ಸಣ್ಣ ಸಣ್ಣ ವಿಷಯಗಳಿಗೂ ಅಳುತ್ತೀರಾ? ಇದರಿಂದ ಹೊರಬರಲು 9 ಸರಳ ಮಾರ್ಗಗಳು ಇಲ್ಲಿವೆ!

ಭಾವನೆಗಳನ್ನು ವ್ಯಕ್ತಪಡಿಸಲು ಅಳುವುದು ಒಂದು ಮಾರ್ಗವಾಗಿರುವುದರಿಂದ ಅಳುವುದು ಸರಿ ಎಂದು ನಾವು ಒಪ್ಪಿಕೊಂಡಿರುತ್ತೇವೆ. ಆದರೆ ಈ ರೀತಿಯ ಪ್ರಕ್ರಿಯೆ ಇತರರಿಗೆ ನಿಮ್ಮೊಂದಿಗೆ ಸಂವಹನ ನಡೆಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗಬಹುದು. ಆದ್ದರಿಂದ, ನೀವು ಅವುಗಳನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಣ್ಣ ಸಣ್ಣ ವಿಷಯಗಳಿಗೂ ಅಳುತ್ತೀರಾ? ಇದರಿಂದ ಹೊರಬರಲು 9 ಸರಳ ಮಾರ್ಗಗಳು ಇಲ್ಲಿವೆ!
crying
Edited By:

Updated on: Jan 07, 2024 | 3:40 PM

ನೀವು ತುಂಬಾ ಭಾವುಕ ವ್ಯಕ್ತಿಗಳಾ? ಸಣ್ಣ ಸಣ್ಣ ವಿಷಯಗಳಿಗೂ ಸಹ ಅಳುತ್ತೀರಾ? ಹಾಗಾದರೆ “ನಾನು ಏಕೆ ಅಳುತ್ತಿದ್ದೇನೆ? ಎಂಬ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳಿ ಕೊಳ್ಳಿ, ಏಕೆಂದರೆ ಕೆಲವೊಮ್ಮೆ ಸ್ಪಷ್ಟ ಪ್ರಚೋದನೆ ಇಲ್ಲದೆ ಅನಿರೀಕ್ಷಿತವಾಗಿ ಭಾವುಕತೆ ನಿಮ್ಮನ್ನು ಅಪ್ಪಳಿಸಬಹುದು. ಭಾವನೆಗಳನ್ನು ವ್ಯಕ್ತಪಡಿಸಲು ಇದು ಒಂದು ಮಾರ್ಗವಾಗಿರುವುದರಿಂದ ಅಳುವುದು ಸರಿ ಎಂದು ನಾವು ಒಪ್ಪಿಕೊಂಡಿರುತ್ತೇವೆ. ಆದರೆ ಈ ರೀತಿಯ ಪ್ರಕ್ರಿಯೆ ಇತರರಿಗೆ ನಿಮ್ಮೊಂದಿಗೆ ಸಂವಹನ ನಡೆಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗಬಹುದು. ಆದ್ದರಿಂದ, ನೀವು ಅವುಗಳನ್ನು ನಿಯಂತ್ರಿಸಲು ಏನು ಮಾಡಬಹುದು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾಗಾದರೆ ಅತಿಯಾಗಿ ಅಳುವುದನ್ನು ನಿಲ್ಲಿಸುವುದು ಹೇಗೆ?

ಇತ್ತೀಚಿನ ವರ್ಷ ಅಥವಾ ದಿನಗಳಲ್ಲಿ ನೀವು ಹಿಂದೆಂದಿಗಿಂತಲೂ ಹೆಚ್ಚು ಅಳುವುದನ್ನು ರೂಢಿಸಿಕೊಂಡಿದ್ದರೆ ಇದು ನಿಯಮಿತ ಅಭ್ಯಾಸವಾಗಿದ್ದರೆ, ಅದನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಪ್ರಮಾಣೀಕೃತ ಮನಶ್ಶಾಸ್ತ್ರಜ್ಞೆ ಹೇಮಶ್ರೀ ಅಲಸೆ ಅವರ ಪ್ರಕಾರ, ಅತಿಯಾದ ಅಳುವಿಕೆಯು ಸುಡುವಿಕೆಯನ್ನು ಸೂಚಿಸುತ್ತದೆ. ದೀರ್ಘಕಾಲದ ಕೆಲಸದ ಒತ್ತಡ ಭಾವನಾತ್ಮಕ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಸಣ್ಣ ಒತ್ತಡಗಳಿಗೆ ಪ್ರತಿಕ್ರಿಯಿಸುವವರು ಕಣ್ಣೀರಿನ ಪ್ರತಿಕ್ರಿಯೆಗಳಿಗೆ ಹೆಚ್ಚು ಒಳಗಾಗುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನಿಮ್ಮ ಪ್ರಕಾರ ಪ್ರೀತಿ ಎಂದರೆ ಅದು ಕೇವಲ ಆಕರ್ಷಣೆಯೇ?

ಸಣ್ಣ ವಿಷಯಗಳಿಗೆ ಅಳುವುದನ್ನು ನಿಯಂತ್ರಿಸಲು 9 ಮಾರ್ಗಗಳು ಇಲ್ಲಿವೆ:

  1. ನಿಮ್ಮ ಅಳುವಿಗೆ ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ:ಹೇಮಶ್ರೀ ಅಲಾಸೆ ಹೇಳುವ ಪ್ರಕಾರ, “ಅತಿಯಾದ ಅಳುವಿಕೆಗೆ ಕಾರಣವಾಗುವ ನಿಮ್ಮ ಪ್ರಚೋದಕ ಅಂದರೆ ಕಾರಣಗಳನ್ನು ಗುರುತಿಸುವುದು ನಿಯಂತ್ರಣವನ್ನು ಪಡೆಯುವ ಮೊದಲ ಹೆಜ್ಜೆಯಾಗಿದೆ.” ಇದು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಅದರಿಂದ ರಕ್ಷಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
  2. ಆಳವಾಗಿ ಉಸಿರಾಟ ಮಾಡುವುದನ್ನು ಅಭ್ಯಾಸ ಮಾಡಿ: ಕಣ್ಣೀರು ಉಕ್ಕಿ ಬರುವಾಗ, ಅದನ್ನು ನಿಧಾನಗೊಳಿಸಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಮೂಗಿನ ಮೂಲಕ ಆಳವಾಗಿ ಉಸಿರೆಳೆದುಕೊಳ್ಳಿ, ಕೆಲವು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ ಮತ್ತು ನಿಮ್ಮ ಬಾಯಿಯ ಮೂಲಕ ನಿಧಾನವಾಗಿ ಉಸಿರನ್ನು ಹೊರಹಾಕಿ. ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
  3. ಮೈಂಡ್ಫುಲ್ನೆಸ್ ಧ್ಯಾನ: ಆ ಕ್ಷಣದಲ್ಲಿ ನಿಮ್ಮನ್ನು ಸಮಾಧಾನ ಮಾಡಿಕೊಳ್ಳಲು ಬುದ್ಧಿವಂತಿಕೆಯನ್ನು ಉಪಯೋಗಿಸಿ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ ಮತ್ತು ನಿರ್ಣಯವಿಲ್ಲದೆ ನಿಮ್ಮ ಆಲೋಚನೆಗಳನ್ನು ಗಮನಿಸಿ. “ಮೈಂಡ್ಫುಲ್ನೆಸ್ ಧ್ಯಾನವು ಅತಿಯಾದ ಭಾವನೆಗಳ ವಿರುದ್ಧ ಮಾನಸಿಕ ಶಾಂತಿಯನ್ನು ಒದಗಿಸುತ್ತದೆ” ಎಂದು ಅಲಸೆ ಹೇಳುತ್ತಾರೆ.
  4. ಸಕಾರಾತ್ಮಕ ಆಲೋಚನೆಗಳನ್ನು ಮಾಡಿ: ನಕಾರಾತ್ಮಕ ಆಲೋಚನೆಗಳನ್ನು ಎದುರಿಸಲು ಸಕಾರಾತ್ಮಕ ಆಲೋಚನೆಗಳನ್ನು ಮಾಡಿ. ನಿಮ್ಮ ಸಾಮರ್ಥ್ಯವನ್ನು ನೆನಪಿಸಿಕೊಳ್ಳಿ. ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ನೀವು ಅತಿಯಾಗಿ ಅಳುವಾಗ ಇದನ್ನು ಪುನರಾವರ್ತಿಸಿ.
  5. ಗಡಿಗಳನ್ನು ನಿಗದಿಪಡಿಸಿ ಅಥವಾ ಅಗತ್ಯವಿದ್ದಾಗ ಇಲ್ಲ ಎಂದು ಹೇಳಲು ಹಿಂಜರಿಯಬೇಡಿ: ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆರೋಗ್ಯಕರ ಗಡಿಗಳನ್ನು ಸ್ಥಾಪಿಸಿರಿ ಎಂದು ಅಲಾಸೆ ಹೇಳುತ್ತಾರೆ, “ನಿಮ್ಮ ಮಿತಿಗಳನ್ನು ಇತರರಿಗೆ ಸ್ಪಷ್ಟವಾಗಿ ತಿಳಿಸಿ, ಮತ್ತು ಅಗತ್ಯವಿದ್ದಾಗ ಇಲ್ಲ ಎಂದು ಹೇಳಲು ಹಿಂಜರಿಯಬೇಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಹೊರೆಯನ್ನು ತಡೆಯುತ್ತದೆ.
  6. ಜರ್ನಲಿಂಗ್/ ದಿನಚರಿ ಬರೆಯುವುದನ್ನು ಬೆಳೆಸಿಕೊಳ್ಳಿ: ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳಿ. ನಿಮ್ಮ ಭಾವನೆಗಳನ್ನು ಒಂದು ಕಡೆ ಬರೆಯುವುದು ಸವಾಲಿನ ಸಂದರ್ಭಗಳಲ್ಲಿ ನಿಮಗೆ ಚಿಕಿತ್ಸಕ ಮಾರ್ಗವಾಗಿದೆ.
  7. ಆರೋಗ್ಯಕರ ಜೀವನಶೈಲಿ ಆಯ್ಕೆಗಳು: ನೀವು ಸಾಕಷ್ಟು ನಿದ್ರೆ ಮಾಡುತ್ತೀರಿ, ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುತ್ತಿದ್ದೀರಿ ಮತ್ತು ಹೈಡ್ರೇಟ್ ಆಗಿ ಇರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಉತ್ತಮ ಪೋಷಣೆಯಲ್ಲಿರುವ ದೇಹವು ಭಾವನಾತ್ಮಕ ಸವಾಲುಗಳನ್ನು ನಿಭಾಯಿಸಲು ಉತ್ತಮವಾಗಿ ಸಜ್ಜುಗೊಂಡಿರುತ್ತದೆ.
  8. ದೈಹಿಕ ಚಟುವಟಿಕೆ: ನೈಸರ್ಗಿಕ ಮನಸ್ಥಿತಿ ವರ್ಧಕಗಳಾದ ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡಲು ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ವಾಕಿಂಗ್, ಜಾಗಿಂಗ್ ಅಥವಾ ಯೋಗಾಭ್ಯಾಸಗಳು ನಿಮ್ಮ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  9. ಬೆಂಬಲವನ್ನು ಪಡೆಯಿರಿ: ನಿಮ್ಮ ಭಾವನೆಗಳ ಕುರಿತು ಸ್ನೇಹಿತರು, ಕುಟುಂಬ ಅಥವಾ ಚಿಕಿತ್ಸಕರೊಂದಿಗೆ ಮಾತನಾಡಿ ಎಂದು ಅಲಾಸ್ ಹೇಳುತ್ತಾರೆ, “ನಿಮ್ಮ ಭಾವನೆಗಳನ್ನು, ನೀವು ತುಂಬಾ ನಂಬುವ ಯಾರೊಂದಿಗಾದರೂ ಹಂಚಿಕೊಳ್ಳುವುದು ನಿಮ್ಮ ಮನಸ್ಸಿಗೆ ಆರಾಮವನ್ನು ನೀಡುತ್ತದೆ”.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us