ನಾನು ತಿಂಗಳಿಗೆ 1 ಲಕ್ಷ ರೂ. ಸೇವ್ ಮಾಡ್ತೇನೆ; ತನ್ನ ಮಾಸಿಕ ಖರ್ಚು-ವೆಚ್ಚದ ವಿವರ ಹಂಚಿಕೊಂಡ ಬೆಂಗಳೂರಿನ ಮಹಿಳೆ
ಇತ್ತೀಚಿಗಷ್ಟೆ ಯುವಕನೊಬ್ಬ ಬೆಂಗಳೂರಿನಲ್ಲಿ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 20 ಸಾವಿರ ರೂ. ಸಾಕು ಎಂದು ಹೇಳಿ ತನ್ನ ತಿಂಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂತಹದ್ದೇ ಮತ್ತೊಂದು ಪೋಸ್ಟ್ ಹರಿದಾಡುತ್ತಿದ್ದು, ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಖರ್ಚು ಇದ್ದರೂ ತಾನು ತಿಂಗಳಿಗೆ 1 ಲಕ್ಷದ ವರೆಗೆ ಹಣ ಉಳಿತಾಯ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರು, ಏ. 25: ಅನೇಕ ಜನರು ಭವಿಷ್ಯಕ್ಕಾಗಿ (Future) ಹಣ ಉಳಿತಾಯ (Savings) ಮಾಡಲು ಬಯಸುತ್ತಾರೆ. ಆದ್ರೆ ಎಷ್ಟೇ ಪ್ರಯತ್ನಿಸಿದರೂ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವವರು ಇದ್ದಾರೆ. ಅದರಲ್ಲೂ ಬೆಂಗಳೂರಿನಂತಹ (Bengaluru) ನಗರದಲ್ಲಿ ಮನೆ ಬಾಡಿಗೆ, ದಿನಸಿ ಸೇರಿದಂತೆ ಖರ್ಚು ವೆಚ್ಚ ಜಾಸ್ತಿ ಇರುವುದರಿಂದ ಹಣ ಉಳಿತಾಯ ಮಾಡುವುದು ದೂರದ ಮಾತು ಎಂದು ಹಲವರು ಹೇಳುತ್ತಾರೆ. ಅಂತದ್ರಲ್ಲಿ ಇಲ್ಲೊಬ್ರು ಬೆಂಗಳೂರಿನಲ್ಲಿ ವಾಸಿಸುವ ಮಹಿಳೆ ಭಾರೀ ಪ್ರಮಾಣದ ಖರ್ಚು ಇದ್ದರೂ ಕೂಡಾ ತಿಂಗಳಿಗೆ 1 ಲಕ್ಷದ ವರೆಗೆ ಹಣ ಉಳಿತಾಯ ಮಾಡುತ್ತಾರಂತೆ. ತನ್ನ ತಿಂಗಳ ಖರ್ಚು ವೆಚ್ಚದ ಪಟ್ಟಿಯನ್ನು ಆ ಮಹಿಳೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಿಂಗಳಿಗೆ 1 ಲಕ್ಷ ರೂ. ಹಣ ಉಳಿತಾಯ ಮಾಡುತ್ತಿರುವ ಬೆಂಗಳೂರಿನ ಮಹಿಳೆ:
ನಾನು ಪಾರ್ಟಿ ಮಾಡುವುದಿಲ್ಲ, ಧೂಮಪಾನ, ಮದ್ಯಪಾನ ಮಾಡುವುದಿಲ್ಲ. ಆದರೆ ತಂದೆತಾಯಿಗಾಗಿ ಖರ್ಚು ಮಾಡ್ತೇನೆ, ಒಳ್ಳೆ ಆಹಾರ ಸೇವನೆ ಮಾಡ್ತೇನೆ. ಹೀಗೆ ತಿಂಗಳಿಗೆ 70 ಸಾವಿರ ರೂ. ನಷ್ಟು ಖರ್ಚು ಇದೆ. ಈ ಭಾರೀ ಪ್ರಮಾಣದ ಖರ್ಚು ಇದ್ದರೂ ನಾನು ತಿಂಗಳಿಗೆ 1 ಲಕ್ಷ ರೂ. ಸೇವ್ ಮಾಡ್ತೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು Interpid-Bee 155 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ: ಹಲಸಿನ ಹಣ್ಣು ಸಿಕ್ರೆ ಹೀಗೊಮ್ಮೆ ಸಾಂಪ್ರದಾಯಿಕ ಶೈಲಿಯ ಕಡುಬು ಮಾಡಲು ಮರೆಯದಿರಿ
ಪೋಸ್ಟ್ ಇಲ್ಲಿದೆ ನೋಡಿ:
Living alone in Bangalore, India byu/Intrepid-Bee155 inpersonalfinanceindia
“ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಮಹಿಳೆ. ನಾನು ನನ್ನ ಖರ್ಚು ವೆಚ್ಚದ ಯೋಜನೆಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. 1BHK ಫ್ಲಾಟ್‌ಗೆ 27 ಸಾವಿರ ರೂ. ನೆಟ್‌ಫ್ಲಿಕ್ಸ್‌ಗೆ 199, ಮತ್ತು claude pro ಗೆ 2 ಸಾವಿರ ರೂ., ಆಹಾರಕ್ಕಾಗಿ 15 ಸಾವಿರ, ನೀರಿನ ಬಿಲ್ 499 ರೂ., 700 ವಿದ್ಯುತ್ ಬಿಲ್ ಹಾಗೂ ನಾನು ನನ್ನ ಹೆತ್ತವರಿಗಾಗಿ ಏನನ್ನಾದರೂ ಖರೀದಿಸಲು, ಪ್ರತಿ ತಿಂಗಳು ಸುಮಾರು 10 ಸಾವಿರ ರೂ. ಖರ್ಚು ಮಾಡ್ತೇನೆ. ನಿಖರವಾಗಿ ಹೇಳಲು ಸಾಧ್ಯವಿಲ್ಲ ಆದ್ರೆ ತಿಂಗಳಿಗೆ 70 ಸಾವಿರ ರೂ. ವರೆಗೆ ಖರ್ಚಾಗುತ್ತದೆ. ಈ ಭಾರೀ ಪ್ರಮಾಣದ ಖರ್ಚು ಇದ್ದರೂ ನಾನು ತಿಂಗಳಿಗೆ ಸುಮಾರು 1 ಲಕ್ಷ ಉಳಿಸುತ್ತೇನೆ.
ನಾನು ಇನ್ನೂ ಉತ್ತಮವಾಗಿ ಮಾಡಬಲ್ಲೆ ಎಂದು ನನಗೆ ತಿಳಿದಿದೆ, ಆದರೆ ಹಣ ಉಳಿಸಲು ನನ್ನ ಯೌವನದ ಪ್ರಾಯದಲ್ಲಿ ಭೀಕರವಾಗಿ ಬದುಕಲು, ಕಷ್ಟಕರವಾಗಿ ಬದುಕಲು ನಾನು ಇಷ್ಟಪಡುವುದಿಲ್ಲ. ಅಲ್ಲದೆ, ನಾನು ಧೂಮಪಾನ/ಮದ್ಯಪಾನ ಮಾಡುವುದಿಲ್ಲ ಅಥವಾ ಪಾರ್ಟಿಗೆ ಹೋಗುವುದಿಲ್ಲ, ಅದನ್ನು ಬಿಟ್ಟು ನನಗೆ ಅಮ್ಮ-ಅಪ್ಪನಿಗಾಗಿ ಖರ್ಚು ಮಾಡುವುದು ಮತ್ತು ಒಳ್ಳೆಯ ಆಹಾರಕ್ಕಾಗಿ ಹಣವನ್ನು ವ್ಯಯಿಸುವುದು ಇಷ್ಟ.” ಎಂದು ಬರೆದುಕೊಂಡಿದ್ದಾರೆ.
ಒಂದು ವಾರಗಳ ಹಿಂದೆ ಶೇರ್ ಮಾಡಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ23 ವರ್ಷ ವಯಸ್ಸಿಗೆ 1.7 ಲಕ್ಷ ಸಂಪಾದನೆ ಮಾಡುವುದು ಅದ್ಭುತವೇ ಸರಿ. ನನಗೆ 1.4 ಸಂಬಳ ಆದ್ರೆ ನಾನು ನಿಮ್ಮಷ್ಟು ಖರ್ಚು ಮಾಡುವುದಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕಾಲದಲ್ಲಿ ನಿಮ್ಮಂತಹ ವ್ಯಕ್ತಿಗಳಿರುವುದು ತುಂಬಾನೇ ಸಂತೋಷದ ವಿಷಯ, ಏಕೆಂದ್ರೆ ಈಗೀನ ಕಾಲದಲ್ಲಿ ಹೆಚ್ಚಿನವರು ಪಾರ್ಟಿ, ಧೂಮಪಾನ, ಮಧ್ಯಪಾನ ಮಾಡುವುದನ್ನೇ ಹೆಚ್ಚು ಆನಂದಿಸುತ್ತಾರೆʼ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








