ತುಳಸಿ
Image Credit source: Google
ತುಳಸಿ (basil) ಧಾರ್ಮಿಕ ಮತ್ತು ಜೌಷಧೀಯ ಮಹತ್ವವನ್ನು ಹೊಂದಿರುವಂತಹ ಪವಿತ್ರವಾದ ಗಿಡವಾಗಿದೆ. ವಿಷ್ಣುವಿಗೆ ಪ್ರಿಯವಾದ ಈ ಪವಿತ್ರ ಸಸ್ಯದಲ್ಲಿ ಲಕ್ಷ್ಮೀದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯಿಂದ ಇದಕ್ಕೆ ಪೂಜೆಯನ್ನು ಕೂಡ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ತುಳಸಿಯನ್ನು ಶತಮಾನಗಳಿಂದದಲೂ ಆಯುರ್ವೇದ ಪದ್ಧತಿ ಮತ್ತು ಮನೆಮದ್ದುಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿರುವ ತುಳಸಿಯನ್ನು ಶೀತ, ಗಂಟಲು ನೋವು, ಉಸಿರಾಟದ ಸಮಸ್ಯೆಗಳಂತಹ ಹಲವು ಆರೋಗ್ಯ ಸಮಸ್ಯೆಗಳನ್ನು ಶಮನಗೊಳಿಸಲು ಬಳಸಲಾಗುತ್ತದೆ. ಹೀಗೆ ತುಳಸಿ ಧಾರ್ಮಿಕ ಮತ್ತು ಔಷಧೀಯ ಪ್ರಾಮುಖ್ಯತೆಯನ್ನು ಹೊಂದಿದೆ. ಗಿಡ ಮೂಲಿಕೆಗಳ ರಾಣಿ ಅಂತಾನೆ ಕರೆಯಲ್ಪಡುವ ಪವಿತ್ರ ಸಸ್ಯದ ವೈಜ್ಞಾನಿಕ ಹೆಸರು ಏನೆಂಬುದು ನಿಮ್ಗೆ ಗೊತ್ತಾ? ಇಂಗ್ಲಿಷ್‌ನಲ್ಲಿ ತುಳಸಿಯನ್ನು ಬೇಸಲ್ ಅಂತ ಕರಿತಾರೆ, ಆದ್ರೆ ಇದ್ರ ವೈಜ್ಞಾನಿಕ ಹೆಸರೇನು ಎಂಬುದು 95% ಜನರಿಗೆ ಗೊತ್ತೇ ಇಲ್ಲ.
ತುಳಸಿಯ ವೈಜ್ಞಾನಿಗೆ ಹೆಸರೇನು?
ತುಳಸಿ ಗಿಡವು ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನಮಾನವನ್ನು ಪಡೆದ ಸಸ್ಯ ಮಾತ್ರವಲ್ಲದೆ, ಈ ಸಸ್ಯವನ್ನು ಶತಮಾನಗಳಿಂದ ಮನೆಮದ್ದುಗಳಲ್ಲೂ ಬಳಸಲಾಗುತ್ತಿದೆ. ಹೀಗೆ ವ್ಯಾಪಕ ಹೆಸರು ಪಡೆದಿರುವ ಈ ತುಳಸಿ ಗಿಡದ ವೈಜ್ಞಾನಿಕ ಹೆಸರೇನು ಎಂಬುದು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿಯಿರಿ,
ಗಿಡಮೂಲಿಕೆಗಳ ರಾಣಿ ಎಂದು ಕರೆಯಲ್ಪಡುವ ಪವಿತ್ರ ತುಳಸಿಯ ವೈಜ್ಞಾನಿಕ ಹೆಸರು “ಒಸಿಮಮ್ ಟೆನುಯಿಫ್ಲೋರಮ್”. ಇದನ್ನು ಒಸಿಮಮ್ ಸ್ಯಾಂಕ್ಟಮ್ ಎಂದೂ ಕರೆಯುತ್ತಾರೆ. ಇದು ಲಾಮಿಯಾಸಿ (ಪುದೀನ) ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ.
ತುಳಸಿಯಲ್ಲಿ ಸಾಮಾನ್ಯವಾಗಿ ಮೂರು ವಿಧಗಳಿವೆ:
- ರಾಮ ತುಳಸಿ (ಒಸಿಮಮ್ ಸಾನ್ಕ್ಟಮ್) – ಹಸಿರು ಎಲೆಗಳು, ಸ್ವಲ್ಪ ಸಿಹಿ ರುಚಿ.
- ಕೃಷ್ಣ ತುಳಸಿ (ಒಸಿಮಮ್ ಟೆನುಯಿಫ್ಲೋರಮ್) – ಗಾಢ ನೇರಳೆ ಎಲೆಗಳು, ಗಾಢವಾದ ಪರಿಮಳ ಮತ್ತು ಸುವಾಸನೆ.
- ವನ ತುಳಸಿ (ಒಸಿಮಮ್ ಗ್ರಾಟಿಸ್ಸಿಮಮ್) – ಹಿಮಾಲಯದಲ್ಲಿ ಬೆಳೆಯುತ್ತದೆ, ಹೆಚ್ಚು ಕಹಿ ರುಚಿಯನ್ನು ಹೊಂದಿರುತ್ತದೆ.
ಇದನ್ನೂ ಓದಿ: ಆನ್‌ಲೈನ್ ಶಾಪಿಂಗ್‌ಗಿಂತ ಆಫ್‌ಲೈನ್ ಶಾಪಿಂಗ್ ಬೆಸ್ಟ್ ಅಂತೆ; ಯಾಕೆ ಗೊತ್ತಾ?
ತುಳಸಿಯ ಆರೋಗ್ಯ ಪ್ರಯೋಜನಗಳೇನು?
- ತುಳಸಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ತುಳಸಿಯು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸಮತೋಲನವನ್ನು ಉತ್ತೇಜಿಸುತ್ತದೆ.
- ಕೆಮ್ಮು, ಶೀತ ಅಥವಾ ಆಸ್ತಮಾದದಂತಹ ಸಮಸ್ಯೆಗಳಿಂದ ತುಳಸಿಯಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕಫ ನಿವಾರಕ ಗುಣಗಳು ಪರಿಹಾರವನ್ನು ನೀಡುತ್ತವೆ.
- ತುಳಸಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಟೈಪ್ 2 ಮಧುಮೇಹ ಇರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.
- ತುಳಸಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ತುಳಸಿಯಲ್ಲಿರುವ ಯುಜೆನಾಲ್, ರೋಸ್ಮರಿನಿಕ್ ಆಮ್ಲ ಮತ್ತು ಎಪಿಜೆನಿನ್‌ನಂತಹ ಕೆಲವು ಸಂಯುಕ್ತಗಳು ಕ್ಯಾನ್ಸರ್ ವಿರೋಧಿ ಪರಿಣಾಮಗಳನ್ನು ಹೊಂದಿವೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.
- ತುಳಸಿ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ, ಉತ್ತಮ ಪೋಷಕಾಂಶ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಮತ್ತು ಉಬ್ಬುವುದು, ಅಜೀರ್ಣ ಮತ್ತು ಗ್ಯಾಸ್ ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
- ತುಳಸಿಯಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಮೊಡವೆ, ಎಸ್ಜಿಮಾ ಮತ್ತು ತಲೆಹೊಟ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ