Reuse Plastic Bottles:ನೀವೂ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಸಾಡದಿರಿ ಮರು ಬಳಕೆ ಮಾಡಿ

| Updated By: ಅಕ್ಷತಾ ವರ್ಕಾಡಿ

Updated on: Dec 04, 2022 | 12:43 PM

ನಿಮ್ಮ ಮನೆಯಲ್ಲಿ ಸಾಕಷ್ಟು ಪ್ಲಾಸ್ಟಿಕ್ ಬಾಟಲಿ ಇದೆಯೇ? ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದ ಬುಟ್ಟಿಗೆ ಬಿಸಾಕುವ ಬದಲು ಮರುಬಳಕೆ ಮಾಡಲು ಹಲವು ಮಾರ್ಗಗಳಿವೆ ಎಂದು ನಿಮಗೆ ತಿಳಿದಿದೆಯೇ?

Reuse Plastic Bottles:ನೀವೂ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಸಾಡದಿರಿ ಮರು ಬಳಕೆ ಮಾಡಿ
ಸಾಂದರ್ಭಿಕ ಚಿತ್ರ
Image Credit source: YouTube
Follow us on

ನೀವೂ ಎಲ್ಲಿಗೆ ಹೋದರೂ ನಮ್ಮೊಂದಿಗೆ ನೀರಿನ ಬಾಟಲಿಯೊಂದನ್ನು ತೆಗೆದುಕೊಂಡು ಹೋಗುವ ಅಭ್ಯಾಸ ನಿಮ್ಮಗಿದೆಯೇ? 10, 20 ರೂಪಾಯಿಗಳಿಗೆ ನೀರು ಸುಲಭವಾಗಿ ಲಭ್ಯವಿರುವುದರಿಂದ ಮನೆಯಿಂದ ನೀರನ್ನು ತೆಗೆದುಕೊಂಡು ಹೋಗುವವರು ತೀರಾ ಕಡಿಮೆ. ಜೊತೆಗೆ ಆ ಖಾಲಿ ಬಾಟಲಿಯನ್ನು ಅಲ್ಲೇ ಬಿಸಾಕಿ ಬರುವ ಅಭ್ಯಾಸ. ನಿಮ್ಮ ಮನೆಯಲ್ಲಿ ಸಾಕಷ್ಟು ಪ್ಲಾಸ್ಟಿಕ್ ಬಾಟಲಿ ಇದೆಯೇ? ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಕಸದ ಬುಟ್ಟಿಗೆ ಬಿಸಾಕುವ ಬದಲು ಮರುಬಳಕೆ(Reuse Plastic Bottles) ಮಾಡಲು ಹಲವು ಮಾರ್ಗಗಳಿವೆ ಎಂದು ನಿಮಗೆ ತಿಳಿದಿದೆಯೇ?

ಹಾಗಿದ್ದರೆ ಇನ್ನೂ ಮುಂದೆ ನೀವೂ ಮಾಡಬೇಕಾಗಿರುವುದು ಇಷ್ಟೇ ಖಾಲಿ ಬಾಟಲಿಗಳನ್ನು ಉತ್ತಮ ರೀತಿಯಲ್ಲಿ ಬಳಸಿ.

1. ಪಕ್ಷಿಗಳಿಗೆ ಆಹಾರ ನೀಡಿ:

ಹೌದು ನೀವೂ ಬಳಸಿದ ಪ್ಲಾಸ್ಟಿಕ್ ಬಟಲಿಯನ್ನು ಪಕ್ಷಿಗಳಿಗೆ ಆಹಾರ ಹಾಗೂ ನೀರೂ ನೀಡಲು ಉಪಯೋಗಿಸಿ. ಒಂದು ಖಾಲಿ ಬಟಲಿ ತೆಗೆದುಕೊಂಡು ಅದನ್ನು ಮಧ್ಯದಿಂದ ಎರಡು ಭಾಗಗಳಾಗಿ ಮಾಡಿ ಹಾಗೂ ನಂತರ ಒಂದರಲ್ಲಿ ಅಕ್ಕಿ ಅಥವಾ ಯಾವುದಾದರೂ ಧಾನ್ಯಗಳನ್ನು ಹಾಕಿ ಹಾಗೂ ಇನ್ನೊಂದು ಭಾಗದಲ್ಲಿ ನೀರು ತುಂಬಿಸಿ. ಇದನ್ನು ನಿಮ್ಮ ಮನೆಯ ಮಹಡಿ ಅಥವಾ ಯಾವುದಾದರೊಂದು ಮರಕ್ಕೆ ಕಟ್ಟಿ ಇಡಿ.

ಸಾಂದರ್ಭಿಕ ಚಿತ್ರ

2.ನಿಮ್ಮ ಮನೆಯ ಗಾರ್ಡನ್ ನಲ್ಲಿ ಬಳಸಿ:

ನಿಮ್ಮ ಮನೆಯ ಗಾರ್ಡನ್ ನಲ್ಲಿಯೂ ಖಾಲಿ ಬಾಟಲಿಗಳನ್ನು ಮರುಬಳಕೆ ಮಾಡಬಹುದು. ಅದಕ್ಕಾಗಿ ನೀವೂ ಒಂದು 2 ಲೀಟರ್ ನ ಬಾಟಲಿಯನ್ನು ತೆಗೆದುಕೊಂಡು ಅದರ ಮಧ್ಯಭಾಗದಲ್ಲಿ ಅಲ್ಲಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಿ. ಇದನ್ನು ಗಿಡಗಳ ಮಧ್ಯದಲ್ಲಿ ಇಟ್ಟು ಅದಕ್ಕೆ ನೀರಿನ ಪೈಪ್ ಅನ್ನು ಜೋಡಿಸಿ. ಇದು ಸುತ್ತಲಿನ ಎಲ್ಲಾ ಗಿಡಗಳಿಗೂ ನೀರು ತಲುಪಲು ಸಹಾಯಕವಾಗಿದೆ.

ಸಾಂದರ್ಭಿಕ ಚಿತ್ರ

3. ಮೊಟ್ಟೆಯನ್ನು ಬೇರ್ಪಡಿಸಲು ಬಳಸಿ:

ಬಾಟಲಿಯ ತುದಿಯಿಂದ ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗವನ್ನು ಸುಲಭವಾಗಿ ಬೇರ್ಪಡಿಸಬಹುದಾಗಿದೆ. ಸಾಕಷ್ಟು ಜನರಿಗೆ ಹಸಿ ಮೊಟ್ಟೆಯನ್ನು ಒಡೆಯುವುದು ಹೇಗೆ ಎಂಬುದೇ ಗೊತ್ತಿಲ್ಲ. ಆದ್ದರಿಂದ ಈ ರೀತಿಯ ಟ್ರಿಕ್ಸ್ ಉಪಯೋಗಿಸಿ ಸುಲಭವಾಗಿ ಮೊಟ್ಟೆಯನ್ನು ಬೇರ್ಪಡಿಸಬಹುದು. ಈ ಕೆಳಗಿನ ಚಿತ್ರವನ್ನು ನೋಡಿ.

ಸಾಂದರ್ಭಿಕ ಚಿತ್ರ

4.ಸೋಸುವಿಕೆಯಾಗಿ ಬಳಸಿ:

ದೊಡ್ಡ ದೊಡ್ಡ ಪಾತ್ರೆಗಳಿಂದ ಎಣ್ಣೆ ಅಥವಾ ತೈಲಗಳನ್ನು ಚಿಕ್ಕ ಪಾತ್ರೆಗಳಿಗೆ ಸುರಿಯುವಾಗ ಅದು ಚೆಲ್ಲುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಈ ರೀತಿಯಾಗಿ ಮರುಬಳಕೆ ಮಾಡಬಹುದು. ಈ ಕೆಳಗಿನ ಚಿತ್ರವನ್ನು ನೋಡಿ.

ಸಾಂದರ್ಭಿಕ ಚಿತ್ರ

ಇದನ್ನು ಓದಿ: ಅನಾನಸ್​ ಹಣ್ಣಿನ ಮೇಲಿನ ಎಲೆಗಳನ್ನು ಎಸೆಯುವ ಮುನ್ನ ಯೋಚಿಸಿ, ಇಲ್ಲಿದೆ ಉಪಯೋಗಿಸುವ ಬಗೆ

5. ತಿಂಡಿಗಳಿಗೆ ಆಕೃತಿ ನೀಡಲು:

ಸಾಮಾನ್ಯವಾಗಿ ಕರಿದ ತಿಂಡಿಗಳು ಹಾಗೂ ಇತರ ಯಾವುದೇ ತಿಂಡಿಗಳು ನೋಡಲು ಆಕರ್ಷಕವಾಗಿ ಕಾಣುತ್ತಿದ್ದರೆ ಮಾತ್ರ ಮಕ್ಕಳು ಇಷ್ಟ ಪಟ್ಟು ತಿನ್ನುವುದು. ಆದ್ದರಿಂದ ಬಾಟಲಿಯನ್ನು ಈ ರೀತಿಯಾಗಿ ಮರು ಬಳಕೆ ಮಾಡಬಹುದು. ಅಂದರೆ ನೀವು ತಯಾರಿಸುವ ತಿಂಡಿಯ ಹಿಟ್ಟನ್ನು ಹೂವಿನ ಆಕಾರಕ್ಕೆ ಸುಲಭವಾಗಿ ಮಾಡಬಹುದು. ಈ ಚಿತ್ರವನ್ನೊಮ್ಮೆ ನೋಡಿ.

ಸಾಂದರ್ಭಿಕ ಚಿತ್ರ

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: