Relationships: ನಿಮ್ಮ ಪ್ರಕಾರ ಪ್ರೀತಿ ಎಂದರೆ ಅದು ಕೇವಲ ಆಕರ್ಷಣೆಯೇ?

ನೀವು ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡುವ ಮುನ್ನ ನಿಮ್ಮ ಮೇಲೆ ಆ ವ್ಯಕ್ತಿಗೆ ನಿಜವಾದ ಪ್ರೀತಿ ಇದೆಯೇ? ಅಥವಾ ನೀವು ಕೇವಲ ತಾತ್ಕಾಲಿಕ ಆಕರ್ಷಣೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಕರ್ಷಣೆ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸ ತಿಳಿದು ಮುಂದುವರಿಯುವುದು ಅಗತ್ಯ.

Relationships: ನಿಮ್ಮ ಪ್ರಕಾರ ಪ್ರೀತಿ ಎಂದರೆ ಅದು ಕೇವಲ ಆಕರ್ಷಣೆಯೇ?
Relationships TipsImage Credit source: Pinterest
Follow us
ಅಕ್ಷತಾ ವರ್ಕಾಡಿ
|

Updated on: Jan 04, 2024 | 6:42 PM

ಕೆಲವರು ಕ್ಷಣಿಕ ಆಕರ್ಷಣೆಯನ್ನು ಪ್ರೀತಿ ಎಂದು ತಪ್ಪಾಗಿ ಭಾವಿಸುತ್ತಾರೆ. ಇದು ಪ್ರಾರಂಭದಲ್ಲಿ ನಿಮಗೆ ಸಂತೋಷವನ್ನು ನೀಡಿದರೂ ಸಹ ಕಾಲನಂತರದಲ್ಲಿ ದುಃಖದಿಂದಲೇ ಅಂತ್ಯಗೊಳ್ಳುತ್ತದೆ.ನೀವು ಯಾರನ್ನಾದರೂ ಇಷ್ಟಪಟ್ಟರೆ ಅಥವಾ ಇಷ್ಟಪಡಲು ಪ್ರಾರಂಭಿಸಿದರೆ ಮತ್ತು ಅದೇ ಸಮಯದಲ್ಲಿ ನೀವು ಸಂಬಂಧವನ್ನು ಪ್ರೀತಿ ಎಂದು ಕರೆಯುತ್ತಿದ್ದರೆ, ಇದು ನಿಮ್ಮ ದೊಡ್ಡ ತಪ್ಪು. ಪ್ರೀತಿಗೂ ಆಕರ್ಷಣೆಗೂ ಬಹಳ ಸೂಕ್ಷ್ಮ ವ್ಯತ್ಯಾಸವಿದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ನೀವು ಅರ್ಥಮಾಡಿಕೊಂಡರೆ, ನೀವು ನಿಜವಾದ ಪ್ರೀತಿಯನ್ನು ಕಂಡುಕೊಳ್ಳಬಹುದು. ಆದ್ದರಿಂದ ನಿಮ್ಮ ಸಂಬಂಧ ತಾತ್ಕಾಲಿಕ ಆಕರ್ಷಣೆ ಎಂದಾದರೆ ಈ ಲಕ್ಷಣಗಳು ನಿಮ್ಮ ಸಂಗಾತಿಯಲ್ಲಿ ಗುರುತಿಸುವಿರಿ.

ತನ್ನ ಕನಸು ಹಾಗೂ ಭವಿಷ್ಯದ ಬಗ್ಗೆ ನಿಮ್ಮೊಂದಿಗೆ ಮಾತನಾಡುವುದು:

ನಿಮ್ಮ ಸಂಗಾತಿಯು ನಿಮ್ಮೊಂದಿಗೆ ತನ್ನ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದರೆ, ಹಾಗೂ ಅದನ್ನು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದರೆ ಆತ ನಿಮ್ಮನ್ನು ಜೀವನದುದ್ದಕ್ಕೂ ಬಾಳ ಸಂಗಾತಿಯಾಗಿ ಬಯಸುತ್ತಾನೆ ಎಂಬ ಅರ್ಥವನ್ನು ನೀಡುತ್ತದೆ. ಆತ ಬರೀ ನಿಮ್ಮ ದೇಹದ ಆಕರ್ಷಣೆಯ ಬಗ್ಗೆ ಮಾತನಾಡುತ್ತಿದ್ದರೆ ಅದು ನಿಜವಾದ ಪ್ರೀತಿಯಲ್ಲ ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ನೋವಿನಲ್ಲೂ ಜೊತೆಯಾಗುವುದು:

ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಸುತ್ತಿರುವಾಗ, ಅವರು ತಮ್ಮ ಸಂಗಾತಿಯೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ಬಯಸುತ್ತಾರೆ. ನಿಮ್ಮ ಸಂಗಾತಿಯು ನಿಮ್ಮನ್ನು ಪ್ರೀತಿಸುತ್ತಿದ್ದರೆ, ಅವನು ಅಥವಾ ಅವಳು ನಿಮ್ಮ ಭೇಟಿಗಾಗಿ ಕಾಯುತ್ತಿರುತ್ತಾರೆ. ಆದರೆ ಅದು ಕೇವಲ ಆಕರ್ಷಣೆಯಾಗಿದ್ದರೆ ಅದು ಕೆಲವು ದಿನಗಳವರೆಗೆ ಮಾತ್ರ ಸಂಭವಿಸುತ್ತದೆ. ಕೆಲವು ದಿನಗಳ ನಂತರ, ನಿಮ್ಮ ಸಂಗಾತಿಯು ನಿಮ್ಮನ್ನು ಭೇಟಿಯಾಗಲು ಯಾವುದೇ ಆಸಕ್ತಿಯನ್ನು ತೋರಿಸುತ್ತಿಲ್ಲವೆಂದಾದರೆ ಆತ ಅಥವಾ ಆಕೆ ಬೇರೆಲ್ಲಿಯೋ ಕಾರ್ಯನಿರತನಾಗಿರುತ್ತಾರೆ ಎಂಬ ಅರ್ಥವನ್ನು ನೀಡುತ್ತದೆ.ಆಕರ್ಷಣೆಯ ಸಂಬಂಧದಲ್ಲಿ, ನೀವು ಕೇವಲ ಆಯ್ಕೆಯಾಗುತ್ತೀರಿ.

ಇದನ್ನೂ ಓದಿ: ಮಾನಸಿಕ ಆರೋಗ್ಯಕ್ಕೆ ಕೆಲಸದಿಂದ ಯಾವಾಗ ಬ್ರೇಕ್ ತೆಗೆದುಕೊಳ್ಳಬೇಕು?

ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು:

ಸಂಬಂಧದಲ್ಲಿ ಏನೂ ಅಡಗಿರಬಾರದು. ನೀವು ಯಾರೊಂದಿಗಾದರೂ ಸಂಬಂಧದಲ್ಲಿದ್ದರೆ, ನಿಮ್ಮ ಸಂಗಾತಿಯ ಎಲ್ಲಾ ತಪ್ಪುಗಳು, ನ್ಯೂನತೆಗಳು ಮತ್ತು ಸಾಮರ್ಥ್ಯಗಳನ್ನು ನೀವು ಒಪ್ಪಿಕೊಳ್ಳುವುದು ಮುಖ್ಯ. ನಿಮ್ಮ ಸಂಗಾತಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನಿಮಗೆ ಸಂಪೂರ್ಣ ಹಕ್ಕಿದೆ. ನಿಮ್ಮ ಸಂಗಾತಿ ತನ್ನ ವೈಯಕ್ತಿಕ ಜೀವನದ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದರೆ, ನಂತರ ಎಚ್ಚರದಿಂದಿರಿ. ಈ ರೀತಿಯ ವ್ಯಕ್ತಿಯಿಂದ ನೀವು ಸಮಯಕ್ಕಿಂತ ಮುಂಚಿತವಾಗಿ ದೂರವಿದ್ದರೆ ಅದು ನಿಮಗೆ ಉತ್ತಮವಾಗಿರುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್