ಸ್ಯಾಮ್ ಕೊನ್ಸ್ಟಾಸ್ ಜತೆ ಫೋಟೋ ಕ್ಲಿಕ್ಕಿಸಲು ಹೋಗಿ, ಕಾರು ಅಪಘಾತ ಮಾಡಿಕೊಂಡ ಅಭಿಮಾನಿ
Sam Konstas: ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಆಸ್ಟ್ರೇಲಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಸ್ಯಾಮ್ ಆ ಬಳಿಕ ಜಸ್ಪ್ರೀತ್ ಬುಮ್ರಾ ವಿರುದ್ಧ ವಾಗ್ಯುದ್ಧಕ್ಕೆ ಇಳಿದಿದ್ದರು. ಈ ಎರಡು ಘಟನೆಯೊಂದಿಗೆ ಎಲ್ಲರ ಗಮನ ಸೆಳೆದ ಕೊನ್ಸ್ಟಾಸ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶೀಸಿ ಆಸ್ಟ್ರೇಲಿಯಾದ ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹೀಗೆ ಸಂಪಾದಿಸಿದ ಅಭಿಯಾನಿಯೊಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳಲು ದುಡುಕಿ ಕಾರನ್ನು ಅಪಘಾತ ಮಾಡಿಕೊಂಡಿದ್ದಾರೆ. ಸ್ಯಾಮ್ ಕೊನ್ಸ್ಟಾಸ್ ತಮ್ಮ ಬ್ಯಾಟಿಂಗ್ ಕಿಟ್ನೊಂದಿಗೆ ಸಾಗುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಕ್ಷಣವೇ ತಮ್ಮ ಕಾರನ್ನು ತಿರುಗಿಸಿದ್ದಾರೆ. ಅಲ್ಲದೆ ಪಕ್ಕದೇ ಪಾರ್ಕಿಂಗ್ ಮಾಡಿ ಫೋಟೋ ಕ್ಲಿಕ್ಕಿಸಲು ಓಡಿ ಹೋಗಿದ್ದಾರೆ.
ಆದರೆ ಹೀಗೆ ಕಾರಿಂದ ಇಳಿದು ಹೋಗುವ ಮುನ್ನ ಹ್ಯಾಂಡ್ ಬ್ರೇಕ್ ಹಾಕಲು ಮರೆತಿದ್ದ. ಅತ್ತ ಕೊನ್ಸ್ಟಾಸ್ ಕಡೆಗೆ ಓಡುತ್ತಿದ್ದಂತೆ ಇತ್ತ ಕಾರು ಮುಂದೆ ಸಾಗಿದೆ. ಅಲ್ಲದೆ ಅಲ್ಲೇ ನಿಲ್ಲಿಸಲಾಗಿದ್ದ ಮತ್ತೊಂದು ಕಾರಿಗೆ ಗುದ್ದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಘಟನೆಗೆ ನೆಟ್ಟಿಗರು ಕೊನ್ಸ್ಟಾಸ್ ಎಫೆಕ್ಟ್ ಎಂದು ಹೆಸರು ನೀಡಿದ್ದಾರೆ.
ಸ್ಯಾಮ್ ಕೊನ್ಸ್ಟಾಸ್ ಅಭಿಮಾನಿಯ ವಿಡಿಯೋ:
View this post on Instagram
ಅಬ್ಬರಿಸಿದ್ದ ಕೊನ್ಸ್ಟಾಸ್:
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಸ್ಯಾಮ್ ಕೊನ್ಸ್ಟಾಸ್ ಜಸ್ಪ್ರೀತ್ ಬುಮ್ರಾ ಓವರ್ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದಿದ್ದರು. ಅಲ್ಲದೆ ಚೊಚ್ಚಲ ಸರಣಿಯಲ್ಲಿ 1 ಅರ್ಧಶತಕದೊಂದಿಗೆ 113 ರನ್ ಬಾರಿಸಿ ಮಿಂಚಿದ್ದರು.
ಇದೀಗ 19 ವರ್ಷದ ಸ್ಯಾಮ್ ಕೊನ್ಸ್ಟಾಸ್ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಆಡುತ್ತಿದ್ದಾರೆ. ಸಿಡ್ನಿ ಥಂಡರ್ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಯುವ ದಾಂಡಿಗ ಎರಡು ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್
ಈ ಮೂಲಕ ಆಸ್ಟ್ರೇಲಿಯಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಸ್ಯಾಮ್ ಕೊನ್ಸ್ಟಾಸ್ ಯಶಸ್ವಿಯಾಗಿದ್ದು, ಇದೇ ಫಾರ್ಮ್ ಮುಂದುವರೆಸಿದರೆ ಮುಂಬರುವ ದಿನಗಳಲ್ಲಿ ಅವರು ಆಸ್ಟ್ರೇಲಿಯಾ ಟಿ20 ತಂಡದಲ್ಲೂ ಸ್ಥಾನ ಪಡೆಯುವುದರಲ್ಲಿ ಅನುಮಾನವೇ ಇಲ್ಲ.