ಸುದೀರ್ಘ ಬದುಕಿನಲ್ಲಿ ನಿದ್ರೆ ಅತಿ ಮುಖ್ಯ. ಆರೋಗ್ಯದ ದೃಷ್ಟಿಯಿಂದ ಎಲ್ಲಾ ಜೀವಿಗಳಿಗೂ ಸಹ ನಿದ್ರೆ ಅತ್ಯವಶ್ಯಕ. ಮುಖ್ಯವಾಗಿ ಮನುಷ್ಯರಲ್ಲಿ ದೈಹಿಕ ಮತ್ತು ಮಾನಸಿಕ ಸ್ಥಿತಿಗೆ ನಿದ್ರೆ ಪ್ರಮುಖ ಪಾತ್ರವನ್ನುವಹಿಸುತ್ತದೆ. ನಿದ್ರೆಯ ಸಮಸ್ಯೆಯಿಂದ ನಿದ್ರಾಹೀನತೆ, ಸ್ಲೀಪ್ ಅಪ್ನಿಯಾದಂಥಹ ಸಮಸ್ಯೆಗಳಿಗೆ ಜನರು ಗುರಿಯಾಗುತ್ತಿದ್ದಾರೆ. ಜೀವನ ಶೈಲಿಯಲ್ಲಿನ ಹಲವು ಬದಲಾವಣೆಗೆ ಜತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಒಳ್ಳೆಯ ನಿದ್ರೆ ಅತ್ಯವಶ್ಯಕವಾಗಿದೆ. ಕೆಲವರು ರಾತ್ರಿ ಸರಿಯಾದ ನಿದ್ರೆ ಆಗುತ್ತಿಲ್ಲ ಎಂದು ತುಂಬಾ ತಲೆಕೆಡಿಕೊಳ್ಳುವುದುಂಟು. ಮುಖ್ಯ ಕಾರಣವೆಂದರೆ ಆಹಾರ ಪದ್ಧತಿ ಮತ್ತು ಜೀವನಶೈಲಿ. ಇವುಗಳ ಕೆಲವು ಬದಲಾವಣೆಗಳು ನಿದ್ರಾ ಹೀನತೆ ಸಮಸ್ಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಈ ಕೆಲವು ಅಂಶಗಳನ್ನು ಪಾಲಿಸುವ ಮೂಲಕ ನಿದ್ರೆಯನ್ನು ಸುಧಾರಿಸಿಕೊಳ್ಳಬಹುದು:
ಕಾಫಿ ಕುಡಿಯುವುದುದನ್ನು ತಪ್ಪಿಸಿ
ಕೆಲವರಿಗೆ ಕಾಫಿ ಎಂದರೆ ತುಂಬಾ ಇಷ್ಟ. ಯಾವ ಸಮಯದಲ್ಲಿ ಕಾಫಿ ಕೊಟ್ಟರೂ ಸಹ ಕುಡಿಯುವ ಅಭ್ಯಾಸವಿರುತ್ತದೆ. ಅಂಥವರು ರಾತ್ರಿ ಮಲಗುವ ಮುನ್ನವೂ ಕಾಫಿ ಕುಡಿದು ಮಲಗುವ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸವನ್ನು ಆದಷ್ಟು ತಪ್ಪಿಸಿ. ನಿಮ್ಮ ಮೆದುಳನ್ನು ಎಚ್ಚರವಾಗಿರಿಸಲು ಕಾಫಿ ಸಹಾಯ ಮಾಡುತ್ತದೆ. ಕೆಫೀನ್ ಅಂಶ ನಿಮ್ಮನ್ನು ಹೆಚ್ಚು ಎಚ್ಚರವಾಗಿರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ರಾತ್ರಿ ಮಲಗುವ 6ರಿಂದ 8 ಗಂಟೆಗಳ ಒಳಗೆ ಎಂದಿಗೂ ಕಾಫಿ ಸೇವನೆ ಒಳ್ಳೆಯದಲ್ಲ.
ದೀರ್ಘ ನಿದ್ರೆ ತೆಗೆದುಕೊಳ್ಳುವುದು
ಸ್ವಲ್ಪ ಸಮಯದ ನಿದ್ರೆ ಆರೋಗ್ಯವನ್ನು ಹದಗೆಡಿಸುತ್ತದೆ. ಕೆಲವರು ಮಧ್ಯಾಹ್ನದ ಸಮಯದಲ್ಲಿ ಕೆಲ ಸಮಯ ನಿದ್ರೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದು ರಾತ್ರಿಯ ಸಮಯದ ನಿದ್ರೆಯನ್ನು ಹದಗೆಡಿಸುತ್ತದೆ. ಹಾಗಾಗಿ ಮಧ್ಯಾಹ್ನದಲ್ಲಿ ಕೆಲಹೊತ್ತು ನಿದ್ರೆ ಮಾಡುವ ಅಭ್ಯಾಸವನ್ನು ಆದಷ್ಟು ಕಡಿಮೆ ಮಾಡಿ. ರಾತ್ರಿಯ ವೇಳೆ ದೀರ್ಘನಿದ್ರೆಯು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಅರೆ ನಿದ್ರೆಯಿಂದ ತಲೆನೋವು, ರಕ್ತದೊತ್ತಡ, ಮಾನಸಿಕ ಸ್ಥಿತಿ ಏರುಪೇರಿನಂತಹ ಸಮಸ್ಯೆ ಉಂಟಾಗುತ್ತದೆ.
ಬೆಳಕು ಮರೆಮಾಚಲು ಪರದೆ ಬಳಕೆ
ಮಲಗುವಾಗ ಕತ್ತಲೆಯಲ್ಲಿ ಮಲಗುವುದು ಉತ್ತಮ. ಇದು ನಿಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಬೆಳಕು ಬರುವ ಕಿಟಕಿ, ಬಾಗಿಲುಗಳಿಗೆ ಪರದೆಯನ್ನು ಬಳಸಿ. ಇದರಿಂದ ಕೋಣೆಯ ಒಳಗೆ ಬೆಳಕು ಪ್ರವೇಶಿಸುವುದಿಲ್ಲ. ಆಗ ನೀವು ದೀರ್ಘಕಾಲ ನಿದ್ರೆಯನ್ನು ಪಡೆಯಬಹುದು. ರಾತ್ರಿ ನಿದ್ರೆಯಲ್ಲಿ ಪದೆ ಪದೆ ಎಚ್ಚರವಾಗುವುದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗಾಗಿ ನಿಮ್ಮ ಒಳ್ಳೆಯ ನಿದ್ರೆಯ ಬಗ್ಗೆ ಗಮನವಿರಲಿ.
ಇದನ್ನೂ ಓದಿ:
Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?
Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಿವಿ ಹಣ್ಣು ತಿನ್ನಿ; ಇದರ ಪ್ರಯೋಜನಗಳು ಎಷ್ಟಿವೆ ಗೊತ್ತಾ?