ಇತ್ತೀಚಿನ ದಿನಗಳಲ್ಲಿ ಕತ್ತೆ ಹಾಲು, ಹಾಲಿನ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆನ್ಲೈನ್ನಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತಿದೆ. ಕತ್ತೆಗಳು ಈಕ್ವಿಡೆ ಕುಟುಂಬಕ್ಕೆ ಸೇರಿದ್ದು, ಇದರಲ್ಲಿ ಕುದುರೆಗಳು ಮತ್ತು ಜೀಬ್ರಾಗಳೂ ಸೇರಿವೆ. ಕತ್ತೆ ಹಾಲು ಔಷಧೀಯ ಮತ್ತು ಸೌಂದರ್ಯವರ್ಧಕಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಹಿಂದಿನ ಕಾಲದಲ್ಲಿ ಸಂಧಿವಾತ , ಕೆಮ್ಮು ಮತ್ತು ಗಾಯಗಳಿಗೆ ಚಿಕಿತ್ಸೆಯಾಗಿ ಬಳಸುತ್ತಿದ್ದರು ಎಂದು ತಿಳಿದಿಬಂದಿದೆ. ಕತ್ತೆ ಹಾಲಿನಲ್ಲಿ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೇರಳವಾಗಿದ್ದು, ಆಫ್ರಿಕಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಇದನ್ನು ಕೆಮ್ಮು ಹಾಗೂ ಇತರ ಸಾಂಕ್ರಮಿಕ ಸೋಂಕುಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಹಸುಗಳು, ಆಡುಗಳು, ಕುರಿಗಳು, ಎಮ್ಮೆಗಳು ಮತ್ತು ಒಂಟೆಗಳಂತಹ ಇತರ ಡೈರಿ ಪ್ರಾಣಿಗಳ ಹಾಲಿಗೆ ಹೋಲಿಸಿದರೆ, ಕತ್ತೆ ಹಾಲು ಮಾನವನ ಎದೆ ಹಾಲನ್ನು ಹೋಲುತ್ತದೆ. ಆದ್ದರಿಂದ ಇದನ್ನು 19ನೇ ಶತಮಾನದಲ್ಲಿ ಅನಾಥ ಶಿಶುಗಳಿಗೆ ತಾಯಿಯ ಎದೆಹಾಲಿನ ರೂಪದಲ್ಲಿ ನೀಡಲಾಗುತ್ತಿತ್ತು ಎಂದು ಹೆಲ್ತ್ ಲೈನ್ ಡಾಟ್ ಕಾಮ್ನಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಕತ್ತೆ ಹಾಲಿನಲ್ಲಿರುವ ವಿಟಮಿನ್‌ಗಳು, ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಅಗತ್ಯ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ತಡೆಗೋಡೆಯನ್ನು ಪುನರುತ್ಪಾದಿಸಲು ಮತ್ತು ರಕ್ಷಿಸಲು ಅಗತ್ಯವಾದ ಎಲ್ಲಾ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಹಾಲಿನ ಪ್ರೋಟೀನ್‌ಗಳಿಂದ ಹೆಚ್ಚಿನ ಪ್ರಯೋಜನಗಳು ಬರುತ್ತವೆ. ಕತ್ತೆ ಹಾಲು ಉತ್ತಮ ಮಾಯಿಶ್ಚರೈಸರ್ ಮತ್ತು ಹಾಲಿನ ಸ್ನಾನಕ್ಕೆ ಅತ್ಯುತ್ತಮವಾಗಿದೆ. ನಿಮ್ಮ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುವಲ್ಲಿ ಕತ್ತೆಯ ಹಾಲು ಅತ್ಯಂತ ಉಪಯುಕ್ತವಾಗಿದೆ. ಇದಕ್ಕೆ ಉತ್ತಮ ನಿದರ್ಶನ ಎಂದರೆ ರಾಣಿ ಕ್ಲಿಯೋಪಾತ್ರ ಕತ್ತೆಗಳ ಹಾಲಿನಿಂದ ಸ್ನಾನ ಮಾಡುತ್ತಿದ್ದಳು ಎಂಬ ಬಗ್ಗೆ ಪುಸ್ತಕಗಳಲ್ಲಿ ಉಲ್ಲೇಖವಿದೆ ಹೇಳುತ್ತಾರೆ.
ಇದನ್ನೂ ಓದಿ: ಸೌತೆಕಾಯಿ ತಿನ್ನುವಾಗ ಸಿಪ್ಪೆ ತೆಗೆಯಬೇಡಿ, ಸಿಪ್ಪೆಯಿಂದಲೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ
ಕತ್ತೆ ಹಾಲಿನ ಒಂದು ದೊಡ್ಡ ಅನಾನುಕೂಲವೆಂದರೆ ಇದು ಸಾಕಷ್ಟು ದುಬಾರಿಯಾಗಿದೆ. ಇದಲ್ಲದೇ ಈ ಹಾಲು ಕೆಲವು ದೇಶಗಳಲ್ಲಿ ಮಾತ್ರ ಲಭ್ಯವಿರುವುದರಿಂದ, ಹಾಲನ್ನು ಬಯಸಿದರೆ ಮಾರುಕಟ್ಟೆಯಲ್ಲಿ ಪೌಡರ್ ರೂಪದಲ್ಲಿ ಖರೀದಿಸಬಹುದು. ಆದರೆ ಈ ಪೌಡರ್ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ಹಾಲಿನಲ್ಲಿರುವ ಲಾಕ್ಟೋಸ್ ಅಂಶವು ಹೊಟ್ಟೆ ಉಬ್ಬರ, ಆಸಿಡಿಟಿ ಮುಂತಾದ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:00 am, Thu, 30 March 23