ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ, ಇವುಗಳು ಆರೋಗ್ಯಕ್ಕೆ ಹಾನಿ

ನಮ್ಮ ದೇಹವು ದಿನವಿಡೀ ಶಕ್ತಿಯಿಂದ ತುಂಬಿರಲು ಬೆಳಗಿನ ಉಪಹಾರವನ್ನು ಸೇವಿಸುವುದು ಬಹಳ ಮುಖ್ಯ. ಆದರೆ ನಾವು ಎಲ್ಲಾ ರೀತಿಯ ಆಹಾರಗಳನ್ನು ಬೆಳಗಿನ ಉಪಹಾರದ ಹೊತ್ತಿನಲ್ಲಿ ಸೇವಿಸಬಾರದು. ಏಕೆಂದರೆ ಅವುಗಳು ಪ್ರಯೋಜನಕಾರಿಯಾಗುವ ಬದಲು ಆರೋಗ್ಯಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ. ಹಾಗಾಗಿ ನೀವು ಬೆಳಗಿನ ಉಪಹಾರದ ಸಮಯದಲ್ಲಿ ಈ ಕೆಲವೊಂದು ಆಹಾರಗಳನ್ನು ಸೇವಿಸದಿರುವುದು ಉತ್ತಮ. ಅವುಗಳು ಯಾವುವು ಎಂಬುದನ್ನು ತಿಳಿಯಿರಿ.

ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ, ಇವುಗಳು ಆರೋಗ್ಯಕ್ಕೆ ಹಾನಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 15, 2023 | 6:42 PM

ಬೆಳಗಿನ ಉಪಹಾರವು ನಮ್ಮನ್ನು ದಿನವಿಡೀ ಚುರುಕಾಗಿರಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಯಾರೂ ಕೂಡ ಬೆಳಗಿನ ಉಪಹಾರವನ್ನು ತಪ್ಪಿಸುವುದಿಲ್ಲ. ಹೀಗಿದ್ದರೂ ನಾವು ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ನಿಖರವಾಗಿ ಏನು ತಿನ್ನಬೇಕೆಂದು ತಿಳಿಯುವುದು ಸಹ ಮುಖ್ಯವಾಗಿದೆ. ಅನೇಕರು ಉಪಹಾರವನ್ನು ಸೇವಿಸುತ್ತಾರೆ ಆದರೆ ಅವರಿಗೆ ಸಾಕಷ್ಟು ಪೋಷಕಾಂಶಗಳು ಸಿಗುವುದಿಲ್ಲ. ಏಕೆಂದರೆ ಅವರು ಬೆಳಗಿನ ಉಪಹಾರದಲ್ಲಿ ತಪ್ಪು ಆಯ್ಕೆ ಮಾಡಿರುತ್ತಾರೆ. ಯಾವಾಗಲೂ ಆರೋಗ್ಯಕರ ಉಪಹಾರವು ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಒಳಗೊಂಡಿರಬೇಕು. ಆದರೆ ಮುಂಜಾನೆ ನಾವೆಲ್ಲರೂ ಅವಸರದಲ್ಲಿರುವ ದಿನದ ಸಮಯವಾಗಿದೆ ಮತ್ತು ಅದಕ್ಕಾಗಿಯೇ ಮೊದಲು ಸಿಕ್ಕಿದ್ದನ್ನು ತಿನ್ನುತ್ತೇವೆ. ನಮ್ಮ ಈ ಅಭ್ಯಾಸವು ದೇಹಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಉಪಹಾರದ ಸಮಯದಲ್ಲಿ ಈ ಕೆಲವೊಂದು ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಬೆಳಗಿನ ಉಪಹಾರದಲ್ಲಿ ನೀವು ತಪ್ಪಿಸಬೇಕಾದ ಆಹಾರಗಳು

ಪೂರಿ:

ರುಚಿಕರವಾದ ಪೂರಿ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸಲು ತುಂಬಾ ಸಂತೋಷವಾಗುತ್ತದೆ. ಆದರೆ ಈ ಆಹಾರ ಪದಾರ್ಥಗಳು ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುತ್ತದೆ ಮತ್ತು ಅವುಗಳು ಬಹಳಷ್ಟು ಕ್ಯಾಲೋರಿಗಳನ್ನು ಹೊಂದಿರುತ್ತವೆ. ಪ್ರತಿದಿನ ಬೆಳಗ್ಗೆ ಆಲೂ ಪೂರಿ ತಿಂದರೆ ಬೊಜ್ಜು, ರಕ್ತದೊತ್ತಡ, ಅಸಿಡಿಟಿ, ಕೊಲೆಸ್ಟ್ರಾಲ್ ಮುಂತಾದ ಸಮಸ್ಯೆಗಳು ಕಾಡಬಹುದು.

ಪ್ಯಾನ್ ಕೇಕ್:

ಪ್ಯಾನ್ ಕೇಕ್ ಕೊಬ್ಬು, ಸಕ್ಕರೆ ಮತ್ತು ಕ್ಯಾಲೋರಿಗಳಿಂದ ಕೂಡಿರುತ್ತದೆ. ಇದು ಯಾವುದು ಕೂಡ ನಿಮಗೆ ಹೆಚ್ಚು ಪ್ರಯೋಜನ ನೀಡುವುದಿಲ್ಲ. ಅವುಗಳು ಹೆಚ್ಚು ಫೈಬರ್​​ನ್ನು ಹೊಂದಿಲ್ಲ. ಇದು ಉಪಹಾರದ ನಂತರ ನಿಮಗೆ ಹಸಿವಿನ ಭಾವನೆಯನ್ನು ಉಂಟುಮಾಡಬಹುದು. ಇದಲ್ಲದೆ, ಅದರಲ್ಲಿನ ಸಕ್ಕರೆ ಅಂಶವು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಸಕ್ಕರೆಭರಿತ ಆಹಾರಗಳನ್ನು ಸೇವಿಸಿದರೆ ಅದು ಅಜೀರ್ಣಕ್ಕೆ ಕಾರಣವಾಗಬಹುದು.

ಪರಾಠಗಳು:

ಕೆಲವರು ಬೆಳಗ್ಗಿನ ಉಪಹಾರಕ್ಕೆ ಪರಾಠಗಳನ್ನು ಸೇವಿಸತ್ತಾರೆ. ಕೆಲವೊಮ್ಮೆ ಆಲೂ ಪರಾಠ, ಕೆಲವೊಮ್ಮೆ ಪನೀರ್ ಪರಾಠವನ್ನು ಸೇವಿಸುತ್ತೇವೆ ಆದರೆ ಇವುಗಳು ಅಷ್ಟೇನು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಶೇಷವಾಗಿ ಮೈದಾ ಹಿಟ್ಟಿನಿಂದ ತಯಾರಿಸಿದ ಪರಾಠಗಳಿಂದ ದೂರವಿರಿ. ಅದು ಜೀರ್ಣಾಂಗ ವ್ಯವಸ್ಥೆಗೆ ಅನಾರೋಗ್ಯಕರ. ಆದ್ದರಿಂದ ಪರಾಠ ಸೇವಿಸಬೇಕೆಂದಿದ್ದರೆ ಜೋಳ, ರಾಗಿ, ಗೋಧಿ ಇತ್ಯಾದಿಗಳಿಂದ ತಯಾರಿಸಿದ ಆರೋಗ್ಯಕರ ಪರಾಠಗಳನ್ನು ಆರಿಸಿಕೊಳ್ಳಿ.

ನೂಡಲ್ಸ್:

ಇತ್ತೀಚಿನ ದಿನಗಳಲ್ಲಿ ಅನೇಕರು ಮ್ಯಾಗಿ ಇನ್ನಿತರ ನೂಡಲ್ಸ್ ತಿನ್ನುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ನೂಡಲ್ಸ್ ತಿನ್ನಲು ರುಚಿಕರ ಹಾಗೇನೆ ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸುತ್ತದೆ ಆದರೆ ಇವುಗಳು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಇವುಗಳನ್ನು ಮೈದಾ ಹಿಟ್ಟು ಮತ್ತು ಎಣ್ಣೆಯಿಂದ ತಯಾರಿಸಲಾಗುತ್ತದೆ. ಈ ಮೈದಾ ಹಿಟ್ಟು ಆರೋಗ್ಯಕ್ಕೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ. ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಆದ್ದರಿಂದ ಹೆಚ್ಚು ನೂಡಲ್ಸ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಇದನ್ನೂ ಓದಿ:ಬೆಳಗಿನ ಉಪಹಾರ ಸೇವನೆಯಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಪ್ಯಾಕ್ ಮಾಡಿದ ಧಾನ್ಯಹಾರಗಳು:

ಮ್ಯೂಸ್ಲಿ, ಕಾರ್ನ್ ಫ್ಲೇಕ್ಸ್ ಇತ್ಯಾದಿಗಳನ್ನು ಒಳಗೊಂಡಂತೆ ಪ್ಯಾಕ್ ಮಾಡಿದ ಧಾನ್ಯಹಾರಗಳು ಆರೋಗ್ಯಕರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಹಾಗಾಗಿ ಹೆಚ್ಚಿವರು ಬೆಳಗಿನ ಉಪಹಾರಕ್ಕೆ ಈ ಆಹಾರಗಳನ್ನು ಸೇವಿಸುತ್ತಾರೆ. ಆದರೆ ಅವುಗಳು ಹೆಚ್ಚಿನ ಸಕ್ಕರೆ, ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ನೀವು ಅಂದುಕೊಂಡಂತೆ ಅವುಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲ.

ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್

ಬೆಳಗ್ಗಿನ ಉಪಹಾರದಲ್ಲಿ ಮಾರುಕಟ್ಟೆಯಿಂದ ತಂದ ಪ್ಯಾಕೇಜ್ಡ್ ಜ್ಯೂಸ್ ಸೇವಿಸುವುದು ಉತ್ತಮ ಆಯ್ಕೆಯಲ್ಲ. ಇದರಲ್ಲಿ ಸಕ್ಕರೆಯ ಅಂಶ ಹೆಚ್ಚಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಬಹಳಷ್ಟು ಹೆಚ್ಚಾಗಬಹುದು, ಆದ್ದರಿಂದ ನೀವು ಜ್ಯೂಸ್ ಕುಡಿಯುವ ಬದಲು ಹಣ್ಣುಗಳನ್ನು ತಿನ್ನುವುದು ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್