ಬಾವಿಗಳನ್ನು ದುಂಡಗಿನ ಆಕಾರದಲ್ಲಿಯೇ ನಿರ್ಮಿಸೋದೇಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಸಿಟಿಗಳಿಗಿಂತ ಹಳ್ಳಿಗಳ ಕಡೆ ಹೆಚ್ಚು ಬಾವಿಗಳಿರುತ್ತವೆ. ಕೆಲವೊಂದು ಪ್ರತಿ ಮನೆಯಲ್ಲೂ ಸಹ ಬಾವಿಗಳಿವೆ. ಈ ಎಲ್ಲಾ ಬಾವಿಗಳು ವೃತ್ತಾಕಾರದಲ್ಲಿಯೇ ಇರುತ್ತವೆ. ಅಷ್ಟಕ್ಕೂ ಈ ಬಾವಿಗಳನ್ನು ವೃತ್ತಾಕಾರದಲ್ಲಿಯೇ ಏಕೆ ನಿರ್ಮಾಣ ಮಾಡಲಾಗುತ್ತದೆ? ತ್ರಿಕೋನ ಅಥವಾ ಚೌಕಾಕಾರದಲ್ಲಿ ಏಕೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿದ್ಯಾ? ಹಾಗಿದ್ರೆ ಬಾವಿಗಳನ್ನು ವೃತ್ತಾಕಾರದಲ್ಲಿಯೇ ನಿರ್ಮಿಸುವುದರ ಹಿಂದಿನ ವೈಜ್ಞಾನಿಕ ಕಾರಣವನ್ನು ನೀವು ತಿಳಿದುಕೊಳ್ಳಲೇಬೇಕು.

ಈ ಜಗತ್ತಿನಲ್ಲಿರುವ ಕೆಲವೊಂದು ಸಂಗತಿಗಳನ್ನು ನೋಡಿದಾಗ ಕುತೂಲಹ ಮೂಡುತ್ತವೆ, ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ನಾವು ನಡೆದುಕೊಂಡು ಹೋಗುವಾಗ ಚಂದ್ರ ಯಾಕೆ ನಮ್ಮನ್ನೇ ಹಿಂಬಾಲಿಸಿದಂತೆ ಭಾಸವಾಗುತ್ತದೆ, ಸ್ವರ್ಗ-ನರಕ ಎನ್ನೋ ಪರಿಕಲ್ಪನೆ ಇದ್ಯಾ? ಹೀಗೆ ಒಂದಷ್ಟು ಪ್ರಶ್ನೆಗಳು ಮೂಡುತ್ತವೆ. ಇದೇ ರೀತಿ ಅನೇಕರಿಗೆ ಬಾವಿಗಳನ್ನು ನೋಡಿ, ಈ ಬಾವಿಗಳು ಏಕೆ ಬರೀ ರೌಂಡ್ ಶೇಪ್‌ನಲ್ಲಿ (Why are wells always round in shape) ಮಾತ್ರ ಇರುತ್ತವೆ? ಚೌಕಾಕಾರ ಅಥವಾ ಬೇರೆ ಶೇಪ್‌ನಲ್ಲಿ ಏಕೆ ಬಾವಿಗಳನ್ನು ನಿರ್ಮಿಸುವುದಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸಿರುತ್ತವೆ. ಹೀಗೆ ನಿಮ್ಮ ಮನಸ್ಸಲ್ಲೂ ಬಾವಿಗಳನ್ನು ವೃತ್ತಾಕಾರದಲ್ಲಿ ಮಾತ್ರವೇ ಏಕೆ ನಿರ್ಮಾಣ ಮಾಡಲಾಗುತ್ತದೆ ಎಂಬ ಪ್ರಶ್ನೆ ಮೂಡಿದ್ಯಾ? ಹಾಗಿದ್ರೆ ಬಾವಿಗಳನ್ನು ವೃತ್ತಾಕಾರದಲ್ಲಿಯೇ ನಿರ್ಮಿಸುವುದರ ಹಿಂದಿನ ವೈಜ್ಞಾನಿಕ ಕಾರಣವನ್ನು ನೀವು ತಿಳಿದುಕೊಳ್ಳಲೇಬೇಕು.
ಬಾವಿಗಳನ್ನು ದಂಡಾಕಾರದಲ್ಲಿಯೇ ಏಕೆ ನಿರ್ಮಿಸಲಾಗುತ್ತದೆ?
ಪ್ರಾಚೀನ ಕಾಲದಿಂದಲೂ ಬಾವಿಗಳನ್ನು ದುಂಡಾಕಾರದಲ್ಲಿಯೇ ನಿರ್ಮಾಣ ಮಾಡಲಾಗುತ್ತದೆ. ಇದರ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆಯಂತೆ,ಮೊದಲನೆಯದಾಗಿ ನೋಡುವುದಾದರೆ, ಬಾವಿಯ ದುಂಡಗಿನ ಆಕಾರದಿಂದಾಗಿ, ನೀರಿನ ಒತ್ತಡವು ಎಲ್ಲಾ ಕಡೆಗಳಲ್ಲಿಯೂ ಸಮಾನವಾಗಿ ಹಂಚಿಕೆಯಾಗುತ್ತವೆ. ಅದೇ ಬಾವಿಯನ್ನು ಚೌಕ ಅಥವಾ ತ್ರಿಕೋನಾಕಾರದಲ್ಲಿ ನಿರ್ಮಿಸಿದರೆ ಎಲ್ಲಾ ನೀರಿನ ಒತ್ತಡವು ಮೂಲೆಗಳ ಮೇಲೆ ಬೀಳುತ್ತದೆ, ಅದು ದುರ್ಬಲಗೊಳ್ಳುತ್ತದೆ ಮತ್ತು ಒಡೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಮತ್ತು ಅದರ ಜೀವಿತಾವಧಿಯೂ ಕಡಿಮೆಯಾಗುತ್ತದೆ. ಆದರೆ ದುಂಡಗಿನ ಆಕಾರದ ಬಾವಿಯಲ್ಲಿ, ಪ್ರತಿಯೊಂದು ಬದಿಯಲ್ಲಿಯೂ ಸಮಾನ ಒತ್ತಡವಿರುತ್ತದೆ, ಇದರಿಂದಾಗಿ ಬಾವಿ ಹೆಚ್ಚಿನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಮತ್ತು ಬಾವಿ ಕುಸಿಯುವ ಸಾಧ್ಯತೆಯೂ ಕಡಿಮೆ.
ಇನ್ನೊಂದು ಕಾರಣವೇನೆಂದರೆ, ಬಾವಿಯನ್ನು ನಿರ್ಮಾಣ ಮಾಡುವಾಗ ಗುಂಡಿ ಅಗೆಯಲಾಗುತ್ತದೆ. ಹೀಗೆ ಗುಂಡಿಯನ್ನು ವೃತ್ತಾಕಾರದಲ್ಲಿ ಅಗೆಯುವುದು ಸುಲಭ. ಅದೇ ಚೌಕಾಕಾರ ಅಥವಾ ತ್ರಿಕೋನಾಕಾರದಲ್ಲಿ ಗುಂಡಿ ಅಗೆಯುವುದು ತುಂಬಾನೇ ಕಷ್ಟಕರವಾಗಿರುತ್ತವೆ. ಜೊತೆಗೆ ವೃತ್ತಾಕಾರದ ಬಾವಿಯನ್ನು ಕೊರೆಯಲು ಹೆಚ್ಚು ಶ್ರಮ ಕೂಡ ಬೇಕಾಗಿಲ್ಲ. ಹಾಗಾಗಿ ಈ ಕಾರಣದಿಂದಲೂ ಬಾವಿಗಳನ್ನು ದುಂಡಾಕಾರದಲ್ಲಿ ಅಗೆಯಲಾಗುತ್ತದೆ.
ಇದನ್ನೂ ಓದಿ: ವಾಶ್ ಬೇಸಿನ್‌ನಲ್ಲಿ ಸಣ್ಣ ರಂಧ್ರ ಏಕಿರುತ್ತವೆ, ಇದರ ಕಾರ್ಯವಾದರೂ ಏನು?
ಬಹು ಮುಖ್ಯವಾಗಿ, ಇತರ ರೀತಿಯ ಬಾವಿಗಳಿಗೆ ಹೋಲಿಸಿದರೆ, ದುಂಡಗಿನ ಬಾವಿಗಳು ಹೆಚ್ಚು ನೀರನ್ನು ಉತ್ಪಾದಿಸುತ್ತವೆ. ಈ ಕಾರಣದಿಂದಾಗಿ ಬಾವಿಗಳನ್ನು ಹೆಚ್ಚು ದುಂಡಾಕಾರದಲ್ಲಿಯೇ ಕೊರೆಯಲಾಗುತ್ತದೆ. ಇದಲ್ಲದೆ ವೃತ್ತಾಕಾರದ ಬಾವಿಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಬಾವಿ ತ್ರಿಕೋನ ಅಥವಾ ಚೌಕಾಕಾರವಾಗಿದ್ದರೆ, ಅದರಲ್ಲಿ ಕೊಳಕು ಸಂಗ್ರಹವಾಗಬಹುದು. ಇದರಿಂದಾಗಿ ನೀರು ಕಲುಷಿತವಾಗಬಹುದು. ಇನ್ನೊಂದೇನೆಂದರೆ ಬಾವಿ ವೃತ್ತಾಕಾರವಾಗಿದ್ದಾಗ, ನೀರಿನ ಹರಿವು ಯಾವುದೇ ಅಡೆತಡೆಯಿಲ್ಲದೆ ಉಳಿಯುತ್ತದೆ. ಈ ಎಲ್ಲಾ ವೈಜ್ಞಾನಿಕ ಮತ್ತು ಪ್ರಾಯೋಗಿಕ ಕಾರಣಗಳಿಂದಾಗಿ ಬಾವಿಯನ್ನು ದುಂಡಾಕಾರದಲ್ಲಿ ನಿರ್ಮಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








