ಹಸಿ ಪಾಲಕ್ ಏಕೆ ಸೇವಿಸಬಾರದು ಗೊತ್ತಾ? ಇಲ್ಲಿದೆ ಪೌಷ್ಟಿಕಾಂಶ ತಜ್ಞರ ಸಲಹೆ

ಪಾಲಕ್​​ನ್ನು ಜ್ಯೂಸ್, ಸಲಾಡ್ ಮತ್ತು ಸ್ಮೂಥಿಗಳ ರೂಪದಲ್ಲಿ ಸೇವನೆ ಮಾಡುವುದನ್ನು ನೋಡಿದ್ದೇವೆ. ಜೊತೆಗೆ ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಇದು ಉತ್ತಮ ಮಾರ್ಗವೆಂದು ತೋರುತ್ತದೆ. ಆದರೆ ಪೌಷ್ಟಿಕಾಂಶ ತಜ್ಞರು ಪಾಲಕ್ ಸೊಪ್ಪನ್ನು ಕಚ್ಚಾ ರೂಪದಲ್ಲಿ ಅಂದರೆ ಹಸಿ ಪಾಲಕ್ ಸೇವನೆ ಮಾಡಬಾರದು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಹಸಿ ಪಾಲಕ್ ಏಕೆ ಸೇವಿಸಬಾರದು ಗೊತ್ತಾ? ಇಲ್ಲಿದೆ ಪೌಷ್ಟಿಕಾಂಶ ತಜ್ಞರ ಸಲಹೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2024 | 5:41 PM

ಪಾಲಕ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ನಾವು ಸೇವನೆ ಮಾಡುವ ಪ್ರದಾನ ಆಹಾರಗಳಲ್ಲಿ ಒಂದಾಗಿದೆ. ಅಗತ್ಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಪಾಲಕ್ ಸೊಪ್ಪು, ಹೃದಯದ ಆರೋಗ್ಯ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಅನೇಕರು ಪಾಲಕ್ ಅನ್ನು ಜ್ಯೂಸ್, ಸಲಾಡ್ ಮತ್ತು ಸ್ಮೂಥಿಗಳ ರೂಪದಲ್ಲಿ ಸೇವನೆ ಮಾಡುವುದನ್ನು ನೋಡಿದ್ದೇವೆ. ಜೊತೆಗೆ ಪಾಲಕ್ ಸೊಪ್ಪಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಇದು ಉತ್ತಮ ಮಾರ್ಗವೆಂದು ತೋರುತ್ತದೆ. ಆದರೆ ಪೌಷ್ಟಿಕಾಂಶ ತಜ್ಞರು ಪಾಲಕ್ ಸೊಪ್ಪನ್ನು ಕಚ್ಚಾ ರೂಪದಲ್ಲಿ ಅಂದರೆ ಹಸಿ ಪಾಲಕ್ ಸೇವನೆ ಮಾಡಬಾರದು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಪಾಲಕ್ ಸೊಪ್ಪನ್ನು ಹಸಿಯಾಗಿ ತಿನ್ನುವುದು ಸರಿಯೇ? ತಜ್ಞರು ಹೇಳುವುದೇನು?

ಪಾಲಕ್ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಹಸಿಯಾಗಿ ಸೇವನೆ ಮಾಡುವುದು ಸಂಭಾವ್ಯ ಅಪಾಯವನ್ನು ಸಹ ಹೊಂದಿದೆ. ಈ ವಿಷಯವಾಗಿ ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರ ಡಿಂಪಲ್ ಜಂಗ್ಡಾ ಹಸಿ ಪಾಲಕ್ ತಿನ್ನುವುದರಿಂದ ಉಂಟಾಗುವ ಅನೇಕ ಅನಾನುಕೂಲತೆಗಳ ಬಗ್ಗೆ ತಿಳಿಸಿದ್ದಾರೆ.

ಖ್ಯಾತ ಪೌಷ್ಟಿಕ ತಜ್ಞ ನಮಾಮಿ ಅಗರ್ವಾಲ್ ಅವರ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ ಹಸಿ ಪಾಲಕ್ ಸೇವಿಸುವ ಅಪಾಯಗಳನ್ನು ತಿಳಿಸಿದ್ದಾರೆ. ಪಾಲಕ್ ನಲ್ಲಿರುವ ಆಕ್ಸಾಲಿಕ್ ಆಮ್ಲವು ಖನಿಜ ಹೀರಿಕೊಳ್ಳುವಿಕೆಗೆ, ವಿಶೇಷವಾಗಿ ಕ್ಯಾಲ್ಸಿಯಂ ಮತ್ತು ಕಬ್ಬಿಣಕ್ಕೆ ಅಡ್ಡಿಪಡಿಸುತ್ತದೆ, ಇದು ಮೂತ್ರ ಪಿಂಡದಲ್ಲಿ ಕಲ್ಲು ಬೆಳೆಯಲು ಕಾರಣವಾಗುತ್ತದೆ ಎಂದು ಅವರು ಹೇಳುತ್ತಾರೆ.

ಹಸಿ ಪಾಲಕ್ ಸೇವನೆಯ ಸಂಭಾವ್ಯ ಅಪಾಯಗಳಾವವು?

ಹಸಿ ಪಾಲಕ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ “ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ, ಅತಿಸಾರ, ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು” ಎಂದು ಡಿಂಪಲ್ ಜಂಗ್ಡಾ ಎಚ್ಚರಿಸಿದ್ದಾರೆ. ಇದು ಸ್ತನದಲ್ಲಿಯೂ ಸಂಗ್ರಹವಾಗಬಹುದು ಮತ್ತು ಮಹಿಳೆಯರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಇದನ್ನೂ ಓದಿ: ಪಾಲಕ್‌ ಸೊಪ್ಪಿನಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಪಾಲಕ್ ತಿನ್ನಲು ಆರೋಗ್ಯಕರ ಮಾರ್ಗ ಯಾವುದು?

ಸಂಬಂಧಿತ ಅಪಾಯಗಳಿಲ್ಲದೆ ಪಾಲಕ್ ಅನ್ನು ಆನಂದಿಸಲು, ಅದನ್ನು ಕುದಿಸಲು ಶಿಫಾರಸು ಮಾಡಲಾಗಿದೆ. ಇದು ಅದರ ಪೌಷ್ಠಿಕಾಂಶದ ಮೌಲ್ಯವನ್ನು ಸಂರಕ್ಷಿಸುವುದಲ್ಲದೆ ಅದರ ಲಭ್ಯತೆಯನ್ನು ಹೆಚ್ಚಿಸುತ್ತದೆ. ಕಚ್ಚಾ ಪಾಲಕ್ಗೆ ಹೋಲಿಸಿದರೆ ಬೇಯಿಸಿದ ಪಾಲಕ್ ಕಬ್ಬಿಣದ ಅಂಶ, ಬೀಟಾ- ಕ್ಯಾರೋಟಿನ್, ಲ್ಯೂಟಿನ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ಹೇಳುತ್ತದೆ.

ನಮಾಮಿ ಅಗರ್ವಾಲ್ ಅವರ ಪ್ರಕಾರ, “ಪಾಲಕ್ ಅನ್ನು ಲಘುವಾಗಿ ಬೇಯಿಸುವುದು ಇದಕ್ಕೆಲ್ಲಾ ಪರಿಹಾರವಾಗಿದೆ, ಇದು ಆಕ್ಸಲೇಟ್ ಮಟ್ಟವನ್ನು 30% ರಿಂದ 87% ರಷ್ಟು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಅದನ್ನು ಅತಿಯಾಗಿ ಬೇಯಿಸಬೇಡಿ ಏಕೆಂದರೆ ಅದು ಅದರ ಪೌಷ್ಠಿಕಾಂಶದ ಅಂಶವನ್ನು ಕಳೆದುಕೊಳ್ಳುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ. ಹಾಗಾಗಿ ನೀವು ಸ್ಮೂಥಿಗಳು ಮತ್ತು ಜ್ಯೂಸ್ ಗಳ ಬದಲು, ಪಾಲಕ್ ಸೊಪ್ಪನ್ನು ಸೂಪ್, ಪಲ್ಯಗಳು ಅಥವಾ ಹುರಿದ ಸೈಡ್ ಡಿಶ್ ಗಳಲ್ಲಿ ಆನಂದಿಸಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ