AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleep: ಅಲಾರಂ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸವಿದೆಯಾ, ಇದ್ರೆ ಒಳ್ಳೇದೆ ಅನ್ನುತ್ತೆ ಅಧ್ಯಯನ

ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಇರುವ ಅನುಭವವಾಗುತ್ತದೆ.

Sleep: ಅಲಾರಂ ಆಫ್ ಮಾಡಿ ಮತ್ತೆ ಮಲಗುವ ಅಭ್ಯಾಸವಿದೆಯಾ, ಇದ್ರೆ ಒಳ್ಳೇದೆ ಅನ್ನುತ್ತೆ ಅಧ್ಯಯನ
ನಿದ್ರೆ
ನಯನಾ ರಾಜೀವ್
|

Updated on: Mar 09, 2023 | 2:18 PM

Share

ಬೆಳಗ್ಗೆ ಅಲಾರಂ ಹೊಡೆದ ತಕ್ಷಣ ನಿದ್ರೆಯಿಂದ ಎಚ್ಚರವಾಗುತ್ತೆ, ಆದ್ರೂ ಹಿಂದಿನ ದಿನದ ಆಯಾಸ ಹಾಗೆಯೇ ಉಳಿದಿರಬಹುದು. ಏಳೋಕೆ ಮನಸ್ಸಾಗುತ್ತಿಲ್ಲ ಎಂದು ಮತ್ತೆ ಹೊದ್ದು ಮಲಗಿಬಿಡುತ್ತೀರಿ.  ಸ್ವಲ್ಪ ಸಮಯದ ನಂತರ ಏಳುತ್ತೀರಿ. ಈ ಸ್ಥಿತಿಗೆ ನಿಮ್ಮ ದಿನಚರಿಯೂ ಕಾರಣವಾಗಿರಬಹುದು. ನೀವು ದಿನವೂ ಒಂದೇ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ನಿತ್ಯವೂ ಸಮಯ ಬದಲಾಗುತ್ತಿದ್ದರೆ ಬೆಳಗ್ಗೆ ನೀವಂದುಕೊಂಡಾಗ ಏಳಲು ಸಾಧ್ಯವಾಗುವುದಿಲ್ಲ. ನಿಮಗೆ ಒಂದೊಮ್ಮೆ ಅಲಾರಂ ಆದ ತಕ್ಷಣ ಏಳಲು ಮನಸಾಗದಿದ್ದರೆ ಮತ್ತೆ ಮಲಗಿ ಸ್ವಲ್ಪ ಸಮಯದ ಬಳಿಕ ಎದ್ದಾಗ ದೇಹದಲ್ಲಿ ಚೈತನ್ಯ ಉತ್ತಮವಾಗಿರುತ್ತದೆ.

ಗ್ಯಾಜೆಟ್‌ಗಳನ್ನು ದೂರವಿಡಿ ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲ್ಲಾ ರೀತಿಯ ಗ್ಯಾಜೆಟ್‌ಗಳನ್ನು ಬಳಸುವುದನ್ನು ನಿಲ್ಲಿಸಿ. ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್ ನೋಡುತ್ತಾ ಮಲಗುವುದರಿಂದ ಮನಸ್ಸಿಗೆ ಸಂಪೂರ್ಣ ಸಮಾಧಾನವಾಗುವುದಿಲ್ಲ ಮತ್ತು ದೇಹವು ದಣಿದಿರುತ್ತದೆ.

ನೀವು ಇಷ್ಟಪಡುವುದನ್ನು ಮಾಡಿ ಮಲಗುವ ಮೊದಲು, ಒಳ್ಳೆಯ ಪುಸ್ತಕವನ್ನು ಆರಿಸಿ, ಓದಿ ಬಳಿಕ ನಿದ್ದೆ ಮಾಡಿ. ಸಂಗೀತದ ಬಗ್ಗೆ ಒಲವಿದ್ದರೆ ಹಿತವಾದ ಸಂಗೀತವನ್ನು ಕೇಳುತ್ತಾ ಮಲಗಬಹುದು.

ಕೈಕಾಲುಗಳನ್ನು ತೊಳೆಯಿರಿ ರಾತ್ರಿ ಮಲಗುವಾಗ ನಮ್ಮ ದೇಹದ ಜೀವಕೋಶಗಳು ಪುನಶ್ಚೇತನಗೊಳ್ಳುತ್ತವೆ. ದೇಹವು ಸ್ವತಃ ರಿಪೇರಿ ಮಾಡುತ್ತದೆ. ಅದಕ್ಕಾಗಿಯೇ ರಾತ್ರಿ ಮಲಗುವಾಗ ಮುಖ, ಕೈ ಕಾಲುಗಳನ್ನು ಸ್ವಚ್ಛಗೊಳಿಸಿ ಮಲಗಿ. ಇದರಿಂದ ನಿಮ್ಮ ತ್ವಚೆ ಕೂಡ ರಿಲ್ಯಾಕ್ಸ್ ಆಗಬಹುದು ಮತ್ತು ಬೆಳಗ್ಗೆ ತಾಜಾತನವನ್ನು ಅನುಭವಿಸಬಹುದು.

ಕೋಣೆಯ ತಾಪಮಾನ ಹಿತಕರವಾಗಿರಲಿ ಮಲಗುವ ಸಮಯದಲ್ಲಿ, ನಿಮ್ಮ ಕೋಣೆಯ ಉಷ್ಣತೆಯು ತುಂಬಾ ತಂಪಾಗಿರಬಾರದು ಅಥವಾ ತುಂಬಾ ಬಿಸಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ಎಸಿ ಅಥವಾ ಹೀಟರ್ ನೀವು ಬಳಸುತ್ತಿದ್ದರೆ ತಾಪಮಾನ ಹಿತಕರವಾಗಿರುವಂತೆ ನೋಡಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ