತು. ಈ ದಿನ 1970 ರಲ್ಲಿ ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಯನ್ನು ಸ್ಥಾಪಿಸುವ ಸಮಾವೇಶವು ಜಾರಿಗೆ ಬಂದ ದಿನದ ಸ್ಮರಣಾರ್ಥವಾಗಿದೆ. ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ (ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು ಮತ್ತು ವಿನ್ಯಾಸಗಳು) ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಇಟ್ಟುಕೊಂಡು ಈ ದಿನದ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್‌ 26 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಬೌದ್ಧಿಕ ಆಸ್ತಿ ದಿನದ ಮಹತ್ವ:

ವಿಶ್ವ ಬೌದ್ಧಿಕ ಆಸ್ತಿ ದಿನವನ್ನು ಆಚರಿಸುವ ಮೂಲ ಉದ್ದೇಶವೇ ಬೌದ್ಧಿಕ ಆಸ್ತಿಯ ಹಕ್ಕು, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವಲ್ಲಿ ಬೌದ್ಧಿಕ ಆಸ್ತಿಯ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಬೌದ್ಧಿಕ ಆಸ್ತಿಗಳಿಗೆ ಅಂತರಾಷ್ಟ್ರೀಯ ಮಾನ್ಯತೆ ತಂದುಕೊಡುವುದಾಗಿದೆ.  ಅಲ್ಲದೆ ಇದು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ, ಇದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಅಲ್ಲದೆ ಈ ಈ ದಿನದಂದು ಪ್ರಪಂಚದಾದ್ಯಂತ ವಿಚಾರ ಸಂಕಿರಣಗಳು, ಪ್ರದರ್ಶನಗಳು ಮತ್ತು ಸ್ಪರ್ಧೆಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ