71st Miss World: ವಿಶ್ವ ಸುಂದರಿ ಸ್ಪರ್ಧೆ; ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಕನ್ನಡತಿ ಸಿನಿ ಶೆಟ್ಟಿ
Sini Shetty: ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ. 30 ದಶಕಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗಿದೆ. 28 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆ ನಡೆದಿತ್ತು. ಈ ವರ್ಷ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 9 ರಂದು ಅದ್ಭುತ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.
71ನೇ ವಿಶ್ವ ಸುಂದರಿ ಸ್ಪರ್ಧೆ ಆರಂಭವಾಗಿದೆ. ಈ ಈವೆಂಟ್ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ಭಾರತದಲ್ಲಿ ನಡೆಯಲಿದೆ. ಸುಮಾರು 28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿದೆ. ಈ ಆಚರಣೆಗಳು ನವದೆಹಲಿಯಲ್ಲಿ ನಡೆಯುತ್ತಿವೆ. ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ “ನೀನೇ ನನ್ನ ಗುರಿ, ನೀನು ನನ್ನ ಸಂಕೇತ. ನಾನು ನನ್ನ ದೇಶದ ತ್ರಿವರ್ಣ ಧ್ವಜವನ್ನು ನನ್ನ ಕೈಯಲ್ಲಿ ಮಾತ್ರವಲ್ಲದೆ ನನ್ನ ಹೃದಯದಲ್ಲೂ ಇರಿಸಿದ್ದೇನೆ” ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಂಭ್ರಮಾಚರಣೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ವಿಶ್ವಕ್ಕೆ ಭಾರತದ ಪರಿಚಯ ಮಾಡಿಕೊಳ್ಳಲು ಹಾಗೂ ಭಾರತ ನೀಡುವ ಆತಿಥ್ಯ ಸ್ವೀಕರಿಸಲು ಅತ್ಯುತ್ತಮ ಅವಕಾಶ ಕಲ್ಪಿಸಲಿದೆ ಎಂದು ಹೇಳಿಕೊಂಡಿದ್ದಾರೆ. ಮಿಸ್ ವರ್ಲ್ಡ್ ಉದ್ಘಾಟನಾ ಸಮಾರಂಭ ಇಂದು ಸಂಜೆ (ಫೆಬ್ರವರಿ 20) missworld.com ನಲ್ಲಿ ನೇರ ಪ್ರಸಾರವಾಗಲಿದೆ. ಬಹುನಿರೀಕ್ಷಿತ 71ನೇ ವಿಶ್ವ ಸುಂದರಿ ಗ್ಲೋಬಲ್ ಫೈನಲ್ ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಪ್ರಪಂಚದಾದ್ಯಂತದ 120 ಸ್ಪರ್ಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಭುತ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.
ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಮಂಗಳವಾರ 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುತಿಸಲು ನವದೆಹಲಿಯ ದಿ ಆಶಿಕ್‌ನಲ್ಲಿ ‘ದಿ ಓಪನಿಂಗ್ ಸೆರಮನಿ’ ಮತ್ತು ‘ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ’ ಅನ್ನು ಆಯೋಜಿಸಲಿದೆ. ಫ್ಯಾಷನ್ ಡಿಸೈನರ್ ಅರ್ಚನಾ ಕೊಚ್ಚರ್ ಅವರು 71 ನೇ ವಿಶ್ವ ಸುಂದರಿ ಸ್ಪರ್ಧೆಯ ಅಧಿಕೃತ ಫ್ಯಾಷನ್ ಡಿಸೈನರ್ ಆಗಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಮದುವೆ; ದೃಷ್ಟಿಹೀನ ಕುಶಲಕರ್ಮಿಗಳಿಂದ ತಯಾರಾಗುತ್ತಿದೆ ವಿಶೇಷ ಉಡುಗೊರೆ
ಸಿನಿ ಶೆಟ್ಟಿಯ ಕಿರು ಪರಿಚಯ:
ಕರ್ನಾಟಕದ ಉಡುಪಿ ಮೂಲದ ಸಿನಿ ಶೆಟ್ಟಿ ಈ ಹಿಂದೆ ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್-2022’ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಭರತನಾಟ್ಯ ನೃತ್ಯದಲ್ಲೂ ತರಬೇತಿ ಪಡೆದಿದ್ದಾರೆ. ಪ್ರಸ್ತುತ ಅವರು ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಿದೆ ಎಂದು ಸಿನಿ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. 2023ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುವುದರೊಂದಿಗೆ ಭಾರತ ಒಟ್ಟು ಎರಡನೇ ಬಾರಿ ಈ ಸ್ಪರ್ಧೆ ಆಯೋಜಿಸಿದೆ. 27 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಈ ಸ್ಪರ್ಧೆ ನಡೆದಿತ್ತು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Tue, 20 February 24