ಬೇಸಿಗೆಗಾಲವನ್ನು ಯಾರು ಕೂಡ ಇಷ್ಟ ಪಡುವುದಿಲ್ಲ. ಚಳಿಗಾಲವಾದರೂ ಪರವಾಗಿಲ್ಲ ಈ ಬೇಸಿಗೆಗಾಲ ಬರುವುದೇ ಬೇಡಪ್ಪ ಎಂದು ಹೇಳುವವರೇ ಹೆಚ್ಚು. ಈ ಕೆಲವು ತಿಂಗಳಲ್ಲಿ ಸೂರ್ಯನ ಸುಡು ಬಿಸಿಲಿನ ನಡುವೆ ಸೆಕೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರು ಫ್ಯಾನಿನಡಿಯಲ್ಲಿ ಇರಲು ಇಷ್ಟ ಪಡುತ್ತಾರೆ. ಅದಲ್ಲದೇ, ಕೆಲವು ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಅಪ್ಪಿತಪ್ಪಿಯು ಬೇಸಿಗೆಗಾಲದಲ್ಲಿ ಈ ಕೆಲವು ಆಹಾರಗಳತ್ತ ತಿರುಗಿಯು ನೋಡಬೇಡಿ, ಇದರಿಂದ ಆರೋಗ್ಯ ಸಮಸ್ಯೆಯೂ ಕಾಡುತ್ತದೆ.
* ಉಪ್ಪಿನಕಾಯಿ : ಕೆಲವರಿಗೆ ಮಧ್ಯಾಹ್ನದ ಊಟದ ವೇಳೆ ಉಪ್ಪಿನಕಾಯಿ ಇರಲೇಬೇಕು. ಆದರೆ ಬೇಸಿಗೆಗಾಲದಲ್ಲಿ ಈ ಉಪ್ಪಿನ ಕಾಯಿ ಸೇವನೆಯಿಂದ ದೂರವಿದ್ದರೆ ಒಳ್ಳೆಯದು. ಇದರಲ್ಲಿ ಸೋಡಿಯಂ ಅಂಶವು ಹೇರಳವಾಗಿದ್ದು, ನಿರ್ಜಲೀಕರಣವಾಗಿ ದೇಹದಲ್ಲಿನ ನೀರು ಕಡಿಮೆಯಾಗುತ್ತದೆ. ಹೀಗಾಗಿ ಉಪ್ಪಿನ ಕಾಯಿ ಸೇವನೆಯನ್ನು ಆದಷ್ಟು ದೂರ ಮಾಡಿ.
* ಕಾಫಿ : ಕೆಲವರಂತೂ ಕಾಫಿ ಪ್ರಿಯರಾಗಿರುತ್ತಾರೆ. ಹೀಗಾಗಿ ದಿನಕ್ಕೆ ಎರಡು ಮೂರು ಸಲವಾದರೂ ಕಾಫಿಯನ್ನು ಕುಡಿಯುತ್ತಾರೆ. ಬಿಸಿ ಕಾಫಿ ಸೇವನೆ ಮಾಡಿದರೆ ನೀರಿನಾಂಶವು ಕಡಿಮೆಯಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಾಫಿ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು.
* ಮಸಾಲೆಯುಕ್ತ ಆಹಾರಗಳು : ಮಸಾಲೆಯುಕ್ತ ಆಹಾರಗಳೂ ಎಲ್ಲರಿಗೂ ಇಷ್ಟನೇ. ಆದರೆ ಸುಡುವ ಬಿಸಿಯಲ್ಲಿ ಈ ಆಹಾರವನ್ನು ಸೇವಿಸಿದರೆ ಇದರಲ್ಲಿರುವ ಮಸಾಲಾ ಅಂಶವು ದೇಹದ ಶಾಖಾ ಹೆಚ್ಚಿಸಿ ದೇಹವನ್ನು ಬಿಸಿಯಾಗಿಸುತ್ತದೆ. ವಿಪರೀತ ಬೆವರುವುದು ಹಾಗೂ ದೇಹ ನಿರ್ಜಲೀಕರಣ ಪ್ರಕ್ರಿಯೆಗಳು ಆಗುತ್ತದೆ.
* ಕರಿದ ಆಹಾರಗಳು : ಕರಿದ ಆಹಾರವು ನಾಲಿಗೆಗೆ ರುಚಿ ನೀಡುತ್ತದೆ. ಆದರೆ ಬೇಸಿಗೆಗಾಲದಲ್ಲಿ ಈ ಆಹಾರವು ದೇಹಕ್ಕೆ ಒಳ್ಳೆದಲ್ಲ. ಈ ಸಮಯದಲ್ಲಿ ಸಮೋಸಾ, ಚಾಟ್ಸ್, ಸೇರಿದಂತೆ ಇನ್ನಿತರ ಕರಿದ ಆಹಾರಗಳಿಂದ ಸಾಧ್ಯವಾದಷ್ಟು ದೂರವಿದ್ದರೆ ಉತ್ತಮ.
ಇದನ್ನೂ ಓದಿ: ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಾರೆಯೇ, ಈ ಅಭ್ಯಾಸದಿಂದ ಲಾಭಗಳೇ ಹೆಚ್ಚು
* ಉಪ್ಪು : ಕೆಲವರು ತಮ್ಮ ಆಹಾರ ಪದಾರ್ಥಗಳಲ್ಲಿ ಹೆಚ್ಚು ಉಪ್ಪನ್ನು ಬಳಸುತ್ತಾರೆ. ಉಪ್ಪು ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಜಾಸ್ತಿ ಉಪ್ಪಿನಾಂಶವಿರುವ ಆಹಾರಗಳನ್ನು ಬೇಸಿಗೆಯಲ್ಲಿ ಕಡಿಮೆಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
* ಗ್ರಿಲ್ ಮಾಂಸಾಹಾರಗಳು : ವಾತಾವರಣವು ಬಿಸಿಯಾಗಿರುವುದರಿಂದ ಈ ಗ್ರಿಲ್ ಮಾಂಸಹಾರಗಳು ದೇಹವನ್ನು ಮತ್ತಷ್ಟು ಬಿಸಿಯಾಗಿಸುತ್ತದೆ. ದೇಹದ ಶಾಖವು ಹೆಚ್ಚಾದಂತೆ ಆರೋಗ್ಯ ಸಮಸ್ಯೆಯೂ ಕಾಡಬಹುದು. ಹೀಗಾಗಿ ಇಂತಹ ಆಹಾರಗಳಿಂದ ಹೆಚ್ಚು ದೂರವಿರಿ.
* ಆಲ್ಕೋಹಾಲ್ : ಬೇಸಿಗೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿದರೆ ದೇಹದಲ್ಲಿ ನಾನಾ ರೀತಿಯ ಆಹಾರ ಸಮಸ್ಯೆಗಳು ಕಾರಣವಾಗುತ್ತದೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಿದರೆ ನಿರ್ಜಲೀಕರಣ, ತಲೆನೋವು, ಬಾಯಿಯ ಶುಷ್ಕತೆ ಹೀಗೆ ನಾನಾ ರೀತಿಯ ತೊಂದರೆಗಳಿಗೆ ಆಹ್ವಾನಕೊಟ್ಟಂತಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ