ತೆಂಗಿನ ಚಿಪ್ಪಿನಲ್ಲಿ ಸಬ್ಬಸಿಗೆ ಇಡ್ಲಿ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ

ನೀವು ಇಡ್ಲಿ ಪ್ರೀಯರಾಗಿದ್ದರೆ ಅಥವಾ ನಿಮಗೆ ಒಂದೇ ತರನಾದ ತಿಂಡಿ ತಿಂದು ಬೇಸರವಾಗಿದ್ದರೆ, ಸಬ್ಬಸಿಗೆ ಸೊಪ್ಪನ್ನು ಬಳಸುವ ಮೂಲಕ ಇಡ್ಲಿ ತಯಾರಿಸಿಕೊಳ್ಳಬಹುದು. ಜೊತೆಗೆ ಈ ಇಡ್ಲಿಯನ್ನು ಬಡಿಸಲು ತೆಂಗಿನ ಚಿಪ್ಪನ್ನು ಸಹ ನೀವು ಬಳಸಿಕೊಳ್ಳಬಹುದು. ಸಬ್ಬಸಿಗೆ ಎಲೆಗಳ ಜೊತೆ ತೆಂಗಿನ ಚಿಪ್ಪನ್ನು ಬಳಸುವುದರಿಂದ ಇಡ್ಲಿಗಳನ್ನು ಹೆಚ್ಚು ಪೌಷ್ಟಿಕವಾಗಿಸಬಹುದು. ಅದರ ಮೇಲೆ ಸ್ವಲ್ಪ ಕರಗಿಸಿದ ತುಪ್ಪ, ಚಟ್ನಿ ಪುಡಿ ಹಾಕಿ ಆನಂದಿಸಿದರೆ ಮತ್ತೂ ಸ್ವಾದಿಷ್ಟವಾಗಿರುತ್ತದೆ.

ತೆಂಗಿನ ಚಿಪ್ಪಿನಲ್ಲಿ ಸಬ್ಬಸಿಗೆ ಇಡ್ಲಿ ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 14, 2023 | 6:27 PM

ಈ ವಾರಾಂತ್ಯಕ್ಕೆ ಯಾವ ತಿಂಡಿ ಮಾಡಬೇಕು ಎಂದು ಯೋಚಿಸುತ್ತಿರುವವರಿಗೆ ಅಥವಾ ಭಾನುವಾರ ಮನೆಯಲ್ಲಿ ಏನಾದರೂ ವಿನೂತನ ಶೈಲಿ, ಜೊತೆಗೆ ಬಾಯಿಗೂ ರುಚಿ ನೀಡುವಂತಹ ಹಾಗೂ ಆರೋಗ್ಯಕರ ರೆಸಿಪಿ ಬಯಸುತ್ತಿರುವವರಿಗೆ ಈ ಪಾಕವಿಧಾನ ಹೇಳಿ ಮಾಡಿಸಿದಂತಿದೆ. ಹಾಗಾದರೆ ಏನಿದು? ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ನೀವು ಇಡ್ಲಿ ಪ್ರೀಯರಾಗಿದ್ದರೆ ಅಥವಾ ನಿಮಗೆ ಒಂದೇ ತರನಾದ ತಿಂಡಿ ತಿಂದು ಬೇಸರವಾಗಿದ್ದರೆ, ಸಬ್ಬಸಿಗೆ ಸೊಪ್ಪನ್ನು ಬಳಸುವ ಮೂಲಕ ಇಡ್ಲಿ ತಯಾರಿಸಿಕೊಳ್ಳಬಹುದು. ಜೊತೆಗೆ ಈ ಇಡ್ಲಿಯನ್ನು ಬಡಿಸಲು ತೆಂಗಿನ ಚಿಪ್ಪನ್ನು ಸಹ ನೀವು ಬಳಸಿಕೊಳ್ಳಬಹುದು. ಸಬ್ಬಸಿಗೆ ಎಲೆಗಳ ಜೊತೆ ತೆಂಗಿನ ಚಿಪ್ಪನ್ನು ಬಳಸುವುದರಿಂದ ಇಡ್ಲಿಗಳನ್ನು ಹೆಚ್ಚು ಪೌಷ್ಟಿಕವಾಗಿಸಬಹುದು. ಅದರ ಮೇಲೆ ಸ್ವಲ್ಪ ಕರಗಿಸಿದ ತುಪ್ಪ, ಚಟ್ನಿ ಪುಡಿ ಹಾಕಿ ಆನಂದಿಸಿದರೆ ಮತ್ತೂ ಸ್ವಾದಿಷ್ಟವಾಗಿರುತ್ತದೆ.

ಸಬ್ಬಸಿಗೆ ಎಲೆಗಳನ್ನು ಭಾರತದಲ್ಲಿ ‘ಸೋಯಾ’, ‘ಸೋವಾ’ ಅಥವಾ ‘ಸಾವಾ’ ಎಂದು ಕರೆಯಲಾಗುತ್ತದೆ. ಈ ಸೊಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿದ್ದು ಇದರಲ್ಲಿರುವ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಬ್ಬಸಿಗೆ ಸೊಪ್ಪಿನಲ್ಲಿರುವ ವಿಟಮಿನ್ ಎ ನಿಮ್ಮ ದೃಷ್ಟಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸಬ್ಬಸಿಗೆ ಸೊಪ್ಪಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹಾಗಾದರೆ ಇದರಿಂದ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಸಬ್ಬಸಿಗೆ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು:

3 ಕಪ್ ಇಡ್ಲಿ ರೈಸ್

1/2 ಕಪ್ ಪೋಹಾ (ಅವಲಕ್ಕಿ)

1 ಕಪ್ ಉದ್ದಿನ ಬೇಳೆ

1 ಟೀ ಸ್ಪೂನ್ ಮೆಂತ್ಯ ಬೀಜಗಳು

1/4 ಕಪ್ ಸಬ್ಬಸಿಗೆ ಎಲೆಗಳು (ತೊಳೆದು ಕತ್ತರಿಸಿದ)

ಉಪ್ಪು, ರುಚಿಗೆ ತಕ್ಕಷ್ಟು

ರೆಸಿಪಿ ವಿಡಿಯೋ ಇಲ್ಲಿದೆ:

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ ಇಡ್ಲಿ ರೈಸ್, ಪೋಹಾ (ಅವಲಕ್ಕಿ), ಚೆನ್ನಾಗಿ ತೊಳೆಯಿರಿ. ಬಳಿಕ ಇದನ್ನು 4- 5 ಗಂಟೆಗಳ ಕಾಲ ಹಾಗೆ ಬಿಡಿ. ಇನ್ನು ಒಂದು ಬಟ್ಟಲಿನಲ್ಲಿ ಉದ್ದಿನ ಬೇಳೆಯನ್ನು ಹಾಕಿ, ಅದನ್ನು ಚೆನ್ನಾಗಿ ತೊಳೆದು 6- 7 ಗಂಟೆಗಳ ಕಾಲ ಬಿಡಿ. ಇವೆಲ್ಲಾ ಚೆನ್ನಾಗಿ ನೆನೆದ ಬಳಿಕ ಪ್ರತ್ಯೇಕವಾಗಿ ರುಬ್ಬಿ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿಯಿಡಿ 6- 7 ಗಂಟೆಗಳ ಕಾಲ ಹುದುಗಲು ಬಿಡಿ. ಬಳಿಕ ಹಿಟ್ಟನ್ನು ಸರಿಯಾಗಿ ಕಲಸಿ, ಈ ಮಿಶ್ರಣಕ್ಕೆ ಉಪ್ಪು, ಸಬ್ಬಸಿಗೆ ಎಲೆಗಳನ್ನು ಸೇರಿಸಿ ಹಿಟ್ಟನ್ನು ಸರಿಯಾದ ಮಿಶ್ರಣಕ್ಕೆ ತನ್ನಿ. ಇನ್ನು ಗರಟೆ ಅಥವಾ ತೆಂಗಿನ ಚಿಪ್ಪಿಗೆ ಚೆನ್ನಾಗಿ ತುಪ್ಪ ಸವರಿ ಬಳಿಕ ಅದಕ್ಕೆ ಇಡ್ಲಿ ಹಿಟ್ಟನ್ನು ಸುರಿಯಿರಿ ಬಳಿಕ ಸುಮಾರು 15- 20 ನಿಮಿಷಗಳ ಕಾಲ ಅಥವಾ ಇಡ್ಲಿಗಳು ಚೆನ್ನಾಗಿ ಬೇಯುವವರೆಗೆ ಹಬೆಯಲ್ಲಿ ಬೇಯಿಸಿಕೊಳ್ಳಿ. ಬಳಿಕ ಬಿಸಿ ಬಿಸಿ ಇಡ್ಲಿ ಮೇಲೆ ಸ್ವಲ್ಪ ತುಪ್ಪ, ತೆಂಗಿನಕಾಯಿ ಚಟ್ನಿ ಪುಡಿ ಹಾಕಿ ಆನಂದಿಸಿ.

ಇದನ್ನೂ ಓದಿ: ಬಾಳೆ ಎಲೆ ಕಪ್​​ನಲ್ಲಿ ಇಡ್ಲಿ- ಸಾಂಬಾರ್ ತಿಂದಿದ್ದೀರಾ? ಈ ಕಪ್ ತಯಾರಿಸುವುದು ಹೇಗೆ?

ಈ ವಿಡಿಯೋವನ್ನು thespicystory ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಅನೇಕರು ಈ ಆರೋಗ್ಯಕರ ರೆಸಿಪಿಯನ್ನು ಇಷ್ಟ ಪಟ್ಟಿದ್ದು, ಮಕ್ಕಳ ಊಟ ಮತ್ತು ತಿಂಡಿ ಡಬ್ಬಿಗೆ ಹಾಕಲು ತುಂಬಾ ಉಪಯುಕ್ತ ರೆಸಿಪಿ ಎಂದಿದ್ದಾರೆ. ಇನ್ನು ಹಲವರು ಈ ಸರಳ ಪಾಕವಿಧಾನವನ್ನು ನಾವು ಕೂಡ ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ