ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಾರೆಯೇ, ಈ ಅಭ್ಯಾಸದಿಂದ ಲಾಭಗಳೇ ಹೆಚ್ಚು

ಎಲ್ಲರಿಗೂ ಕೂಡ ಹಾಗೆ ಇಷ್ಟವಿಲ್ಲದ ಕೆಲಸ ಮಾಡಲು ಮನಸ್ಸು ಆಗುವುದಿಲ್ಲ. ಅದರಲ್ಲಿಯೂ ಈ ವಿದ್ಯಾರ್ಥಿಗಳಿಗೆ ಓದುವುದೆಂದರೆ ಅಲರ್ಜಿ. ಪರೀಕ್ಷಾ ಹತ್ತಿರ ಬರುತ್ತಿದ್ದಂತೆ ಬೇಡದ ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಇನ್ನು ಕೆಲವರಿಗೆ ಎಷ್ಟು ಓದಿದರೂ ಕೂಡ ತಲೆಗೆ ಹತ್ತುವುದೇ ಇಲ್ಲ. ಹೀಗಾಗಿ ಹೆಚ್ಚಿನ ಮಕ್ಕಳು ನಾಳೆ ಪರೀಕ್ಷೆಯಾದರೆ ಪಾಸ್ ಆದರೆ ಸಾಕು ಎನ್ನುವಷ್ಟು ಓದಿ ಮುಗಿಸುತ್ತಾರೆ. ನೀವು ಗಮನಿಸಿರಬಹುದು ಕೆಲವರಿಗೆ ಗಟ್ಟಿಯಾಗಿ ಓದುವ ಅಭ್ಯಾಸವಿರುತ್ತದೆ. ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಿದ್ದರೆ ಮನಸ್ಸಿನಲ್ಲಿ ಓದು ಎಂದು ಯಾವತ್ತೂ ಹೇಳಲೇಬೇಡಿ. ಈ ರೀತಿಯಾಗಿ ಓದುವುದರಿಂದ ಆಗುವ ಪ್ರಯೋಜನಗಳು ಮಾತ್ರ ಹಲವು.

ಪರೀಕ್ಷಾ ಸಮಯದಲ್ಲಿ ನಿಮ್ಮ ಮಕ್ಕಳು ಗಟ್ಟಿಯಾಗಿ ಓದುತ್ತಾರೆಯೇ, ಈ ಅಭ್ಯಾಸದಿಂದ ಲಾಭಗಳೇ ಹೆಚ್ಚು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 19, 2024 | 6:20 PM

ಪರೀಕ್ಷೆ ಕಾಲ ಹತ್ತಿರ ಬರುತ್ತಿದ್ದಂತೆ ಮಕ್ಕಳು ಯಾರಪ್ಪ ಈ ಪರೀಕ್ಷೆಯನ್ನು ಕಂಡುಹಿಡಿದದ್ದು ಎಂದು ಹೇಳುವುದನ್ನು ನೀವು ನೋಡಿರಬಹುದು. ಈ ಸಮಯದಲ್ಲಿ ಓದಿದರೆ ಸಾಲದು, ಓದಿದ್ದೆಲ್ಲವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ಪರೀಕ್ಷೆ ಮುಗಿದರೆ ಸಾಕು ಎನ್ನುವವರನ್ನು ನೋಡಿರಬಹುದು. ಬುದ್ಧಿವಂತ ವಿದ್ಯಾರ್ಥಿಗಳು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಪುಸ್ತಕ ಹಿಡಿದು ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಕೆಲವು ವಿದ್ಯಾರ್ಥಿಗಳು ಪುಸ್ತಕವನ್ನು ಹಿಡಿಯುವುದೇ ಇಲ್ಲ. ಕೆಲವರೂ ಓದಿ ಪರೀಕ್ಷೆ ಬರೆದರೆ, ಇನ್ನು ಹಲವರು ಶಿಕ್ಷಕರು ಹೇಳಿದ ಪಾಠವನ್ನೇ ನೆನಪಿನಲ್ಲಿಟ್ಟುಕೊಂಡು ಎಕ್ಸಾಮ್ ಬರೆದು ಮುಗಿಸುತ್ತಾರೆ.

* ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ : ಗಟ್ಟಿಯಾಗಿ ಓದುವ ಅಭ್ಯಾಸವು ಮಕ್ಕಳಲ್ಲಿದ್ದರೆ ಇದರಿಂದ ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ. ನೀವು ಗಮನಿಸಿರಬಹುದು, ಶಾಲೆಯಲ್ಲಿ ಶಿಕ್ಷಕರು ಗಟ್ಟಿಯಾಗಿ ಪಾಠ ಮಾಡಿದ್ದರೆ, ಅದನ್ನು ನೆನಪಿನಲ್ಲಿಟ್ಟುಕೊಂಡೇ ಪರೀಕ್ಷೆ ಬರೆಯುವ ಮಕ್ಕಳಿದ್ದಾರೆ. ಹೀಗಾಗಿ ಗಟ್ಟಿಯಾಗಿ ಓದುವ ಅಭ್ಯಾಸವು ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಾಗಲು ಸಹಾಯಕವಾಗಿದೆ.

* ಬೇಗ ಅರ್ಥವಾಗಲು ಸಾಧ್ಯ: ಕೆಲವೊಮ್ಮೆ ಒಂದೇ ವಿಷಯವನ್ನು ಎಷ್ಟೇ ಓದಿದರೂ ಕೂಡ ಅರ್ಥವಾಗುವುದಿಲ್ಲ. ಆದರೆ ಅದೇ ವಿಷಯವನ್ನು ಗಟ್ಟಿಯಾಗಿ ಬಿಡಿಸಿ ಓದುವುದರಿಂದ ಆ ವಿಷಯವು ಬೇಗನೇ ಅರ್ಥವಾಗುತ್ತದೆ. ಒಂದು ವೇಳೆ ಸಣ್ಣ ಮಕ್ಕಳಿಗೆ ಕಷ್ಟದ ಶಬ್ದಗಳು ಅರ್ಥವಾಗದೇ ಹೋದರೆ ಪೋಷಕರು ಗಟ್ಟಿಯಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಇದನ್ನೂ ಓದಿ: ಮಕ್ಕಳ ಪರೀಕ್ಷೆ ಸಮಯ ಹತ್ತಿರ ಬರುತ್ತಿದ್ದಂತೆ ಹೆತ್ತವರಾದ ನಿಮ್ಮ ಪಾತ್ರ ಹೀಗಿರಲಿ

* ಅಕ್ಷರಗಳನ್ನು ಗುರುತಿಸಲು ಸಹಕಾರಿ : ಆಗ ತಾನೇ ಶಾಲೆಗೆ ಹೋಗುವ ಮಕ್ಕಳು ಗಟ್ಟಿಯಾಗಿ ಓದುತ್ತಾರೆ. ಎಲ್ಲರಿಗೂ ಕೇಳುವಂತೆ ಓದುವುದರಿಂದ ಸಣ್ಣ ಮಕ್ಕಳು ಅಕ್ಷರವನ್ನು ಗುರುತಿಸಲು ಸಾಧ್ಯವಾಗುತ್ತದೆ.

* ಗಮನವನ್ನು ಕೇಂದ್ರಿಕರಿಸಲು ಸಹಾಯಕ : ಓದಲು ಶುರು ಮಾಡಿದ್ದಂತೆ ಗಮನವು ಇನ್ಯಾವುದೋ ವಿಚಾರದ ಮೇಲೆ ಹೋಗಬಹುದು. ಆದರೆ ಎಲ್ಲರಿಗೂ ಕೇಳುವಂತೆ ಓದುವುದರಿಂದ ಗಮನವು ಒಂದೇ ಕಡೆಗೆ ಕೇಂದ್ರಿಕರಿಸಬಹುದು.

* ಬೇಗ ಓದಿ ಮುಗಿಸಬಹುದು : ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸಿದರೆ, ಬೇಗನೇ ಓದುವುದರೊಂದಿಗೆ ಓದಿದ ವಿಷಯಗಳೆಲ್ಲವನ್ನು ನೆನಪಿನಲ್ಲಿಡಬಹುದು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ