ಮುಖದ ಮೇಲೆ ಒಂದೇ ಭಾಗದಲ್ಲಿ, ಪದೇ ಪದೇ ಮೊಡವೆಗಳು ಹುಟ್ಟುತ್ತಿದೆಯಾ? ಕಾರಣ ತಿಳಿದುಕೊಳ್ಳಿ

|

Updated on: Mar 09, 2023 | 6:07 PM

ಒಂದೇ ಕಡೆ ಹೆಚ್ಚಾಗಿ ಮೊಡವೆಗಳು ಹುಟ್ಟುತ್ತಿದ್ದರೆ ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ. ಆಂಡ್ರೋಜೆನ್‌ ಹಾರ್ಮೋನುಗಳು ಪ್ರೌಢಾವಸ್ಥೆಯಲ್ಲಿ ಹೆಚ್ಚಾಗುವ ಹಾರ್ಮೋನ್‌ಗಳಾಗಿವೆ. ಇದು ಮೊಡವೆಗಳಿಗೆ ಕಾರಣವಾಗಬಹುದು.

ಮುಖದ ಮೇಲೆ ಒಂದೇ ಭಾಗದಲ್ಲಿ, ಪದೇ ಪದೇ  ಮೊಡವೆಗಳು ಹುಟ್ಟುತ್ತಿದೆಯಾ? ಕಾರಣ ತಿಳಿದುಕೊಳ್ಳಿ
ಮೊಡವೆ ಸಮಸ್ಯೆ
Image Credit source: Healthline
Follow us on

ಮೊಡವೆಗಳು ಸಾಮಾನ್ಯವಾಗಿ ನಿಮ್ಮ ಮುಖದ ,ಹಣೆ, ಗಲ್ಲ ಹಾಗೂ ಕೆನ್ನೆಯ ಮೇಲೆ ಹುಟ್ಟುತ್ತದೆ. ಆದರೆ ಈ ಕೆಲವರಿಗೆ ಪದೇ ಪದೇ ಹಣೆಯ ಮೇಲೆ ಅಥವಾ ಕೆನ್ನೆಯ ಮೇಲೆ ಮೊಡವೆಗಳು ಉಂಟಾಗುತ್ತದೆ. ಆದ್ದರಿಂದ ಮುಖದಲ್ಲಿ ಒಂದೇ ಕಡೆ ಹೆಚ್ಚಾಗಿ ಮೊಡವೆಗಳು ಹುಟ್ಟುತ್ತಿದ್ದರೆ ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿದುಕೊಳ್ಳಿ. ಆಂಡ್ರೋಜೆನ್‌ ಹಾರ್ಮೋನುಗಳು ಪ್ರೌಢಾವಸ್ಥೆಯಲ್ಲಿ ಹೆಚ್ಚಾಗುವ ಹಾರ್ಮೋನ್‌ಗಳಾಗಿವೆ ಮತ್ತು ಸೆಬಾಸಿಯಸ್ ಗ್ರಂಥಿಗಳನ್ನು ಹಿಗ್ಗಿಸಲು ಮತ್ತು ಹೆಚ್ಚು ಮೇದೋಗ್ರಂಥಿಗಳ ಸ್ರಾವವನ್ನು ಉಂಟುಮಾಡುತ್ತದೆ. ಇದು ಮೊಡವೆಗಳಿಗೆ ಕಾರಣವಾಗಬಹುದು.

ಸೌಂದರ್ಯವರ್ಧಕ ಮತ್ತು ಕ್ಲಿನಿಕಲ್ ಸಂಶೋಧನೆಯ ನಿರ್ದೇಶಕರಾದ ಜೋಶುವಾ ಝೀಚ್ನರ್ ಮುಖದ ಮೇಲೆ ಒಂದೇ ಭಾಗದಲ್ಲಿ ಪದೇ ಪದೇ ಮೊಡವೆಗಳು ಹುಟ್ಟಲು ಕಾರಣವೇನು? ಎಂಬುದನ್ನು ತಿಳಿಸಿದ್ದಾರೆ.

ಹಣೆಯ ಮೇಲಿನ ಮೊಡವೆ:

ಸಾಕಷ್ಟು ಜನರಿಗೆ ಮುಖದಲ್ಲಿ ಯಾವುದೇ ಕಲೆಗಳು ಇಲ್ಲದಿದ್ದರೂ ಕೂಡ ಪದೇ ಪದೇ ಹಣೆಯ ಮೇಲೆ ಮಾತ್ರ ಮೊಡವೆಗಳು ಉಂಟಾಗುತ್ತದೆ. ವಿಶೇಷವಾಗಿ ಮುಟ್ಟಿನ ಸಮಯದಲ್ಲಿ ಇಂತಹ ಲಕ್ಷಣಗಳು ಕಂಡು ಬರಬಹುದು. ಆದರೆ ನಿಮಗೆ ಹಣೆಯ ಮೇಲೆ ಮಾತ್ರ ಪದೇ ಪದೇ ಮೊಡವೆಗಳು ಕಂಡು ಬರುತ್ತಿದ್ದರೆ ಇದಕ್ಕೆ ಪ್ರಮುಖ ಕಾರಣ ತಲೆಯ ಹೊಟ್ಟಿನ ಸಮಸ್ಯೆ. ಕೂದಲು ತೊಳೆಯದೇ ಇದ್ದರೆ, ಅಥವಾ ನೆತ್ತಿಯಲ್ಲಿ ತೇವಾಂಶವನ್ನು ಕಳೆದುಕೊಂಡಿದ್ದಾರೆ ಹಣೆಯಲ್ಲಿ ಮೊಡವೆಗಳು ಹುಟ್ಟಲು ಕಾರಣವಾಗುತ್ತದೆ.

ಹುಬ್ಬುಗಳ ನಡುವಿನ ಮೊಡವೆ:

ಪದೇ ಪದೆ ನಿಮ್ಮ ಹುಬ್ಬುಗಳ ನಡುವೆ ಮಾತ್ರ ಮೊಡವೆಗಳು ಕಂಡು ಬರುತ್ತಿದ್ದರೆ, ನೀವು ಈ ಕೂಡಲೇ ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಬೇಕಿದೆ. ಯಾಕೆಂದರೆ ಹುಬ್ಬುಗಳ ನಡುವಿನ ಮೊಡವೆಯೂ ಕಳಪೆ ಆಹಾರಕ್ರಮವನ್ನು ಸೂಚಿಸುತ್ತದೆ. ನಿಮ್ಮ ಕಳಪೆ ಆಹಾರ ಕ್ರಮಗಳು ಹುಬ್ಬುಗಳ ನಡುವೆ ಮೊಡವೆಗಳು ಹುಟ್ಟಲು ಕಾರಣವಾಗುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವ ಅಭ್ಯಾಸ ನಿಮಗಿದೆಯೇ?

ಕೆನ್ನೆಯ ಮೇಲಿನ ಮೊಡವೆ:

ಕೆನ್ನೆಯ ಮೇಲಿನ ಮೊಡವೆಗಳಿಗೆ ಪ್ರಮುಖ ಕಾರಣ ನಿಮ್ಮ ಮೊಬೈಲ್​​ ಫೋನ್​ ಹಾಗೂ ತಲೆದಿಂಬು. ನೀವು ಪ್ರತೀ ಬಾರಿ ಮೊಬೈಲ್​ ಬಳಸುವಾಗ ಮೊಬೈಲ್​ ಸ್ಕ್ರೀನ್​​ ಮೇಲಿನ ಧೂಳು ಮಾಲಿನ್ಯಗಳನ್ನು ಸ್ವಚ್ಚಗೊಳಿಸಿ ನಂತರ  ಫೋನ್​​ ಬಳಸಿ. ಜೊತೆಗೆ ನೀವು ಬಳಸುವ ತಲೆದಿಂಬುಗಳ ಕವರ್​ಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸುತ್ತಿರಿ.

ಗಲ್ಲದ ಮೇಲಿನ ಮೊಡವೆ:

ಗಲ್ಲದ ಮೇಲಿನ ಮೊಡವೆಗಳಿಗೆ ಪ್ರಮುಖ ಕಾರಣ ಒತ್ತಡದ ಜೀವನಶೈಲಿ ಹಾಗೂ ಹಾರ್ಮೋನ್​​ ಬದಲಾವಣೆ. ನೀವು ಅತಿಯಾದ ಒತ್ತಡ ಹಾಗೂ ಮಾನಸಿಕವಾಗಿ ಸಮಸ್ಯೆಗಳನ್ನು ಹೊಂದಿದ್ದರೆ, ಗಲ್ಲದ ಮೇಲೆ ಮೊಡವೆಗಳು ಬೀಳಲು ಕಾರಣವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:27 pm, Thu, 9 March 23