ಸೆಲರಿ ಜ್ಯೂಸ್ ಆರೋಗ್ಯಕ್ಕೆ ಏಕೆ ಒಳ್ಳೆಯದು ಗೊತ್ತಾ? ಇಲ್ಲಿದೆ 6 ಕಾರಣಗಳು

| Updated By: ಅಕ್ಷತಾ ವರ್ಕಾಡಿ

Updated on: Jan 11, 2024 | 6:51 PM

ಸೆಲರಿಯನ್ನು ಹೆಚ್ಚಾಗಿ ಸಲಾಡ್ಗಳು, ಸೂಪ್ಗಳು ಮತ್ತು ತಿಂಡಿಗಳಲ್ಲಿ ಬಳಸಲಾಗುತ್ತದೆ. ಇದು ಕಡಿಮೆ ಕ್ಯಾಲೊರಿ ಆಹಾರವಾಗಿದ್ದು, ವಿಟಮಿನ್ ಕೆ ಮತ್ತು ಸಿ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸೆಲರಿಯನ್ನು ನಮ್ಮ ದೈನಂದಿನ ಆಹಾರದ ಒಂದು ಭಾಗವನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಸೆಲರಿ ರಸವನ್ನು ಕುಡಿಯುವುದು. ಈ ಜ್ಯೂಸ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಸೆಲರಿ ಜ್ಯೂಸ್ ಆರೋಗ್ಯಕ್ಕೆ ಏಕೆ ಒಳ್ಳೆಯದು ಗೊತ್ತಾ? ಇಲ್ಲಿದೆ 6 ಕಾರಣಗಳು
Celery juice
Follow us on

ತರಕಾರಿಗಳ ಸೇವನೆಯಲ್ಲಿ ಕ್ಯಾರೆಟ್ ಅಥವಾ ಟೊಮೆಟೊಗಳನ್ನು ನಾವು ಹೆಚ್ಚಾಗಿ ಬಳಸುತ್ತೇವೆ. ಇನ್ನು ಹಸಿರು ಎಲೆಗಳಿರುವ ತರಕಾರಿಗಳನ್ನು ಸೇವನೆ ಮಾಡುವುದನ್ನು ತಪ್ಪಿಸುತ್ತೇವೆ. ಅವುಗಳಲ್ಲಿ ಸೆಲರಿ ಕೂಡ ಒಂದಾಗಿದೆ. ಇದು ಒಂದು ರೀತಿಯ ತರಕಾರಿಯಾಗಿದ್ದು, ಇತರ ತರಕಾರಿಗಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗಾಗಿ ಸೆಲರಿ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ.

ಸೆಲರಿ ಹಸಿರು, ಕುರುಕಲು ತರಕಾರಿಯಾಗಿದ್ದು, ಇದು ಅಪಿಯೇಸಿ ಕುಟುಂಬಕ್ಕೆ ಸೇರಿದೆ. ಇದು ಜವುಗು ಪ್ರದೇಶದ ಸಸ್ಯವಾಗಿದ್ದು, ವಿಶಿಷ್ಟ ಪರಿಮಳ ಮತ್ತು ಹೆಚ್ಚಿನ ನೀರಿನ ಅಂಶಕ್ಕೆ ಹೆಸರುವಾಸಿಯಾಗಿದೆ. ಇದನ್ನು ಹೆಚ್ಚಾಗಿ ಸಲಾಡ್ಗಳು, ಸೂಪ್ಗಳು ಮತ್ತು ತಿಂಡಿಗಳಲ್ಲಿ ಬಳಸಲಾಗುತ್ತದೆ. ಇದು ಕಡಿಮೆ ಕ್ಯಾಲೊರಿ ಆಹಾರವಾಗಿದ್ದು, ವಿಟಮಿನ್ ಕೆ ಮತ್ತು ಸಿ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸೆಲರಿಯನ್ನು ನಮ್ಮ ದೈನಂದಿನ ಆಹಾರದ ಒಂದು ಭಾಗವನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಸೆಲರಿ ರಸವನ್ನು ಕುಡಿಯುವುದು.

ಸೆಲರಿ ಜ್ಯೂಸ್ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?

ಪೌಷ್ಟಿಕ ತಜ್ಞೆ ಅವನಿ ಕೌಲ್ ಅವರ ಪ್ರಕಾರ, ಸೆಲರಿ ಜ್ಯೂಸ್ ಕುಡಿಯುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಅದಕ್ಕೆ ಕೆಲವು ಕಾರಣಗಳು ಇಲ್ಲಿವೆ.

1. ಸೆಲರಿಯು ಜಲಸಂಚಯನ ಮತ್ತು ಪೋಷಕಾಂಶಗಳನ್ನು ಹೆಚ್ಚಿಸುತ್ತದೆ:

“ಸೆಲರಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಜಲಸಂಚಯನದ ಉತ್ತಮ ಮೂಲವಾಗಿದೆ, ಇದು ದೇಹದಲ್ಲಿನ ದ್ರವಗಳನ್ನು ಮರುಪೂರಣ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಕೆ ಮತ್ತು ಸಿ ಮತ್ತು ವಿವಿಧ ಖನಿಜಗಳು ಸೇರಿದಂತೆ ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಸೆಲರಿ ರಸವು ಉತ್ತಮವಾದ ಪೌಷ್ಠಿಕಾಂಶದ ಸೇವನೆಗೆ ಕೊಡುಗೆ ನೀಡುತ್ತದೆ “ಎಂದು ಅವನಿ ಕೌಲ್ ಹೇಳುತ್ತಾರೆ.

ಇದನ್ನೂ ಓದಿ: ಹಸಿ ಪಾಲಕ್ ಏಕೆ ಸೇವಿಸಬಾರದು ಗೊತ್ತಾ? ಇಲ್ಲಿದೆ ಪೌಷ್ಟಿಕಾಂಶ ತಜ್ಞರ ಸಲಹೆ

2. ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ:

ಸೆಲರಿಯು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ:

ಸೆಲರಿಯಲ್ಲಿ ಕಂಡು ಬರುವ ಥಾಲೈಡ್ ಗಳಂತಹ ಸಂಯುಕ್ತಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಕಾರಣವಾಗಬಹುದು, ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸಬಹುದು. ಸೆಲರಿಯಲ್ಲಿರುವ ಫೈಬರ್ ಅಂಶವು ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

4. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:

ಸೆಲರಿ ರಸವು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ, ದೇಹದಲ್ಲಿನ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

5. ತೂಕ ನಿರ್ವಹಣೆ:

ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ನೀರಿನ ಅಂಶ ಇದರಲ್ಲಿರುವುದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿ ಕ್ಯಾಲೊರಿಗಳಿಲ್ಲದೆ ಪೋಷಕಾಂಶಗಳನ್ನು ಒದಗಿಸುತ್ತದೆ.

6. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ:

ಸೆಲರಿ ರಸದಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸುವ ಮೂಲಕ ಕಾಂತಿಯುತ ಮೈ ಬಣ್ಣವನ್ನು ಹೆಚ್ಚಿಸುತ್ತದೆ. ಆ ಮೂಲಕ ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ” ಎಂದು ಅವನಿ ಕೌಲ್ ಹೇಳುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ