Eye Health: ಕಣ್ಣಿನ ಆರೋಗ್ಯ ರಕ್ಷಣೆಗೆ ಕೆಲವು ಸರಳ ಸಲಹೆಗಳು

ನಿಮ್ಮ ಸೂಕ್ಷ್ಮ ಕಣ್ಣುಗಳ ಬಗ್ಗೆ ನೀವು ಹೆಚ್ಚು ಗಮನವಹಿಸಲೆಬೇಕು. ನಿಮಗಾಗಿ ವೈದ್ಯರು ತಿಳಿಸಿರುವ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ.

Eye Health: ಕಣ್ಣಿನ ಆರೋಗ್ಯ ರಕ್ಷಣೆಗೆ ಕೆಲವು ಸರಳ ಸಲಹೆಗಳು
ಸಂಗ್ರಹ ಚಿತ್ರ
Edited By:

Updated on: Oct 27, 2021 | 9:52 AM

ಮಕ್ಕಳ ಆನ್​ಲೈನ್​ ಕ್ಲಾಸ್ ಜತೆಗೆ ದೊಡ್ಡವರು ಮನೆಯಲ್ಲಿಯೇ ಕೆಲಸ ಮಾಡುವವರೆಗೆ ನಾವು ಡಿಜಿಟಲ್​ಗೆ ಸಾಕಷ್ಟು ಸಮಯ ಕೊಡುತ್ತಿದ್ದೇವೆ. ಮೊಬೈಲ್, ಕಂಪ್ಯೂಟರ್ ಬಳಕೆ ಹೆಚ್ಚಿದೆ. ಇದರಿಂದ ಕಣ್ಣಿಗೆ ಒತ್ತಡ, ಉರಿಯೂತ ಇಂತಹ ಸಮಸ್ಯೆಗಳು ಹೆಚ್ಚು ಕಾಡುತ್ತಿರಬಹುದು. ಹೀಗಿರುವಾಗ ನಿಮ್ಮ ಸೂಕ್ಷ್ಮ ಕಣ್ಣುಗಳ ಬಗ್ಗೆ ನೀವು ಹೆಚ್ಚು ಗಮನವಹಿಸಲೆಬೇಕು. ನಿಮಗಾಗಿ ವೈದ್ಯರು ತಿಳಿಸಿರುವ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ.

ಆಯುರ್ವೇದ ವೈದ್ಯರಾದ ಡಾ. ನಿತಿಕಾ, ಕಣ್ಣುಗಳ ಆರೋಗ್ಯ ಸುರಕ್ಷತೆಯ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ನಮ್ಮ ಕಣ್ಣುಗಳು ಹೆಚ್ಚು ಒತ್ತಡಕ್ಕೆ ಸಿಲುಕುತ್ತಿವೆ. ಕಳೆದ ಒಂದು ವರ್ಷದಿಂದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆ ಅತಿಯಾಗಿದೆ. ಇದರಿಂದ ತಲೆನೋವು, ಕಣ್ಣಿನ ಕೆಳಗೆ ಕಪ್ಪಾಗುವುದು, ಕಣ್ಣಿಗೆ ಉರಿ ಇಂತಹ ಸಮಸ್ಯೆಗಳು ಕಾಡುತ್ತಿವೆ. ಹೀಗಿರುವಾಗ ಒಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ.

ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಾಯಿಯಲ್ಲಿ ನೀರನ್ನು ತುಂಬಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ. ಕೆಲವು ಸೆಕೆಂಡುಗಳ ಕಾಲ ಹಾಗೇ ಇರಿ. ಬಳಿಕ ಆ ನೀರನ್ನು ಉಗುಳಿ. ಈ ರೀತಿ ಪ್ರತಿದಿನವೂ 2 ರಿಂದ 3 ಬಾರಿ ಪ್ರಯತ್ನಿಸಿ.

ನಿಮ್ಮ ಕಣ್ಣುಗಳು ತಂಪಾದ ನೀರಿನಲ್ಲಿ ತೊಳೆಯಿರಿ. ದಿನಕ್ಕೆ 10 ರಿಂದ 15 ಬಾರಿ ಈ ರೀತಿ ಮಾಡಿ. ರಾತ್ರಿ ವೇಳೆಯಲ್ಲಿಯೂ ತಂಪಾದ ನೀರಿನಲ್ಲಿ ಕಣ್ಣಿಗಳನ್ನು ತೊಳೆದು ನಂತರ ಮಲಗುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಕಣ್ಣಿನ ಮೇಲೆ ಬಿಸಿಯಾದ ಪದಾರ್ಥ ಅಥವಾ ನೀರು ಮತ್ತು ಐಸ್ಅನ್ನು ಎಂದಿಗೂ ಬಳಸಬೇಡಿ. ಉದಾಹರಣೆಗೆ ಬಿಸಿಲಿನ ಬೇಗೆಗೆ ನೀವು ಬೆವತಿದ್ದರೆ ತಣ್ಣೀರನ್ನು ಮುಖಕ್ಕೆ ಚಿಮುಕಿಸುವ ಮೊದಲು ದೇಹ ಹೊಂದಿಕೊಳ್ಳಲು 10 ರಿಂದ 15 ನಿಮಿಷಗಳವರೆಗೆ ಕಾಲಾವಕಾಶ ಕೊಡಿ. ಅಂದರೆ ಬಿಸಿಲಿನ ಬೇಗೆಗೆ ಸುಸ್ತಾದ ದೇಹ ಸ್ವಲ್ಪ ಸಮಾಧಾನವಾಗುವವರೆಗೆ ಸಮಯ ತೆಗೆದುಕೊಳ್ಳಿ. ಬಳಿಕ ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಿ.

ಇದನ್ನೂ ಓದಿ:

Health Tips: ಬಿಸಿ ನೀರು ಕುಡಿಯುವಾಗ ಈ 3 ಪದಾರ್ಥಗಳನ್ನು ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ

Health Tips: ಅತಿಯಾಗಿ ಬಿಸ್ಕತ್ ತಿನ್ನುವವರೇ ಎಚ್ಚರ!; 60 ಬ್ರ್ಯಾಂಡ್​ಗಳ ಬಿಸ್ಕತ್​ನಲ್ಲಿವೆ ಕ್ಯಾನ್ಸರ್​ಕಾರಕ ಅಂಶ