AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tatkal Train Tickets: ರೈಲ್ವೆ ಪ್ರಯಾಣಿಕರ ಗಮನಕ್ಕೆ… ಬದಲಾಗ್ತಿದೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ; ಟೈಮಿಂಗ್ಸ್‌, ಮಾರ್ಗಸೂಚಿಗಳನ್ನು ಪರಿಶೀಲಿಸಿ

ಭಾರತೀಯ ರೈಲ್ವೆ ಮೇ 25 ರಿಂದ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಬದಲಾವಣೆಗಳು ಟಿಕೆಟ್‌ ಬುಕಿಂಗ್‌ ಮಾಡುವುದನ್ನು ಸುಗಮಗೊಳಿಸುವ, ವಂಚನೆಗಳನ್ನು ತಪ್ಪಿಸುವ, ನಿಜವಾದ ಪ್ರಯಾಣಿಕರು ತಾವು ಕಾಯ್ದಿರಿಸಿದ ಸೀಟುಗಳನ್ನು ಪಡೆಯುವ ಸಾಧ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಏನೆಲ್ಲಾ ಬದಲಾವಣೆಯಾಗಲಿದೆ, ಟೈಮಿಂಗ್ಸ್‌ ಮತ್ತು ಮಾರ್ಗಸೂಚಿಗಳೇನು ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

Tatkal Train Tickets: ರೈಲ್ವೆ ಪ್ರಯಾಣಿಕರ ಗಮನಕ್ಕೆ… ಬದಲಾಗ್ತಿದೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ; ಟೈಮಿಂಗ್ಸ್‌, ಮಾರ್ಗಸೂಚಿಗಳನ್ನು ಪರಿಶೀಲಿಸಿ
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌Image Credit source: Getty Images
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:May 03, 2025 | 11:10 AM

Share

ತತ್ಕಾಲ್ (Tatkal) ಟಿಕೆಟ್‌ ಬುಕಿಂಗ್‌ ಎಂಬುದು ಭಾರತೀಯ ರೈಲ್ವೆಯಲ್ಲಿ (Indian Railway) ಕೊನೆಯ ಕ್ಷಣದ ಪ್ರಯಾಣಕ್ಕಾಗಿ ಅಂದರೆ ತುರ್ತಾಗಿ ಪ್ರಯಾಣಿಸಲು ಟಿಕೆಟ್‌ ಬುಕ್‌ ಮಾಡಲು ವಿನ್ಯಾಸಗೊಳಿಸಲಾದ ಪ್ರೀಮಿಯಂ ಕೋಟಾವಾಗಿದೆ. ತಕ್ಷಣದ ಪ್ರಯಾಣಕ್ಕಾಗಿ ರೈಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ತತ್ಕಾಲ್‌ ಟಿಕೆಟ್‌ ಬುಕಿಂಗ್‌ (tatkal train tickets booking) ವಿಧಾನವನ್ನು ಜಾರಿಗೆ ತರಲಾಗಿದೆ. ಇದೀಗ ಭಾರತೀಯ ರೈಲ್ವೆ ಮೇ 25 ರಿಂದ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಈ ಬದಲಾವಣೆ ಪಾರದರ್ಶಕತೆಯನ್ನು ಹೆಚ್ಚಿಸುವ, ದುರುಪಯೋಗವನ್ನು ಕಡಿಮೆ ಮಾಡುವ ಹಾಗೂ ನಿಜವಾದ ಪ್ರಯಾಣಿಕರು ತಾವು ಕಾಯ್ದಿರಿಸಿದ ಸೀಟುಗಳನ್ನು ಪಡೆಯುವ ಸಾಧ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಮೇ 25 ರಿಂದ ಏನೆಲ್ಲಾ ಬದಲಾವಣೆಯಾಗಲಿದೆ?

  • ವಿವಿಧ ವರ್ಗಗಳಿಗೆ ಪರಿಷ್ಕೃತ ಬುಕಿಂಗ್ ಸಮಯಗಳು
  • ಬಹು ಟಿಕೆಟ್‌ಗಳನ್ನು ಬುಕ್ ಮಾಡುವ ಬಳಕೆದಾರರಿಗೆ ಸುಧಾರಿತ ಪರಿಶೀಲನೆ
  • ವೈಟಿಂಗ್ ಲಿಸ್ಟ್‌ನಲ್ಲಿರುವ ತತ್ಕಾಲ್ ಟಿಕೆಟ್‌ಗಳಿಗೆ ಹೊಸ ಮರುಪಾವತಿ ನಿಯಮಗಳು
  • ಉತ್ತಮ ಲಭ್ಯತೆಗಾಗಿ ಪರಿಷ್ಕೃತ ಕೋಟಾ ವಿತರಣೆ

ಹೊಸ ತತ್ಕಾಲ್‌ ಬುಕಿಂಗ್‌ ಸಮಯ:

  • ಎಸಿ ಕ್ಲಾಸ್‌ (1A, 2A, 3A, CC): ಬೆಳಗ್ಗೆ 10, ಪ್ರಯಾಣಕ್ಕೆ ಒಂದು ದಿನದ ಮುಂಚೆ
  • ನಾನ್‌ ಎಸಿ ಕ್ಲಾಸ್‌ (SL, 2S): ಬೆಳಗ್ಗೆ 11, ಪ್ರಯಾಣಕ್ಕೆ ಒಂದು ದಿನದ ಮುಂಚೆ
  • ಪ್ರಿಮಿಯಮ್‌ ತತ್ಕಾಲ್‌: ಸಂಜೆ 6, ಪ್ರಯಾಣಕ್ಕೆ ಒಂದು ದಿನದ ಮುಂಚೆ

ಮತ್ತು ರೈಲು ಹೊರಡುವ ಒಂದು ಗಂಟೆ ಮೊದಲು ಬುಕಿಂಗ್‌ ಮುಕ್ತಾಯವಾಗುತ್ತದೆ.

ಗಮನಿಸಿ: ಈ ಸಮಯ IRCTC ಮತ್ತು ಅಧಿಕೃತ ಏಜೆಂಟ್‌ಗಳ ಮೂಲಕ ಆನ್‌ಲೈನ್ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತವೆ.

ಇದನ್ನೂ ಓದಿ
Image
ಈ ಬೇಸಿಗೆಯಲ್ಲಿ ಬರುವ ತಲೆನೋವಿಗೆ ರಾಮಬಾಣ ಮಜ್ಜಿಗೆ
Image
ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ
Image
ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ
Image
ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ

ಇದನ್ನೂ ಓದಿ: ತುಳಸಿ – ಶುಂಠಿ ಚಹಾ, ತಣ್ಣನೆಯ ಮಜ್ಜಿಗೆ ಈ ಬೇಸಿಗೆಯಲ್ಲಿ ಬರುವ ತಲೆನೋವಿಗೆ ರಾಮಬಾಣ

ಬುಕಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಗಳು:

ದುರುಪಯೋಗವನ್ನು ತಡೆಯಲು ಮತ್ತು ಬುಕಿಂಗ್ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಲವೊಂದು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

  • ಆಧಾರ್ ಪರಿಶೀಲನೆ: ತಿಂಗಳಿಗೆ 2 ಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್-ಲಿಂಕ್ಡ್ ಮೊಬೈಲ್ ಸಂಖ್ಯೆ ಕಡ್ಡಾಯ.
  • ಟಿಕೆಟ್ ಬುಕಿಂಗ್ ಮಿತಿ: ಪ್ರತಿ ಬಳಕೆದಾರರಿಗೆ ತಿಂಗಳಿಗೆ ಗರಿಷ್ಠ 6 ತತ್ಕಾಲ್ ಟಿಕೆಟ್‌ಗಳನ್ನು ಅನುಮತಿಸಲಾಗಿದೆ.
  • ಕಡ್ಡಾಯ OTP ಲಾಗಿನ್: ಪ್ರತಿ ಬುಕಿಂಗ್‌ಗೆ ಹೊಸ OTP ಪರಿಶೀಲನೆಯ ಅಗತ್ಯವಿರುತ್ತದೆ.

ಈ ಹೊಸ ನಿಯಮ ನಿಜವಾದ ಪ್ರಯಾಣಿಕರು ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದೆಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಇನ್ನೂ ಅನುಮಾನಾಸ್ಪದ ಖಾತೆಗಳನ್ನು ನಿರ್ಬಂಧಿಸಲು, ಒಂದೇ ಐಪಿ ವಿಳಾಸದಿಂದ ಬುಕಿಂಗ್‌ ಮಾಡಲು, ಬಾಟ್‌ ಮತ್ತು ಹೈ-ಫ್ರೀಕ್ವೆನ್ಸಿ ಲಾಗಿನ್‌ಗಳನ್ನು ಪತ್ತೆ ಹಚ್ಚಲು ಭಾರತೀಯ ರೈಲ್ವೆ  ಎಐ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸಹ ಪರಿಚಯಿಸಿದೆ.

ತತ್ಕಾಲ್‌ ಟಿಕೆಟ್‌  ಹೊಸ ಮರು ಪಾವತಿ ನಿಯಮ ಹೇಗಿದೆ:

ಸಾಮಾನ್ಯವಾಗಿ ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಿದ ನಂತರ ಅದನ್ನು ರದ್ದುಗೊಳಿಸಿದರೆ ಮರು ಪಾವತಿ ದೊರೆಯುವುದಿಲ್ಲ. ಅಂದರೆ ಕನ್‌ಫರ್ಮ್‌ ಆದ ತತ್ಕಾಲ್‌ ಟಿಕೆಟ್‌ಗೆ ಬುಕಿಂಗ್‌ ಮಾಡಿದ ನಂತರ ಮರು ಪಾವತಿಗೆ ಅವಕಾಶವಿಲ್ಲ. ವೇಯ್ಟ್‌ಲಿಸ್ಟ್‌ ಅಥವಾ ತುರ್ತು ಸಮಯದಲ್ಲಿ ರೈಲ್ವೆ ನಿಯಮಗಳ ಪ್ರಕಾರ ಕ್ಲರ್ಕೇಜ್‌ ಹೊರತು ಪಡಿಸಿ ಪೂರ್ಣ ಮರು ಪಾವತಿಗೆ ಅವಕಾಶವಿದೆ. ರೈಲ್ವೆ ರದ್ದುಗೊಳಿಸಿದ ಟಿಕೆಟ್‌ಗೆ ತತ್ಕಾಲ್‌ ಶುಲ್ಕಗಳು ಸೇರಿದಂತೆ ಪೂರ್ಣ ಮರು ಪಾವತಿ ಲಭ್ಯವಿದೆ.

ತತ್ಕಾಲ್‌ ಟಿಕೆಟ್‌ ಕೋಟಾ ಮರು ಹಂಚಿಕೆ:

  • ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ -15% ಸೀಟುಗಳು
  • ಮೇಲ್/ಎಕ್ಸ್‌ಪ್ರೆಸ್‌ ರೈಲುಗಳು -18% ಸೀಟುಗಳು
  • ಜನ ಶತಾಬ್ದಿ/ ಇಂಟರ್‌ಸಿಟಿ -10% ಸೀಟು
  • ಪ್ರೀಮಿಯಂ ರೈಲು (ರಾಜಧಾನಿ) -12%

ತತ್ಕಾಲ್ ಟಿಕೆಟ್‌ಗಳನ್ನು ಯಶಸ್ವಿಯಾಗಿ ಬುಕ್ ಮಾಡಲು ಸಲಹೆಗಳು:

ಹೊಸ ನಿಯಮಗಳ ಅಡಿಯಲ್ಲಿ ಕನ್‌ಫರ್ಮ್‌ ತತ್ಕಾಲ್ ಟಿಕೆಟ್ ಪಡೆಯಲು ನಿಮಗೆ ಸಹಾಯ ಮಾಡುವ ಕೆಲವು ತ್ವರಿತ ಸಲಹೆಗಳು ಇಲ್ಲಿವೆ:

  • ಬುಕಿಂಗ್ ಸಮಯಕ್ಕೆ 5 ನಿಮಿಷಗಳ ಮೊದಲು ಲಾಗಿನ್ ಮಾಡಿ
  • ಆಧಾರ್-ಲಿಂಕ್ಡ್ ಸಂಖ್ಯೆಯನ್ನು OTP ಗಾಗಿ ಸಿದ್ಧವಾಗಿಡಿ.
  • ಫಾಸ್ಟ್ ಇಂಟರ್ನೆಟ್ ಬಳಸಿ ಮತ್ತು ಬಹು ಲಾಗಿನ್‌ಗಳನ್ನು ತಪ್ಪಿಸಿ
  • IRCTC ಯ ಮಾಸ್ಟರ್ ಪಟ್ಟಿಯನ್ನು ಬಳಸಿಕೊಂಡು ಪ್ರಯಾಣಿಕರ ವಿವರಗಳನ್ನು ಮೊದಲೇ ಭರ್ತಿ ಮಾಡಿ.
  • ಸಾಧ್ಯವಾದರೆ ಹೊಂದಿಕೊಳ್ಳುವ ಬೋರ್ಡಿಂಗ್ ಪಾಯಿಂಟ್‌ಗಳನ್ನು ಆರಿಸಿ.

ಮೇ 25 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಮುಂಬರುವ ಬದಲಾವಣೆಗಳು ಹೆಚ್ಚಿನ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಸಲುವಾಗಿ ತೆಗೆದುಕೊಂಡ ಕ್ರಮವಾಗಿದೆ. ಉಲ್ಲೇಖಿಸಲಾದ ಬದಲಾವಣೆಗಳು ಭಾರತೀಯ ರೈಲ್ವೆಯ ಅಧಿಕೃತ ಸುತ್ತೋಲೆಗಳು ಮತ್ತು ಪ್ರಕಟಣೆಗಳನ್ನು ಆಧರಿಸಿವೆ. ಬುಕಿಂಗ್ ಮಾಡುವ ಮೊದಲು ಪ್ರಯಾಣಿಕರು ಅಧಿಕೃತ IRCTC ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪರಿಶೀಲಿಸುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 25 April 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ