Sleep: ನಿದ್ರೆಯು ತೂಕದ ಮೇಲೆ ಪರಿಣಾಮ ಬೀರುವುದೇ? ತಜ್ಞರು ಏನಂತಾರೆ?

| Updated By: ನಯನಾ ರಾಜೀವ್

Updated on: Sep 27, 2022 | 10:25 AM

ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಿಮ್ಮ ದಿನಚರಿ, ಆಹಾರದಂತೆ ನಿದ್ರೆಯು ಕೂಡ ನಿರ್ಣಾಯಕವಾಗಬಹುದು. ಆದರೆ ನಿದ್ರೆ ಬಗ್ಗೆ ಗಮನಕೊಡದಿರುವವರೇ ಹೆಚ್ಚು

Sleep: ನಿದ್ರೆಯು ತೂಕದ ಮೇಲೆ ಪರಿಣಾಮ ಬೀರುವುದೇ? ತಜ್ಞರು ಏನಂತಾರೆ?
Sleep
Follow us on

ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಿಮ್ಮ ದಿನಚರಿ, ಆಹಾರದಂತೆ ನಿದ್ರೆಯು ಕೂಡ ನಿರ್ಣಾಯಕವಾಗಬಹುದು. ಆದರೆ ನಿದ್ರೆ ಬಗ್ಗೆ ಗಮನಕೊಡದಿರುವವರೇ ಹೆಚ್ಚು, ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್ ಪ್ರಕಾರ, ಪ್ರತಿ ರಾತ್ರಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ತೂಕ ಹೆಚ್ಚಾಗುವುದು, ಸ್ಥೂಲಕಾಯತೆ, ಹೃದ್ರೋಗ, ಖಿನ್ನತೆ ಅಥವಾ ಪಾರ್ಶ್ವವಾಯು ಮುಂತಾದ ಪ್ರತಿಕೂಲ ಆರೋಗ್ಯ ಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚು ನಿದ್ರೆ ಮಾಡುವುದು ಮತ್ತು ನಿದ್ರಾಹೀನತೆ ಎರಡೂ ತೂಕವನ್ನು ಕಳೆದುಕೊಳ್ಳುವ ಸಾಮರ್ಥ್ಯದ ಮೇಲೆ ಸಂಭಾವ್ಯ ಹಾನಿಕಾರಕ ಪರಿಣಾಮಗಳನ್ನು ಬೀರುತ್ತವೆ.

ನಿದ್ರೆ ಮತ್ತು ತೂಕ ನಷ್ಟ
ದೇಹದ ಕೊಬ್ಬು ಮತ್ತು ನಿದ್ರೆಯ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸಾಕಷ್ಟು ಅಧ್ಯಯನಗಳನ್ನು ನಡೆಸಲಾಗಿದೆ. ಪ್ರತಿ ರಾತ್ರಿ ಸರಿಯಾಗಿ ನಿದ್ರೆ ಮಾಡದೇ ಇರುವುದು, ದೇಹದಲ್ಲಿ ಹೆಚ್ಚು ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಕಡಿಮೆ ನಿದ್ರೆಯು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ ಎಂಬುದು ತಿಳಿದುಬಂದಿದೆ.

ನಿದ್ರೆಯ ಅಭಾವ
ಪ್ರತಿ ರಾತ್ರಿ 3 ಗಂಟೆಗಳ ಕಡಿಮೆ ನಿದ್ರೆಯನ್ನು ಪಡೆಯುವುದು (8.5 ಗಂಟೆಗಳ ಬದಲಿಗೆ 5.5 ಗಂಟೆಗಳು) ಸರಿಯಾದ ಆಹಾರವನ್ನು ತೆಗೆದುಕೊಳ್ಳದೇ ಇರುವುದರಿಂದ ತೂಕ ಹೆಚ್ಚಾಗುವುದು, ಅಲ್ಪಾವಧಿಯ ನಿದ್ರಾಹೀನತೆಯು ಹಸಿವಿನ ಹಾರ್ಮೋನ್, ಲೆಪ್ಟಿನ್ ಅನ್ನು ಹೆಚ್ಚಿಸುವ ಮೂಲಕ ಹಸಿವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.

ಅಸಹಜ ನಿದ್ರೆಯ ಮಾದರಿಗಳು ಮತ್ತು ಮೆಟಬಾಲಿಕ್ ಸಿಂಡ್ರೋಮ್ ನಡುವೆ ಪರಸ್ಪರ ಸಂಬಂಧವಿದೆ, ಕಡಿಮೆ ಅಥವಾ ಕಳಪೆ ನಿದ್ರೆಯು ಮೆಟಬಾಲಿಕ್ ಸಿಂಡ್ರೋಮ್ (ಇನ್ಸುಲಿನ್ ಪ್ರತಿರೋಧ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ) ಮತ್ತು ಮಧುಮೇಹದ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ.

ಇನ್ನೊಂದು ಪರಿಣಾಮವೆಂದರೆ ಕಳಪೆ ಇನ್ಸುಲಿನ್, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದ ಅಪಾಯದ ಹೆಚ್ಚಳವಾಗುತ್ತದೆ.
ಆದ್ದರಿಂದ ಒಟ್ಟಾರೆಯಾಗಿ, ಸಾಕಷ್ಟು ನಿದ್ರೆ ಪಡೆಯದಿರುವುದು ನಿಮ್ಮ ತೂಕದ ಮೇಲೆ ಪರಿಣಾಮವನ್ನು ಬೀರುತ್ತದೆ.

ದೇಹದ ತೂಕ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ನೀವು ಸಾಕಷ್ಟು ದಣಿದಿದ್ದೀರಿ ಆದರೂ ನಿಮಗೆ ನಿದ್ರೆ ಬರುತ್ತಿಲ್ಲವೆಂದಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ನಿದ್ರಾಹೀನತೆ ಸಮಸ್ಯೆಯು ತುಂಬಾ ದಿನಗಳ ಕಾಲ ಮುಂದುವರೆದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ