ಟಾಯ್ಲೆಟ್​ನಲ್ಲಿ ತುಂಬ ಹೊತ್ತು ಕುಳಿತುಕೊಳ್ಳುತ್ತೀರಾ?

ಕಮೋಡ್​ ಮೇಲೆ ಅಥವಾ ಟಾಯ್ಲೆಟ್​ನಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಮತ್ತು ಮಲವಿಸರ್ಜನೆ ಮಾಡುವ ಸಮಯದಲ್ಲಿ ಅತಿಯಾಗಿ ಶಕ್ತಿ ಹಾಕಿ ಮಲವಿಸರ್ಜಿಸಲು ಪ್ರಯತ್ನಿಸುವುದರಿಂದ ರಕ್ತನಾಳಗಳಲ್ಲಿನ ಒತ್ತಡ ಹೆಚ್ಚುತ್ತದೆ. ಇದು ಮೂಲವ್ಯಾಧಿಗೆ ಕಾರಣವಾಗುತ್ತದೆ.

ಟಾಯ್ಲೆಟ್​ನಲ್ಲಿ ತುಂಬ ಹೊತ್ತು ಕುಳಿತುಕೊಳ್ಳುತ್ತೀರಾ?
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Jan 11, 2024 | 2:15 PM

ಪೈಲ್ಸ್​ ಅಥವಾ ಮೂಲವ್ಯಾಧಿ ಜಗತ್ತಿನ ಜನಸಂಖ್ಯೆಯ ಅಂದಾಜು ಶೇ. 4.4ರಷ್ಟು ಜನರು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಇದನ್ನು ಆರಂಭಿಕ ಹಂತದಲ್ಲೇ ಗುಣಪಡಿಸದಿದ್ದರೆ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಜಾನ್ಸ್ ಹಾಪ್ಕಿನ್ಸ್ ಮೆಡಿಸಿನ್ ಪ್ರಕಾರ, ಸುಮಾರು ಶೇ. 50ರಷ್ಟು ಜನರು ತಮ್ಮ 50ನೇ ವಯಸ್ಸಿನಲ್ಲಿ ಈ ಸಮಸ್ಯೆಯನ್ನು ಅನುಭವಿಸುತ್ತಾರೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಜೀರ್ಣಕಾರಿ ಸಮಸ್ಯೆಗಳು ಸೇರಿದಂತೆ ಹಲವಾರು ಅಂಶಗಳು ಪೈಲ್ಸ್​ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಜೊತೆಗೆ ಇನ್ನೂ ಅಚ್ಚರಿಯ ಸಂಗತಿಯೆಂದರೆ, ಟಾಯ್ಲೆಟ್​ನಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ಕೂಡ ಪೈಲ್ಸ್​ ಹೆಚ್ಚಾಗುವ ಸಾಧ್ಯತೆಯಿದೆ.

ಟಾಯ್ಲೆಟ್​ ಕಮೋಡ್​ ಮೇಲೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ನಿಮ್ಮ ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಗುರುಗ್ರಾಮದ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಉದ್ಧವೇಶ್ ಪೈಠಂಕರ್ ಎಚ್ಚರಿಕೆ ನೀಡಿದ್ದಾರೆ. ಟಾಯ್ಲೆಟ್ ಸೀಟ್ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದರಿಂದ ಗುದ ಕಾಲುವೆಯಲ್ಲಿ ಮತ್ತು ಸುತ್ತಲಿನ ರಕ್ತನಾಳಗಳು ಊದಿಕೊಳ್ಳುತ್ತದೆ. ಇದರಿಂದ ಮೂಲವ್ಯಾಧಿ ಸಂಭವಿಸುತ್ತದೆ.

ಇದನ್ನೂ ಓದಿ: ಮಲಬದ್ಧತೆಯನ್ನು ಹೆಚ್ಚಿಸುವ 5 ಅಪಾಯಕಾರಿ ಅಂಶಗಳಿವು

ಕಮೋಡ್​ ಮೇಲೆ ಅಥವಾ ಟಾಯ್ಲೆಟ್​ನಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಮತ್ತು ಮಲವಿಸರ್ಜನೆ ಮಾಡುವ ಸಮಯದಲ್ಲಿ ಅತಿಯಾಗಿ ಶಕ್ತಿ ಹಾಕಿ ಮಲವಿಸರ್ಜಿಸಲು ಪ್ರಯತ್ನಿಸುವುದರಿಂದ ರಕ್ತನಾಳಗಳಲ್ಲಿನ ಒತ್ತಡ ಹೆಚ್ಚುತ್ತದೆ. ಇದು ಮೂಲವ್ಯಾಧಿಗೆ ಕಾರಣವಾಗುತ್ತದೆ.

ಈ ಬಗ್ಗೆ ಅನ್ನಾಲಿ ಇಟಾಲಿಯನ್ ಡಿ ಚಿರುರ್ಜಿಯಾದಲ್ಲಿ ಪ್ರಕಟವಾದ ಅಧ್ಯಯನವು ದೀರ್ಘಕಾಲ ಶೌಚಾಲಯದಲ್ಲಿ ಕುಳಿತುಕೊಳ್ಳುವುದರಿಂದ ಮೂಲವ್ಯಾಧಿ ಉಂಟಾಗುವ ಸಾಧ್ಯತೆ ಹೆಚ್ಚು. ಮೂಲವ್ಯಾಧಿ ಹೊಂದಿರುವ 52 ಸ್ಥೂಲಕಾಯದ ರೋಗಿಗಳನ್ನು ವಿಶ್ಲೇಷಿಸಿದ ನಂತರ ಯಾರಾದರೂ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದರೆ ಅವರ ಮೂಲವ್ಯಾಧಿಯ ಅಪಾಯ ಹೆಚ್ಚು ತೀವ್ರವಾಗಿರುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದರಿಂದ ಫೈಬರ್ ಅಂಶ ಹೆಚ್ಚಿರುವ ಆಹಾರ ಸೇವಿಸುವುದು, ನೀರಿನಂಶವಿರುವ ಆಹಾರ ಸೇವಿಸುವುದು, ದೀರ್ಘಾವಧಿಯವರೆಗೆ ಟಾಯ್ಲೆಟ್​ನಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಮೂಲವ್ಯಾಧಿಯನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರಲು ಏನು ಮಾಡಬೇಕು?

ಇದರೆ ಜೊತೆಗೆ ಗರ್ಭಾವಸ್ಥೆ ಮತ್ತು ಹೆರಿಗೆಯ ಸಮಯದಲ್ಲಾಗುವ ಹಾರ್ಮೋನ್ ಬದಲಾವಣೆಗಳು ಮತ್ತು ಹೆಚ್ಚಿದ ಒಳ ಹೊಟ್ಟೆಯ ಒತ್ತಡದಿಂದಾಗಿ ಮೂಲವ್ಯಾಧಿ ಉಂಟಾಗುವ ಸಾಧ್ಯತೆ ಹೆಚ್ಚು. ಕೆನಡಾದ ಕಾಲೇಜ್ ಆಫ್ ಫ್ಯಾಮಿಲಿ ಫಿಸಿಶಿಯನ್ಸ್‌ನ ಅಧಿಕೃತ ಪ್ರಕಟಣೆಯಲ್ಲಿ ಪ್ರಕಟವಾದ ಅಧ್ಯಯನವು ಅಂದಾಜು ಶೇ. 25-35ರಷ್ಟು ಗರ್ಭಿಣಿಯರು ಮೂಲವ್ಯಾಧಿಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ.

ಮೂಲವ್ಯಾಧಿಯನ್ನು ತಡೆಗಟ್ಟಲು ನೀವು ತೆಗೆದುಕೊಳ್ಳಬಹುದಾದ ಕೆಲವು ಮುನ್ನೆಚ್ಚರಿಕಾ ಕ್ರಮಗಳು ಇಲ್ಲಿವೆ…

– ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಫೈಬರ್ ಹೊಂದಿರುವ ಇತರ ಆಹಾರವನ್ನು ಸೇವಿಸಿ.

– ಸಾಕಷ್ಟು ನೀರು ಮತ್ತು ಇತರ ದ್ರವದ ಆಹಾರಗಳನ್ನು ಸೇವಿಸಿ.

– ಕೊಬ್ಬಿನ ಆಹಾರಗಳು ಮತ್ತು ಆಲ್ಕೋಹಾಲ್ ಅನ್ನು ಮಿತಿಗೊಳಿಸಿ.

– ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ