ನನಗೆ ಇಂಥ ಸ್ಥಿತಿ ಎದುರಾದಾಗ ಸಚಿವ ಸ್ಥಾನ ಬಿಟ್ಟು ಪಕ್ಷದ ಅಧ್ಯಕ್ಷಗಿರಿ ಆಯ್ದುಕೊಂಡಿದ್ದೆ: ಜಿ ಪರಮೇಶ್ವರ್

ನನಗೆ ಇಂಥ ಸ್ಥಿತಿ ಎದುರಾದಾಗ ಸಚಿವ ಸ್ಥಾನ ಬಿಟ್ಟು ಪಕ್ಷದ ಅಧ್ಯಕ್ಷಗಿರಿ ಆಯ್ದುಕೊಂಡಿದ್ದೆ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 16, 2025 | 12:31 PM

ಪಕ್ಷದ ಹೈಕಮಾಂಡ್ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದೆ, ಇಲ್ಲ ಅಂತೇನಿಲ್ಲ, ದಲಿತ ನಾಯಕರು ಒಂದೆಡೆ ಸಭೆ ಸೇರಿ ಊಟ ಮಾಡುವಂಥ ಚಿಕ್ಕ ವಿಷಯ ಹೈಕಮಾಂಡ್ ಗೊತ್ತಾಗುವಾಗ ಇಂಥ ದೊಡ್ಡ ವಿಷಯ ಗೊತ್ತಾಗದಿರುತ್ತದೆಯೇ ಎಂದು ಪರಮೇಶ್ವರ್ ಕೇಳಿದರು. ತಾನು ಕರೆದಿದ್ದ ಸಭೆಯನ್ನು ಹೈಕಮಂಡ್ ರದ್ದು ಮಾಡಿದ ಬೇಸರ ಇನ್ನೂ ಅವರಲ್ಲಿರೋದು ಸ್ಪಷ್ಟ.

ಬೆಂಗಳೂರು: ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿದ್ದಾರೆ ಮತ್ತು ಕೆಪಿಸಿಸಿ ಅಧ್ಯಕ್ಷನ ಜವಾಬ್ದಾರಿಯೂ ಅವರ ಮೇಲಿದೆ, ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಕೊಡಿ ಅಂತ ಕೆಲ ಮಂತ್ರಿಗಳು ಮತ್ತು ಶಾಸಕರು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಕೇಳಿರಬಹುದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ತಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಇಂಥ ಪರಿಸ್ಥಿತಿ ಎದುರಾಗಿತ್ತು, ಆಗ ತಾನು ಸಚಿವ ಸ್ಥಾನ ತ್ಯಜಿಸಿ ಪಕ್ಷದ ಅಧ್ಯಕ್ಷಗಿರಿಯನ್ನು ಆಯ್ದುಕೊಂಡಿದ್ದೆ ಎಂದ ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ದಲಿತ ನಾಯಕರ ಸಭೆಯ ಬಗ್ಗೆ ವರಿಷ್ಠರ ಮುಂದೆ ಪರಮೇಶ್ವರ್ ಪ್ರಸ್ತಾವನೆ ಇಡಲಿದ್ದಾರೆ: ಸತೀಶ್ ಜಾರಕಿಹೊಳಿ